Headlines

ಯೋಗೇಶ್ ಗೌಡ ಕೊಲೆ ಕೇಸ್: ಶಾಸಕ ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವವಾಧಿ ಶಿಕ್ಷೆ

ಯೋಗೇಶ್ ಗೌಡ ಕೊಲೆ ಕೇಸ್: ಶಾಸಕ ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವವಾಧಿ ಶಿಕ್ಷೆ


ಧಾರವಾಡ, ಏ.17: ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ನೆನ್ನೆ (ಏ.16) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಪ್ರಕರಣದ 15ನೇ ಆರೋಪಿಯಾಗಿರುವ ಕಾಂಗ್ರೆಸ್ ಶಾಸಕ ವಿನಯ್ ಕರ್ಣಿ ಸೇರಿದಂತೆ 17 ಮಂದಿ ಅಪರಾಧಿಗಳು ಎಂದು ಘೋಷಿಸಲಾಗಿದೆ. ಇದೀಗ ಈ ಸಂಬಂಧ ಶಾಸಕ ವಿನಯ್ ಕುಲಕರ್ಣಿಗೆ ಇಂದು ಶಿಕ್ಷೆಯನ್ನು ಪ್ರಕಟಿಸಲಾಗಿದೆ. ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ನೀಡಿದೆ.

ಇದೊಂದು ಕರ್ನಾಟಕ ರಾಜಕಾರಣದಲ್ಲಿ ಭಾರೀ ದೊಡ್ಡ ಸಂಚಲನ ಮೂಡಿಸಿದೆ. ಇದೀಗ ಅವರ ಶಾಸಕ ಸ್ಥಾನಕ್ಕೂ ಕುತ್ತು ಬಂದಿದೆ. ಕೇಂದ್ರ ಸರ್ಕಾರ ತಂದಿರುವ ಪ್ರಜಾ ಪ್ರತಿನಿಧಿ ಕಾಯ್ದೆಯಡಿಯಲ್ಲಿ ಅವರು ಶಾಸಕ ಸ್ಥಾನದಿಂದ ವಜಾ ಕೂಡ ಮಾಡಿದರು. ಈ ಪ್ರಕರಣದಲ್ಲಿ 21 ಆರೋಪಿಗಳು ಇದ್ದಾರೆ, ಇವರಲ್ಲಿ ಇಬ್ಬರು ಮಾಫಿಸಾಕ್ಷಿ ಇದ್ದಾರೆ. ಈ ಸಂಸ್ಥೆಯ ನ್ಯಾಯಾಲಯ, 19 ಆರೋಪಿಗಳ ದೋಷಿ ಎಂದು ತೀರ್ಪು ನೀಡಿದೆ. E1 ಬಸವರಾಜ ಮುತ್ತಗಿ ಮಾಫಿಸಾಕ್ಷಿಯಾಗಿ ಹೇಳಿಕೆ ನೀಡಿದ್ದರೆ, E17 ಶಿವಾನಂದ ಮಾಫಿ ಸಾಕ್ಷಿಯಾದ ಬಳಿಕವೂ ಪ್ರತಿಕೂಲ ಹೇಳಿಕೆ ನೀಡಿದ್ದಾರೆ. ಹೀಗಾಗಿ ಮತ್ತೆ ಎ17 ಆರೋಪಿಯನ್ನಾಗಿಸುವಂತೆ ಅರ್ಜಿ ಸಲ್ಲಿಸಲಾಗಿದೆ. ಈ ಪ್ರಕರಣದ ಎ 20 ವಾಸುದೇವ ನಿಲೇಕಣಿ, ಎ 21 ಸೋಮಶೇಖರ ಅವರನ್ನ ಬಿಡುಗಡೆಗೆ ನ್ಯಾಯಾಲಯ ಆದೇಶಿಸಿತ್ತು.

