Om Chanting: ‘ಧುರಂಧರ್ 2’ ಶೂಟಿಂಗ್‌ಗೂ ಮುನ್ನ ‘ಓಂ’ಕಾರ ಜಪ: ಶಿವಭಕ್ತನಾದ ನಟ ರಣವೀರ್ ಸಿಂಗ್! | Ranveer Singhs Spiritual Prep For Dhurandhar 2 Included Om Chanting Gvd

Om Chanting: ‘ಧುರಂಧರ್ 2’ ಶೂಟಿಂಗ್‌ಗೂ ಮುನ್ನ ‘ಓಂ’ಕಾರ ಜಪ: ಶಿವಭಕ್ತನಾದ ನಟ ರಣವೀರ್ ಸಿಂಗ್! | Ranveer Singhs Spiritual Prep For Dhurandhar 2 Included Om Chanting Gvd



Om Chanting: ‘ಧುರಂಧರ್ 2’ ಶೂಟಿಂಗ್‌ಗೂ ಮುನ್ನ ‘ಓಂ’ಕಾರ ಜಪ: ಶಿವಭಕ್ತನಾದ ನಟ ರಣವೀರ್ ಸಿಂಗ್! | Ranveer Singhs Spiritual Prep For Dhurandhar 2 Included Om Chanting Gvd

ನಟ ರಣವೀರ್ ಸಿಂಗ್ ಅಪ್ಪಟ ಶಿವಭಕ್ತ. ಪಾತ್ರಕ್ಕಾಗಿ ತಮ್ಮದೇ ಆದ ಹೊಸ ಅಭ್ಯಾಸ, ಪದ್ಧತಿಗಳನ್ನು ರೂಢಿಸಿಕೊಳ್ಳುತ್ತಾರೆ. ‘ಧುರಂಧರ್ 2’ ಸಿನಿಮಾದಲ್ಲಿ ಹಮ್ಜಾ ಪಾತ್ರಕ್ಕೆ ತಯಾರಾಗುವಾಗ, ಪ್ರತಿದಿನ ‘ಓಂ’ಕಾರ ಜಪಿಸುತ್ತಾ ದಿನ ಆರಂಭಿಸುತ್ತಿದ್ದರಂತೆ.

ರಣವೀರ್ ಸಿಂಗ್ ಒಬ್ಬ ಅಪ್ಪಟ ಶಿವಭಕ್ತ. ‘ಧುರಂಧರ್ 2’ ಸಿನಿಮಾದಲ್ಲಿ ಹಮ್ಜಾ ಪಾತ್ರಕ್ಕೆ ತಯಾರಾಗುವಾಗ, ಅವರು ತಮ್ಮ ದಿನವನ್ನು ‘ಓಂ’ಕಾರ ಜಪಿಸುತ್ತಾ ಆರಂಭಿಸುತ್ತಿದ್ದರು. ಸದ್ಯ ರಣವೀರ್, ‘ಧುರಂಧರ್: ದಿ ರಿವೆಂಜ್’ ಚಿತ್ರದ ದೊಡ್ಡ ಯಶಸ್ಸಿನ ಖುಷಿಯಲ್ಲಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹಿಂದಿ ನೆಟ್‌ನ 1000 ಕೋಟಿ ಕ್ಲಬ್ ಸೇರಿದೆ. ದೇಶದಾದ್ಯಂತ ಹಮ್ಜಾ-ಜಸ್‌ಕಿರಾತ್ ಪಾತ್ರಗಳು ಇಷ್ಟೊಂದು ಯಶಸ್ಸು ಗಳಿಸಲು ರಣವೀರ್ ನಟನೆಯೇ ಕಾರಣ ಎಂದು ಜನ ಹೇಳುತ್ತಿದ್ದಾರೆ.

ಶಿವಭಕ್ತ ರಣವೀರ್ ಸಿಂಗ್

ಯಾವುದೇ ಪಾತ್ರವಾದರೂ ಅದರಲ್ಲಿ ಸಂಪೂರ್ಣವಾಗಿ ಮುಳುಗಿಹೋಗಲು ರಣವೀರ್ ಸಿಂಗ್ ಫೇಮಸ್. ಪಾತ್ರಕ್ಕಾಗಿ ತಮ್ಮದೇ ಆದ ಹೊಸ ಅಭ್ಯಾಸ, ಪದ್ಧತಿಗಳನ್ನು ರೂಢಿಸಿಕೊಳ್ಳುತ್ತಾರೆ. ‘ಧುರಂಧರ್’ ಸೆಟ್‌ನಲ್ಲಿ ಅವರು ಆಧ್ಯಾತ್ಮ ಮತ್ತು ಧ್ಯಾನದ ಮೊರೆ ಹೋಗಿದ್ದರು ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ಪ್ರಾಸ್ಥೆಟಿಕ್ ಕಲಾವಿದ ಕರಣ್‌ದೀಪ್ ಸಿಂಗ್ ಹೇಳಿದ್ದಾರೆ.

