
ಬೆಂಗಳೂರು, ಏಪ್ರಿಲ್ 17: ಸಚಿವ ಸತೀಶ್ ಜಾರಕಿಹೊಳಿ ಅವರು ಭೇಟಿ ಮಾಡಿರುವ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾಧ್ಯಮಗಳಿಗೆ ಮಾಹಿತಿ. ರಸ್ತೆ ಬಗ್ಗೆ ಮಾತಾಡಿದ್ದು, ನೆಲಮಂಗಲದಲ್ಲಿ ಸಮಸ್ಯೆ ಆಗ್ತಿದೆ. ಎರಡನೇದಾಗಿ ರಾಜಕಾರಣದ ಬಗ್ಗೆ ಮಾತಾಡಿದ್ದೇವೆ. ರಾಜ್ಯದ ಅಭಿವೃದ್ಧಿ, ಪಕ್ಷದ ಅಭಿವೃದ್ಧಿಗೆ ಏನು ಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಗಿದೆ. ಇದೇ ವೇಳೆ ಕಾಂಗ್ರೆಸ್ ಮುಸ್ಲಿಂ ನಾಯಕರ ವಿರುದ್ಧ ಹೈಕಮಾಂಡ್ ಕ್ರಮ ಸಂಬಂಧವೂ ಪ್ರತಿಕ್ರಿಯಿಸಿದ ಅವರು, ನನ್ನ ವೈಯಕ್ತಿಕ ವಿಚಾರ ಯಾವುದೂ ಇಲ್ಲ. ಎಲ್ಲವೂ ಪಾರ್ಟಿ ನಿರ್ಧಾರ, ಪಾರ್ಟಿಗೆ ತನ್ನದೇ ಆದ ವರದಿ ಇದೆ. ದೆಹಲಿ ನಾಯಕರ ಸೂಚನೆ ಕ್ರಮ ತೆಗೆದುಕೊಳ್ಳಬೇಕಾಗುತ್ತೆ. ಎಲ್ಲರೂ ನನ್ನ ಮೇಲೆ ಹೇಳಬಹುದು, ಅದರ ಬಗ್ಗೆ ನನಗೆ ಚಿಂತೆ ಇಲ್ಲ. ಪಕ್ಷದ ಶಿಸ್ತಲ್ಲಿ ನಾವು ಕೆಲಸ ಮಾಡುತ್ತೇವೆ. ಎಲ್ಲಾ ವರ್ಗಕ್ಕೆ ನ್ಯಾಯ ಕೊಡುವುದಕ್ಕೆ ಇರೋದೇ ಕಾಂಗ್ರೆಸ್ ಪಕ್ಷ ಎಂದು.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.