ಇನ್ನು ಉಳಿದಂತೆ ಎ2 ವಿಕ್ರಮ್, ಎ3 ಕೀರ್ತಿ ಕುಮಾರ್, ಎ 4 ಸಂದೀಪ್, ಇ5 ವಿನಾಯಕ್, ಇ 6 ಮಹಾಬಲೇಶ್ವರ್ ಅಲಿಯಾಸ್ ಮುದಕ, ಇ 7 ಸಂತೋಷ್, ಎ 8 ದಿನೇಶ್, ಎ 9 ಅಶ್ವಥ್, ಇ 10 ಸುನಿಲ್, ಎ 11 ನಜೀರ್ ಅಹಮದ್, ಎ 12 ಶಾನವಾಜ್, ಎ 13 ಹರ್ಷಿ ಎವಿನತ್, ಎ114 ನೂತನ್, ಎ114 ನೂತನ್ ಚಂದ್ರು ಮಾಮ, ಇ18 ವಿಕಾಸ್ ಕಲಬುರ್ಗಿ, ಎ 19 ಚನ್ನಕೇಶವ ಟಿಂಗರಿಕರ್ ಅವರ ದೋಷಿಗಳು ಎಂದು ಹೇಳಿ, ಶಿಕ್ಷೆಯನ್ನು ನೀಡಿದೆ.

ಇದನ್ನೂ ಓದಿ: ಕೊಲೆ ಅಪರಾಧಿಯ ಶಾಸಕ ಸ್ಥಾನಕ್ಕೂ ಕುತ್ತು: ವಿನಯ್ ಕುಲಕರ್ಣಿ ಮುಂದಿರುವ ಕಾನೂನು ಆಯ್ಕೆಗಳೇನು?

ಇನ್ನು ಪ್ರಕರಣದ ಹಿನ್ನಲೆಗಳೇನು?

2016ರ ಜೂನ್ 15ರಂದು ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ ಅವರನ್ನು ಸಪ್ತಾಪುರ ಬಡಾವಣೆಯ ಜಿಮ್‌ನಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಧಾರವಾಡದ ಉಪನಗರ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಈ ಕೊಲೆ ಆಸ್ತಿ ವಿವಾದದ ವಿಚಾರಕ್ಕಾಗಿ ನಡೆದಿದೆ ಎಂದು ಹೇಳಲಾಗಿದೆ.ಆರು ಜನರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಆದರೆ, ಕೊಲೆಯಾದ ಯೋಗೇಶ್ ಗೌಡ ಕುಟುಂಬದ ಸದಸ್ಯರ ಒತ್ತಾಯದ ಮೇರೆಗೆ 2019ರಲ್ಲಿ ಈ ಪ್ರಕರಣವನ್ನು ತನಿಖೆಗೆ ವಹಿಸಲಾಗಿದೆ. ಬಳಿಕ ತನಿಖೆಯಲ್ಲಿ ಇದು ರಾಜಕೀಯ ಪ್ರೇರಿತ ಕೊಲೆ ಎಂದು ಹೇಳಿತ್ತು. ಅಲ್ಲಿಂದ ಈ ಪ್ರಕರಣ ರಾಜಕೀಯ ತಿರುವು ಇತ್ತು. ಈ ಕೊಲೆಯಲ್ಲಿ ಶಾಸಕ ವಿನಯ್ ಕುಲಕರ್ಣಿ ಕೈವಾಡವಿರುವ ಅನುಮಾನವಾಗಿತ್ತು. 2020ರ ನವೆಂಬರ್ 5ರಂದು ಅಧಿಕಾರಿಗಳು, ವಿನಯ್‌ ಕುಲಕರ್ಣಿ ಅವರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ವಿನಯ್‌ ಕುಲಕರ್ಣಿ ಸೇರಿ ಒಟ್ಟು 21 ಮಂದಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದರ ನಂತರ ವಿನಯ್‌ ಕುಲಕರ್ಣಿ ಜಾಮೀನು ಪಡೆದು ಹೊರಗೆ ಬಂದಿದ್ದರು. ನಂತರದಲ್ಲಿ ಈ ಪ್ರಕರಣವನ್ನು ನ್ಯಾಯಾಲಯಕ್ಕೆ ನೀಡಲಾಗಿದೆ, ಇದೀಗ ಈ ಶಿಕ್ಷೆಯನ್ನು ಘೋಷಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 4:12 pm, ಶುಕ್ರ, 17 ಏಪ್ರಿಲ್ 26



Source link

Leave a Reply

Your email address will not be published. Required fields are marked *