Headlines

ಅತ್ತೆ ಅಂದ್ರೆ ಪಂಚಪ್ರಾಣ: ಗಂಡನ ಮನೆಗೆ ಹೊರಟು ನಿಂತ ಮಧುವಣಗಿತ್ತಿ ಅತ್ತೆಯನ್ನು ಬಿಟ್ಟಿರಲಾರದೆ ಗೋಳಾಡಿದ ಪುಟ್ಟ ಕಂದಮ್ಮ | Video Of Niece And Her Mother In Laws Bond Remembers Old Memory To Netizens

ಅತ್ತೆ ಅಂದ್ರೆ ಪಂಚಪ್ರಾಣ: ಗಂಡನ ಮನೆಗೆ ಹೊರಟು ನಿಂತ ಮಧುವಣಗಿತ್ತಿ ಅತ್ತೆಯನ್ನು ಬಿಟ್ಟಿರಲಾರದೆ ಗೋಳಾಡಿದ ಪುಟ್ಟ ಕಂದಮ್ಮ | Video Of Niece And Her Mother In Laws Bond Remembers Old Memory To Netizens



ಅತ್ತೆ ಅಂದ್ರೆ ಪಂಚಪ್ರಾಣ: ಗಂಡನ ಮನೆಗೆ ಹೊರಟು ನಿಂತ ಮಧುವಣಗಿತ್ತಿ ಅತ್ತೆಯನ್ನು ಬಿಟ್ಟಿರಲಾರದೆ ಗೋಳಾಡಿದ ಪುಟ್ಟ ಕಂದಮ್ಮ | Video Of Niece And Her Mother In Laws Bond Remembers Old Memory To Netizens

ಸೋದರತ್ತೆಯ ಮದುವೆಯಲ್ಲಿ, ಆಕೆಯನ್ನು ಗಂಡನ ಮನೆಗೆ ಕಳುಹಿಸಲು ಒಪ್ಪದೆ ಪುಟಾಣಿಯೊಬ್ಬಳು ಬಿಕ್ಕಿ ಬಿಕ್ಕಿ ಅಳುವ ವೀಡಿಯೋವೊಂದು ವೈರಲ್ ಆಗಿದೆ. ಅತ್ತೆ-ಸೊಸೆಯ ಈ ಬಾಂಧವ್ಯವನ್ನು ತೋರಿಸುವ ವೀಡಿಯೋ, ಅನೇಕರನ್ನು ಭಾವುಕರನ್ನಾಗಿಸಿ ಅವರ ಬಾಲ್ಯದ ನೆನಪುಗಳನ್ನು ಕೆದಕಿದೆ.