ಕರಣ್‌ದೀಪ್, ಈ ಚಿತ್ರದ ಪ್ರಾಸ್ಥೆಟಿಕ್ ಕಲಾವಿದರಾಗಿದ್ದು, ‘ಧುರಂಧರ್’ ಚಿತ್ರದಲ್ಲಿ ರಣವೀರ್ ಅವರ ಮೇಕಪ್‌ಗಾಗಿ ಹತ್ತಿರದಿಂದ ಕೆಲಸ ಮಾಡಿದ್ದಾರೆ. ಗಂಟೆಗಟ್ಟಲೆ ಮೇಕಪ್ ಚೇರ್‌ನಲ್ಲಿ ಕೂರುತ್ತಿದ್ದದ್ದು ಕೇವಲ ದೈಹಿಕ ಬದಲಾವಣೆಗೆ ಮಾತ್ರವಲ್ಲ, ಹಮ್ಜಾ ಅಲಿ ಮಜಾರಿ ಪಾತ್ರಕ್ಕೆ ಮಾನಸಿಕವಾಗಿ ಇಳಿದುಹೋಗಲು ಕೂಡಾ ಆಗಿತ್ತು ಎಂದು ಅವರು ವಿವರಿಸುತ್ತಾರೆ.”ಅವರು ಮೊದಲು ತಮ್ಮ ಮನಸ್ಸನ್ನು ಕೇಂದ್ರೀಕರಿಸುತ್ತಿದ್ದರು.

ಧ್ಯಾನ ಮಾಡಲು ಪ್ರಯತ್ನ

ಅವರು ಶಿವನ ಭಕ್ತ. ದಿನವನ್ನು ‘ಓಂ’ಕಾರ ಜಪಿಸುವುದರ ಮೂಲಕ ಶುರು ಮಾಡುತ್ತಿದ್ದರು. ವರ್ಕೌಟ್ ಮುಗಿಸಿ ಬಂದು ‘ಓಂ’ಕಾರ ಕೇಳುತ್ತಿದ್ದರು. ನಾವು ಒಂದು ಗಂಟೆ ಮೇಕಪ್ ಮಾಡುವಾಗಲೆಲ್ಲಾ, ಅವರು ಧ್ಯಾನ ಮಾಡಲು ಪ್ರಯತ್ನಿಸುತ್ತಿದ್ದರು,” ಎಂದು ಕರಣ್‌ದೀಪ್ ಹೇಳಿದ್ದಾರೆ. ಕ್ಯಾಮೆರಾ ಎದುರಿಸಲು ಸಿದ್ಧರಾಗುತ್ತಿದ್ದಂತೆ, ಈ ಆಧ್ಯಾತ್ಮಿಕತೆಯಿಂದ ಸಿಕ್ಕ ಶಕ್ತಿಯು ಬೇರೆಯದೇ ರೀತಿಯ ಎನರ್ಜಿಯಾಗಿ ಬದಲಾಗುತ್ತಿತ್ತು.

ಈ ವಿಷಯವು ರಣವೀರ್ ಸಿಂಗ್ ಅವರ ವೃತ್ತಿಪರತೆಯನ್ನು ಎತ್ತಿ ತೋರಿಸುತ್ತದೆ. ಆಧ್ಯಾತ್ಮಿಕತೆಯಿಂದ ಹಿಡಿದು, ಸಂಗೀತದ ಆಯ್ಕೆಯವರೆಗೆ, ಅವರ ಶಿಸ್ತು ಮತ್ತು ಸಹಜ ಪ್ರವೃತ್ತಿಯ ಸಂಯೋಜನೆಯು ‘ಧುರಂಧರ್’ ಚಿತ್ರಗಳಲ್ಲಿ ಹಮ್ಜಾ ಪಾತ್ರಕ್ಕೆ ಬೇಕಾದ ತೀವ್ರವಾದ ಶಕ್ತಿಯನ್ನು ನೀಡಲು ಸಹಾಯ ಮಾಡಿದೆ.



Source link

Leave a Reply

Your email address will not be published. Required fields are marked *