ಹಾಲಿವುಡ್ ವೇದಿಕೆಯಲ್ಲಿ ಗಾಯತ್ರಿ ಮಂತ್ರ ಪಠಿಸಿದ ಬಾಲಿವುಡ್ ನಟ

ಹಾಲಿವುಡ್ ವೇದಿಕೆಯಲ್ಲಿ ಗಾಯತ್ರಿ ಮಂತ್ರ ಪಠಿಸಿದ ಬಾಲಿವುಡ್ ನಟ


ಸಿನಿಮಾ (ಸಿನಿಮಾ) ಮಂದಿ, ವೀಶೇಷವಾಗಿ ಬಾಲಿವುಡ್ ನವರು (ಬಾಲಿವುಡ್) ಧರ್ಮ, ಸಂಸ್ಕೃತಿಯಿಂದ ದೂರ. ಅವರದ್ದು ಗ್ಲಾಮರಸ್, ಸ್ಟೈಲಿಸ್ಟ್ ಬದುಕು ಎಂದೆಂದಿಗೂ ತಿಳಿದುಕೊಂಡಿದ್ದಾರೆ. ಆದರೆ ಇದೀಗ ಜನಪ್ರಿಯ ನಟ ವೇದಿಕೆ ಪ್ರತಿಷ್ಠಿತ ಹಾಲಿವುಡ್‌ನಲ್ಲಿ ಗಾಯತ್ರಿ ಮಂತ್ರ ಪಠಿಸಿದ್ದಾರೆ. ಇದೀಗ ವಿಡಿಯೋ ವೈರಲ್ ಆಗಿದ್ದು, ನಟನ ಪ್ರಯತ್ನಕ್ಕೆ ಅನೇಕರು ಭೇಷ್ ವಾತಾವರಣ. ಅಂದಹಾಗೆ ಹಾಲಿವುಡ್ ವೇದಿಕೆಯಲ್ಲಿ ಗಾಯತ್ರಿ ಮಂತ್ರ ಪಠಿಸಿರುವುದು ಬಾಲಿವುಡ್ ಜನಪ್ರಿಯ ನಟ ವಿದ್ಯುತ್ ಜಾಮ್ ವಾಲ್.

ತಮ್ಮ ಅದ್ಭುತ ಫಿಟ್ನೆಸ್ ಮತ್ತು ಮಾರ್ಷಲ್ ಆರ್ಟ್ ಕಲೆಯ ಮೂಲಕ ಜನಪ್ರಿಯವಾಗಿರುವ ಹಾಲಿವುಡ್ ಜಮ್ವಾಲ್ ಮೊದಲ ಬಾರಿಗೆ ಸಿನಿಮಾದಲ್ಲಿ ನಟಿಸಿದ್ದಾರೆ. ಲಾಸ್ ವೇಗಾಸ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ‘ಸಿನೆಮಾಕಾನ್ 2026’ ಅವರು ನಟಿಸಿರುವ ಹಾಲಿವುಡ್ ಸಿನಿಮಾ ‘ಸ್ಟ್ರೀಟ್ ಫೈಟರ್’ನ ಪ್ರಚಾರದಲ್ಲಿ ಅವರು ಭಾಗಿ ಆಗಿದ್ದರು. ಈ ವೇಳೆ ಜಾಗತಿಕ ವೇದಿಕೆಯಲ್ಲಿ ಗಾಯತ್ರಿ ಮಂತ್ರ ಪ್ರತಿಧ್ವನಿಸುವಂತೆ ಮಾಡಲಾಗಿದೆ.