ಗಂಡನ ಮನೆಗೆ ಹೋಗಬೇಡ ಎಂದು ಸೋದರತ್ತೆಯನ್ನು ತಬ್ಬಿ ಹಿಡಿದು ಅತ್ತ ಮುದ್ದು ಸೊಸೆ

ಮನೆಯಲ್ಲಿ ಇನ್ನೂ ಮದುವೆಯಾಗದ ಅಥವಾ ಮದುವೆ ಹೊಸ್ತಿಲಲ್ಲಿರುವ ಅಪ್ಪನ ತಂಗಿಯರು(ಸೋದರತ್ತೆ) ಹಾಗೂ ಅಜ್ಜಿ ಮನೆಯಲ್ಲಿರುವ ಅಮ್ಮನ ತಂಗಿಯರೆಂದರೆ ಪುಟ್ಟ ಮಕ್ಕಳಿಗೆ ತುಂಬಾ ಪ್ರೀತಿ. ಅವರನ್ನು ಪುಟ್ಟ ಮಕ್ಕಳು ಬಹಳ ಹಚ್ಚಿಕೊಂಡಿರುತ್ತಾರೆ. ಅಪ್ಪ ಅಮ್ಮನ ಹೊರತಾಗಿ ಮನೆಯಲ್ಲಿ ಒಡನಾಡಿಗಳಂತೆ ಇರುವ ಇವರನ್ನು ಮಕ್ಕಳು ತುಂಬಾ ಹಚ್ಚಿಕೊಂಡಿರುತ್ತಾರೆ. ಅಜ್ಜಿ ಮನೆಗೆ ಹೋದಾಗ ಚಿಕ್ಕಮ್ಮ ಮನೆಯಲ್ಲಿರುವಾಗ ಅತ್ತೆ ತೋರುವ ಪ್ರೀತಿಯನ್ನು ಮಕ್ಕಳು ಯಾವತ್ತೂ ಮರೆಯುವುದಿಲ್ಲ, ಹೀಗಿರುವಾಗ ಅತ್ತೆಯನ್ನು ಮದುವೆ ಮಾಡಿ ಕೊಡುವ ಸಮಯದಲ್ಲಿ ಪುಟ್ಟ ಮಕ್ಕಳು ಆಕೆಯನ್ನು ಗಂಡನ ಮನೆಗೆ ಕಳುಹಿಸುವುದಕ್ಕೆ ಒಪ್ಪದೇ ಬಿಕ್ಕಿ ಬಿಕ್ಕಿ ಅಳುವ ವೀಡಿಯೋಗಳು ಆಗಾಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗ್ತಿರ್ತವೆ. ಹಾಗೆಯೇ ಇಲ್ಲೊಂದು ಅತ್ತೆ ಸೊಸೆಯ ವೀಡಿಯೋವೊಂದು ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗಿದ್ದು, ಅನೇಕರಿಗೆ ಅವರ ಬಾಲ್ಯದ ನೆನಪುಗಳ ಜೊತೆ ತಮ್ಮನ್ನು ತುಂಬಾ ಪ್ರೀತಿ ಮಾಡುತ್ತಿದ್ದ ಸೋದರತ್ತೆಯ ನೆನಪು ಮಾಡುವಂತೆ ಮಾಡಿದೆ.

ಬಾಲ್ಯದ ನೆನಪು ಕೆದಕಿದ ‘ಅತ್ತೆ-ಸೊಸೆಯ’ ಪ್ರೇಮ:

ಸೋದರತ್ತೆಯ ಮದುವೆಯಲ್ಲಿ ಓಡಾಡೋದು ಅಂದರೆ ಅದೇನೋ ಖುಷಿ ಆದರೆ ಆಕೆ ಮದುವೆಯಾಗಿ ಗಂಡನ ಮನೆಗೆ ಹೋಗ್ತಾಳೆ, ಇನ್ನೂ ನಮ್ ಜೊತೆ ಆಕೆ ಇರಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ಆಕೆಯ ಮುದ್ದಿನ ಸೊಸೆಯಂದಿರು ಅಳಿಯಂದಿರು(ಅಣ್ಣನ ಮಕ್ಕಳು) ಅಳುವುದಕ್ಕೆ ಶುರು ಮಾಡುತ್ತಾರೆ ಮದುವೆಯ ಸಂಪ್ರದಾಯವೆಲ್ಲಾ ಮುಗಿದ ನಂತರ ಹೆಣ್ಣಿಳಿಸಿಕೊಡುವ ಶಾಸ್ತ್ರ(ವಿದಾಯ ಕೂಟ) ಮಾಡಲಾಗುತ್ತದೆ. ಈ ಸಮಯದಲ್ಲಿ ಹೆಣ್ಣು ಮಕ್ಕಳು ತವರು ಬಿಟ್ಟು ಹೋಗುವ ಬೇಸರದಲ್ಲಿ ಕಣ್ಣಿರಿಟ್ಟರೆ ಮತ್ತೊಂದೆಡೆ ಅವರ ಜೊತೆಗೆ ಇದ್ದ ಸೋದರನ ಪುಟ್ಟ ಮಕ್ಕಳು ಕೂಡ ಅತ್ತೆಯನ್ನು ಗಂಡನ ಮನೆಗೆ ಕಳುಹಿಸಿ ಕೊಡುವುದಕ್ಕೆ ಇಷ್ಟವಿಲ್ಲದೇ ಜೋರಾಗಿ ಅಳುತ್ತಾರೆ.

