Headlines

Breaking: ವೈದ್ಯಕೀಯ ದಾಖಲೆ ತೋರಿಸಿ ಬ್ಯಾನ್‌ನಿಂದ ಬಚಾವ್‌ ಆದ ರಾಜಸ್ಥಾನ ರಾಯಲ್ಸ್‌ ಮ್ಯಾನೇಜರ್‌, ಬಿಸಿಸಿಐನಿಂದ ಭಾರೀ ದಂಡ | Ipl 2026 Rajasthan Royals Manager Romi Bhinder Fined Mobile Use Dugout Bcci San

Breaking: ವೈದ್ಯಕೀಯ ದಾಖಲೆ ತೋರಿಸಿ ಬ್ಯಾನ್‌ನಿಂದ ಬಚಾವ್‌ ಆದ ರಾಜಸ್ಥಾನ ರಾಯಲ್ಸ್‌ ಮ್ಯಾನೇಜರ್‌, ಬಿಸಿಸಿಐನಿಂದ ಭಾರೀ ದಂಡ | Ipl 2026 Rajasthan Royals Manager Romi Bhinder Fined Mobile Use Dugout Bcci San



Breaking: ವೈದ್ಯಕೀಯ ದಾಖಲೆ ತೋರಿಸಿ ಬ್ಯಾನ್‌ನಿಂದ ಬಚಾವ್‌ ಆದ ರಾಜಸ್ಥಾನ ರಾಯಲ್ಸ್‌ ಮ್ಯಾನೇಜರ್‌, ಬಿಸಿಸಿಐನಿಂದ ಭಾರೀ ದಂಡ | Ipl 2026 Rajasthan Royals Manager Romi Bhinder Fined Mobile Use Dugout Bcci San

ರಾಜಸ್ಥಾನ ರಾಯಲ್ಸ್ ತಂಡದ ಮ್ಯಾನೇಜರ್ ರೋಮಿ ಭಿಂದರ್ ಅವರು ಐಪಿಎಲ್ ಪಂದ್ಯದ ವೇಳೆ ಡಗ್‌ಔಟ್‌ನಲ್ಲಿ ನಿಯಮಬಾಹಿರವಾಗಿ ಮೊಬೈಲ್ ಫೋನ್ ಬಳಸಿದ್ದಕ್ಕಾಗಿ ಬಿಸಿಸಿಐ ದಂಡ ವಿಧಿಸಿದೆ. ಅವರ ಗಂಭೀರ ಆರೋಗ್ಯ ಸಮಸ್ಯೆಯನ್ನು ಪರಿಗಣಿಸಿ ನಿಷೇಧದಂತಹ ಕಠಿಣ ಶಿಕ್ಷೆಯ ಬದಲು ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ.

ಗುವಾಹಟಿ (ಏ.17): ಐಪಿಎಲ್ 2026ರ ಪಂದ್ಯದ ವೇಳೆ ನಿಯಮ ಬಾಹಿರವಾಗಿ ಡಗ್‌ಔಟ್‌ನಲ್ಲಿ ಮೊಬೈಲ್ ಫೋನ್ ಬಳಸಿದ ರಾಜಸ್ಥಾನ ರಾಯಲ್ಸ್ (RR) ತಂಡದ ಮ್ಯಾನೇಜರ್ ರೋಮಿ ಭಿಂದರ್ ಅವರಿಗೆ ಬಿಸಿಸಿಐ (BCCI) ದಂಡ ವಿಧಿಸಿದೆ. ನಿಷೇಧದಂತಹ ಕಠಿಣ ಶಿಕ್ಷೆಯಿಂದ ಅವರು ಪಾರಾಗಿದ್ದರೂ, ಅವರ ಈ ವರ್ತನೆಗೆ ಭಾರಿ ಬೆಲೆ ತೆರಬೇಕಾಗಿದೆ. ಏಪ್ರಿಲ್ 10ರಂದು ಗುವಾಹಟಿಯಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಪಂದ್ಯದ ವೇಳೆ ರೋಮಿ ಭಿಂದರ್ ಅವರು ಆಟಗಾರರ ಡಗೌಟ್‌ನಲ್ಲಿ ಕುಳಿತು ಮೊಬೈಲ್ ಫೋನ್ ಬಳಸುತ್ತಿರುವುದು ಕಂಡುಬಂದಿತ್ತು. ಬಿಸಿಸಿಐನ ಭ್ರಷ್ಟಾಚಾರ ವಿರೋಧಿ ಮತ್ತು ಭದ್ರತಾ ಘಟಕ (ACSU) ಇದನ್ನು ಗಂಭೀರವಾಗಿ ಪರಿಗಣಿಸಿತ್ತು. ವೈರಲ್ ಆದ ಫೋಟೋಗಳಲ್ಲಿ ಭಿಂದರ್ ಫ್ರಿಜ್ ಮುಂದೆ ಕುಳಿತು ಫೋನ್ ಬಳಸುತ್ತಿದ್ದರೆ, ಅವರ ಪಕ್ಕದಲ್ಲೇ ಕುಳಿತಿದ್ದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಕೂಡ ಫೋನ್ ಕಡೆ ನೋಡುತ್ತಿರುವುದು ಪತ್ತೆಯಾಗಿತ್ತು.

