ಕಾರಲ್ಲಿ ಕೂತು ಜೋರಾಗಿ ಅತ್ತಿದ್ದೆ: ಟಾಪ್ ಆ್ಯಂಕರ್ ಸುಮಾ ಕನಕಲಾ ಕಣ್ಣೀರಿನ ಕಥೆ!

ಕಾರಲ್ಲಿ ಕೂತು ಜೋರಾಗಿ ಅತ್ತಿದ್ದೆ: ಟಾಪ್ ಆ್ಯಂಕರ್ ಸುಮಾ ಕನಕಲಾ ಕಣ್ಣೀರಿನ ಕಥೆ!

ಕಾರಲ್ಲಿ ಕೂತು ಜೋರಾಗಿ ಅತ್ತಿದ್ದೆ: ಟಾಪ್ ಆ್ಯಂಕರ್ ಸುಮಾ ಕನಕಲಾ ಕಣ್ಣೀರಿನ ಕಥೆ!

ಸುಮಾ ಕನಕಲಾ… ಈ ಹೆಸರಿಗೆ ಯಾವುದೇ ಪರಿಚಯ ಬೇಕಿಲ್ಲ. ಅವರ ಎನರ್ಜಿ, ಟೈಮಿಂಗ್ ನೋಡಿದರೆ, ಸುಸ್ತು ಅನ್ನೋ ಪದ ಅವರ ಹತ್ತಿರಕ್ಕೂ ಸುಳಿಯಲ್ಲ ಅನಿಸುತ್ತದೆ. ಆದರೆ ಆ ನಗುವಿನ ಹಿಂದೆ ಎಷ್ಟು ಕಷ್ಟ, ಒತ್ತಡ ಅಡಗಿದೆ ಅಂತ ಗೊತ್ತಾದ್ರೆ ಮನಸ್ಸು ಭಾರವಾಗುತ್ತೆ. ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಸುಮಾ ಈ ಭಾವನಾತ್ಮಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ತೆಲುಗು ಕಿರುತೆರೆ ಲೋಕದಲ್ಲಿ ತಮ್ಮ ಎನರ್ಜಿ, ಟೈಮಿಂಗ್ ಮತ್ತು ಹಾಸ್ಯ ಪ್ರಜ್ಞೆಯಿಂದ ಪ್ರೇಕ್ಷಕರ ಮನಗೆದ್ದವರು ಆ್ಯಂಕರ್ ಸುಮಾ ಕನಕಲಾ.

ಸುಮಾ ಯಾವಾಗಲೂ ನಗುತ್ತಾ, ನಗಿಸುತ್ತಾ ಇರುತ್ತಾರೆ. ವೇದಿಕೆ ಮೇಲೆ ಅವರ ಉತ್ಸಾಹ, ಮಾತುಗಳನ್ನು ನೋಡಿ ಅವರಿಗೆ ಯಾವ ಕಷ್ಟವೂ ಇರಲಿಕ್ಕಿಲ್ಲ ಎಂದು ಹಲವರು ಅಂದುಕೊಳ್ಳುತ್ತಾರೆ. ಆದರೆ, ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಅವರು ತಮ್ಮ ವೃತ್ತಿ ಜೀವನದಲ್ಲಿ ಎದುರಿಸಿದ ಒತ್ತಡ ಮತ್ತು ಸುಸ್ತಿನ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಒಂದು ಕಾಲದಲ್ಲಿ ಸುಮಾ ಸಿಕ್ಕಾಪಟ್ಟೆ ಬ್ಯುಸಿ ಶೆಡ್ಯೂಲ್ ಹೊಂದಿದ್ದರಂತೆ. ಒಂದೇ ದಿನದಲ್ಲಿ ಹಲವು ಕಡೆ ಶೂಟಿಂಗ್, ಗಂಟೆಗಟ್ಟಲೆ ನಿರಂತರವಾಗಿ ನಿಂತು ಮಾತನಾಡುವುದು, ರಿಹರ್ಸಲ್ಸ್, ಲೈವ್ ಕಾರ್ಯಕ್ರಮಗಳನ್ನು ಮಾಡುತ್ತಿದ್ದರಂತೆ.