ಸೋದರತ್ತೆಯ ‘ಬೀಳ್ಕೊಡುಗೆ’ಯ ವೇಳೆ ಬಿಕ್ಕಿ ಬಿಕ್ಕಿ ಅತ್ತ ಪುಟಾಣಿ

ಹಾಗೆಯೇ ಇಲ್ಲಿ ಪುಟಾಣಿಯೊಂದು ಅತ್ತೆಯನ್ನು ತಬ್ಬಿ ಹಿಡಿದುಕೊಂಡು ಜೋರಾಗಿ ಅಳುತ್ತಿದ್ದು, ಈ ವೀಡಿಯೋ ಅನೇಕರನ್ನು ಭಾವುಕರನ್ನಾಗಿಸಿದೆ. PunjabCulture.in ಎಂಬ ಇನ್ಸ್ಟಾ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ವಿಡಿಯೋದಲ್ಲಿ ಪುಟ್ಟ ಮಗುವನ್ನು ಮಧುವಣಗಿತ್ತಿಯ ಧಿರಿಸಿನಲ್ಲಿರುವ ಅತ್ತೆಯನ್ನು ತಬ್ಬಿ ಹಿಡಿದುಕೊಂಡು ಆಕೆಯನ್ನು ಹೋಗುವುದಕ್ಕೆ ಬಿಡದೇ ಬಿಕ್ಕಿ ಬಿಕ್ಕಿ ಅಳುತ್ತಿದೆ. ಮಗುವಿನ ಪೋಷಕರು ವಧುವಿನ ಕುಟುಂಬದವರು ಕೂಡ ಈ ಕ್ಷಣದಲ್ಲಿ ಭಾವುಕರಾಗಿದ್ದು, ಎಲ್ಲರ ಕಣ್ಣಾಲಿಗಳು ತೇವಗೊಂಡಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಮಗುವನ್ನು ಅತ್ತೆಯ ಕೈಯಿಂದ ಬೇರ್ಪಡಿಸುವುದಕ್ಕೆ ಕುಟುಂಬದವರು ಪ್ರಯತ್ನಿಸುವುದನ್ನು ಕಾಣಬಹುದಾಗಿದೆ.

ಇದನ್ನೂ ಓದಿ: ಕಾಡು ಹಂದಿಗಳ ಬೆವರಿಳಿಸಿದ ಹ್ಯೂಮನಾಯ್ಡ್ ರೋಬೋಟ್: ಸಿನಿಮಾ ಶೈಲಿಯಲ್ಲಿ ಹಂದಿ ಬೇಟೆಯಾಡಿದ ಎಡ್ವರ್ಡ್

ವೀಡಿಯೋ ನೋಡಿದ ಒಬ್ಬರು ಈ ಸಂಬಂಧವನ್ನು ಬಣ್ಣಿಸುವುದಕ್ಕೆ ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಆಕೆಯನ್ನು ಅತ್ತೆಯ ಜೊತೆ ಹೋಗುವುದಕ್ಕೆ ಬಿಡಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇಂತಹ ಸಂದರ್ಭಗಳನ್ನು ನೋಡುವುದಕ್ಕೆ ಸಿಗುವುದು ಬಹಳ ಅಪರೂಪ ಏಕೆಂದರೆ ಹೆಣ್ಣು ಮಕ್ಕಳು ಸಣ್ಣವರಿರಲಿ ಅಥವಾ ದೊಡ್ಡವರಿರಲಿ ಗಂಡು ಮಕ್ಕಳಿಗಿಂತ ಮೊದಲೇ ಅವರಿಗೆ ಮದುವೆ ಮಾಡಿರಲಾಗುತ್ತದೆ. ಹೀಗಾಗಿ ಈ ರೀತಿಯ ಅನುಬಂಧ ಏರ್ಪಡುವುದೇ ಬಹಳ ಕಷ್ಟ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ನ್ನ ಮದುವೆಯಲ್ಲಿಯೂ ಕೂಡ ಇದೇ ರೀತಿಯ ಅನುಭವ ಆಗಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಅನೇಕರನ್ನು ಭಾವುಕನ್ನಾಗಿಸಿದೆ.

ಇದನ್ನೂ ಓದಿ: ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯ ದರ್ಬಾರ್: ಟೀಚರ್‌ಗೆ ಗಾಳಿ ಬೀಸಿ ಬೀಸಿ ಸುಸ್ತಾದ ಬಾಲಕ: ವೀಡಿಯೋ ವೈರಲ್



Source link

Leave a Reply

Your email address will not be published. Required fields are marked *