ನಿಯಮ ಏನು ಹೇಳುತ್ತದೆ?

PMOA (ಪಿಎಂಒಎ) ನಿಯಮಗಳ ಪ್ರಕಾರ, ತಂಡದ ಮ್ಯಾನೇಜರ್ ಮೊಬೈಲ್ ಬಳಸಲು ಅವಕಾಶವಿದೆ. ಆದರೆ ಅದನ್ನು ಕೇವಲ ಡ್ರೆಸ್ಸಿಂಗ್ ರೂಮ್ ಒಳಗೆ ಮಾತ್ರ ಬಳಸಬೇಕು. ಡಗೌಟ್ ಅಥವಾ ಮೈದಾನದ ಆಸುಪಾಸಿನಲ್ಲಿ ಫೋನ್ ಬಳಸುವುದು ಭ್ರಷ್ಟಾಚಾರ ವಿರೋಧಿ ನೀತಿಯ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಭಿಂದರ್ ಅವರು ನಿಗದಿತ ಸ್ಥಳದ ಹೊರಗೆ ಫೋನ್ ಬಳಸಿ ತಪ್ಪು ಮಾಡಿದ್ದರು.

ಶಿಕ್ಷೆ ಯಾಕೆ ಕಡಿಮೆ ಆಯಿತು?

ಬಿಸಿಸಿಐ ಮೂಲಗಳ ಪ್ರಕಾರ, ಭಿಂದರ್ ಅವರ ನಡವಳಿಕೆಯಲ್ಲಿ ಯಾವುದೇ ದುರುದ್ದೇಶ ಅಥವಾ ಭ್ರಷ್ಟಾಚಾರದ ಕುರುಹು ಕಂಡುಬಂದಿಲ್ಲ. ಅವರು ಕೇವಲ ಅಸಡ್ಡೆಯಿಂದ ಈ ತಪ್ಪು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಅವರ ಗಂಭೀರ ಆರೋಗ್ಯ ಸಮಸ್ಯೆಯನ್ನು ಪರಿಗಣಿಸಿ ಬಿಸಿಸಿಐ ಮೃದು ಧೋರಣೆ ತಳೆದಿದೆ. ರೋಮಿ ಭಿಂದರ್ ಅವರು ತೀವ್ರವಾದ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಒಂದು ಹಂತದಲ್ಲಿ ನಾಗ್ಪುರದ ವೈದ್ಯರು ಅವರ ಬದುಕುಳಿಯುವ ಭರವಸೆಯನ್ನೇ ಕೈಬಿಟ್ಟಿದ್ದರು. ಬಿಸಿಸಿಐ ನೋಟಿಸ್ ನೀಡಿದ 48 ಗಂಟೆಗಳ ಒಳಗಾಗಿ ಭಿಂದರ್ ಅವರು ತಮ್ಮ ವೈದ್ಯಕೀಯ ದಾಖಲೆಗಳೊಂದಿಗೆ ವಿವರಣೆ ನೀಡಿದ್ದಾರೆ ಮತ್ತು ಕ್ಷಮೆಯಾಚಿಸಿದ್ದಾರೆ ಎನ್ನಲಾಗಿದೆ.

ಭಿಂದರ್ ಅವರ ನಡವಳಿಕೆ ಶಿಸ್ತುಬದ್ಧವಾಗಿಲ್ಲದಿದ್ದರೂ, ಅವರ ಆರೋಗ್ಯ ಮತ್ತು ಯಾವುದೇ ದುರುದ್ದೇಶವಿಲ್ಲದ ಕಾರಣಕ್ಕಾಗಿ ಅವರನ್ನು ನಿಷೇಧಿಸುವ ಬದಲು 1 ಲಕ್ಷ ರೂಪಾಯಿ ದಂಡ ಅಥವಾ ಎಚ್ಚರಿಕೆ ನೀಡಿ ಬಿಡಲು ಬಿಸಿಸಿಐ ನಿರ್ಧರಿಸಿದೆ. ಎಸಿಎಸ್‌ಯು (ACSU) ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ.



Source link

Leave a Reply

Your email address will not be published. Required fields are marked *