ಒಂದು ತಿಂಗಳಲ್ಲಿ 50ಕ್ಕೂ ಹೆಚ್ಚು ಎಪಿಸೋಡ್‌ಗಳನ್ನು ಮಾಡುತ್ತಿದ್ದರಂತೆ. ಇದರಿಂದ ದೇಹ ಮಾತ್ರವಲ್ಲ, ಮನಸ್ಸೂ ಸುಸ್ತಾಗುತ್ತಿತ್ತು. ಕೆಲವು ದಿನ ರಾತ್ರಿ 1 ಗಂಟೆಗೆ ಮಲಗಿ, ಮತ್ತೆ ಬೆಳಗ್ಗೆ 5:30ಕ್ಕೆ ಏಳಬೇಕಾದ ಅನಿವಾರ್ಯತೆ ಇತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ. ಇಷ್ಟೆಲ್ಲಾ ಬ್ಯುಸಿ ಇದ್ದರೂ, ಮಕ್ಕಳಿಗೆ ಬೇಕಾದ್ದನ್ನು ಮಾಡಿಕೊಟ್ಟು, ಶೂಟಿಂಗ್ ಗ್ಯಾಪ್‌ನಲ್ಲಿ ಫೋನ್ ಮೂಲಕ ಅವರ ಜೊತೆ ಸಂಪರ್ಕದಲ್ಲಿ ಇರುತ್ತಿದ್ದರಂತೆ. ಆ ಸಂದರ್ಶನದಲ್ಲಿ ಸುಮಾ ಒಂದು ವಿಶೇಷ ದಿನದ ಬಗ್ಗೆ ನೆನಪಿಸಿಕೊಂಡರು.

ಆ ದಿನ ಸತತ ಶೂಟಿಂಗ್‌ನಿಂದಾಗಿ ಅವರು ಸಂಪೂರ್ಣವಾಗಿ ಸುಸ್ತಾಗಿ, ದೇಹ ಸಹಕರಿಸದ ಸ್ಥಿತಿಗೆ ತಲುಪಿದ್ದರಂತೆ. ಹೊರಗಡೆ ಎಂದಿನಂತೆ ನಗುತ್ತಾ ತಮ್ಮ ಕೆಲಸ ಮುಗಿಸಿದರೂ, ಒಳಗೆ ಎಷ್ಟು ಸುಸ್ತಾಗಿತ್ತು ಎಂಬುದು ಯಾರಿಗೂ ತಿಳಿದಿರಲಿಲ್ಲ ಎಂದಿದ್ದಾರೆ. ಶೂಟಿಂಗ್ ಮುಗಿದ ನಂತರ ಕಾರಿನಲ್ಲಿ ಕುಳಿತು ಜೋರಾಗಿ ಅತ್ತುಬಿಟ್ಟರಂತೆ ಸುಮಾ. ಆದರೆ, ಎಷ್ಟೇ ಸುಸ್ತಾದರೂ, ತಮಗೆ ವಿಶ್ರಾಂತಿ ಸಿಕ್ಕಾಗ ಒಂದು 10 ನಿಮಿಷ ರೆಸ್ಟ್ ತೆಗೆದುಕೊಂಡರೆ ಸಾಕು, ಫುಲ್ ರೀಚಾರ್ಜ್ ಆಗಿಬಿಡುತ್ತಾರಂತೆ ಸುಮಾ. ಮತ್ತೆ ಖುಷಿಯಿಂದ ಶೂಟಿಂಗ್‌ಗೆ ಹೋಗುತ್ತಾರಂತೆ.

ನಮ್ಮಂತೆಯೇ ಸಾಮಾನ್ಯ ಮನುಷ್ಯರು

ಹೀಗೆ ಕಡಿಮೆ ವಿಶ್ರಾಂತಿಯಲ್ಲೂ ತಮ್ಮ ದೇಹ ಸಹಕರಿಸುವುದು ಒಂದು ವರ ಎಂದು ಸುಮಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಸುಮಾ ಅವರ ಸಂದರ್ಶನ ನೋಡಿದ ಅನೇಕ ನೆಟ್ಟಿಗರು, "ತೆರೆ ಮೇಲಿನ ನಗುವಿನ ಹಿಂದೆ ಸಾಕಷ್ಟು ಕಷ್ಟಗಳು ಅಡಗಿರುತ್ತವೆ. ಪ್ರೇಕ್ಷಕರಿಗಾಗಿ ಯಾವಾಗಲೂ ನಗುವಿನೊಂದಿಗೆ ಕಾಣಿಸಿಕೊಳ್ಳುವ ನಿರೂಪಕರು, ನಟರು ಕೂಡ ನಮ್ಮಂತೆಯೇ ಸಾಮಾನ್ಯ ಮನುಷ್ಯರು. ಅವರಿಗೂ ಸುಸ್ತು, ಒತ್ತಡ, ಭಾವನೆಗಳಿರುತ್ತವೆ. ಆದರೆ ಅವರ ವೃತ್ತಿಯಿಂದಾಗಿ ಅದನ್ನು ಹೊರಹಾಕುವ ಅವಕಾಶ ಕಡಿಮೆ ಇರುತ್ತದೆ" ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Source link

Leave a Reply

Your email address will not be published. Required fields are marked *