ವಿಶ್ವಪ್ರಸಿದ್ಧ ವಿಡಿಯೋ ಗೇಮ್ ಸರಣಿ ‘ಸ್ಟ್ರೀಟ್ ಫೈಟರ್’ ಆಧರಿತ ಈ ಸಿನಿಮಾದಲ್ಲಿ ವಿದ್ಯುತ್ ಅವರು ಐಕಾನಿಕ್ ಯೋಗ ಮಾಸ್ಟರ್ ‘ಧಲ್ಸಿಮ್’ ಪಾತ್ರವನ್ನು ನಿರ್ವಹಿಸಿದ್ದಾರೆ. ಇತ್ತೀಚೆಗಷ್ಟೇ ಸಿನಿಮಾದ ಟ್ರೈಲರ್ ಸಹ ಬಿಡುಗಡೆ ಆಗಿದೆ. ಸಿನಿಮಾಕಾನ್ 2026ರಲ್ಲಿ ಸಿನಿಮಾದ ತಂಡ ಸೇರಿ ಪ್ರಚಾರ ಕಾರ್ಯದಲ್ಲಿ ಭಾಗಿ ಆಗುತ್ತಿದೆ. ಕಾರ್ಯಕ್ರಮದ ವೇಳೆ ವಿದ್ಯುತ್ ಅವರು ಇತರ ನಟರ ಅನುಮತಿ ಪಡೆದು ಕಣ್ಣುಮುಚ್ಚಿ ಸೂರ್ಯ ಮಂತ್ರ, ಚಂದ್ರ ಮಂತ್ರ ಮತ್ತು ಗಾಯತ್ರಿ ಮಂತ್ರವನ್ನು ಭಕ್ತಿಯಿಂದ ಪಠಿಸಿದರು. ವಿಶೇಷವೆಂದರೆ, ವೇದಿಕೆಯಲ್ಲಿದ್ದ ಅವರ ಸಹನಟರಾದ ಸೆಂಟಿನಿಯೊ ಸೇರಿದಂತೆ ಇತರ ಜಾಗತಿಕ ತಾರೆಗಳು ಕೂಡ ವಿದ್ಯುತ್ ಅವರಿಗೆ ಸಾಥ್ ನೀಡಿ ಮೌನ ಪ್ರಾರ್ಥನೆಯಲ್ಲಿ ಪ್ರಾರ್ಥಿಸಿದರು.

ಇದನ್ನೂ ಓದಿ:ನನ್ನನ್ನು ಕೆಟ್ಟದಾಗಿ ಮುಟ್ಟಿದರು: ಕನ್ನಡದಲ್ಲಿ ನಟಿಸಿದ ನಟಿಯಿಂದ ಆರೋಪ

ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ವಿದ್ಯುತ್ ಜಾಮ್ವಾಲ್, ‘ವಿಶ್ವದ ಅತ್ಯಂತ ಗದ್ದಲದ ಮತ್ತು ಲವಲವಿಕೆಯ ನಗರಗಳಲ್ಲಿ ಒಂದಾದ ಲಾಸ್ ವೇಗಾಸ್ನ ‘ಸಿನೆಮಾಕಾನ್’ ವೇದಿಕೆಯಲ್ಲಿ ಪ್ರಾರ್ಥನೆ ಸಲ್ಲಿಸುವ ಗೌರವ ನನಗೆ ಇದೆ. ನಾನು ಪಠಿಸಿದ ಭಾರತೀಯ ಮಂತ್ರಗಳು ಅಲ್ಲಿನ ಗದ್ದಲದ ನಡುವೆ ಒಂದು ನಿಶ್ಯಬ್ದವನ್ನು, ಶಾಂತಿ ಮತ್ತು ಮೌನದ ಅಲೆಯನ್ನು ಸೃಷ್ಟಿಸಿದವು. ಆ ಕ್ಷಣದಲ್ಲಿ ಆ ಸಭಾಂಗಣದಲ್ಲಿದ್ದ ಪ್ರತಿಯೊಬ್ಬರ ಜೊತೆ ನಾನು ಪದಗಳಿಲ್ಲದ, ಭಾಷೆಯ ಗಡಿ ಮೀರಿದ ಒಂದು ಆಳವಾದ ಬಾಂಧವ್ಯವನ್ನು ಅನುಭವಿಸಿದೆ. ನಾವೆಲ್ಲರೂ ಒಂದೇ ಎಂಬ ಭಾವನೆ ನಮ್ಮನ್ನು ಬೆಸೆದಿತ್ತು. ಜಾಗತಿಕ ಸಾಮರಸ್ಯದ ಈ ದರ್ಶನವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಅವಕಾಶ ಸಿಕ್ಕಿದ್ದು ನನ್ನ ಪಾಲಿನ ದೊಡ್ಡ ಭಾಗ್ಯ.’ ಎಂದು ವಿದ್ಯುತ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಕಿಟಾವೊ ಸಕುರೈ ನಿರ್ದೇಶನದ ‘ಸ್ಟ್ರೀಟ್ ಫೈಟರ್’ ಚಿತ್ರದಲ್ಲಿ ನೋವಾ ಸೆಂಟಿನಿಯೊ, ಜೇಸನ್ ಮೊಮೊವಾ, ಆಂಡ್ರ್ಯೂ ಕೋಜಿ ಮತ್ತು ಕುರ್ಟಿಸ್ ’50 ಸೆಂಟ್’ ಜಾಕ್ಸನ್ ಅಂತಹ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಈ ಸಾಹಸಮಯ ಸಿನಿಮಾವು ಇದೇ ವರ್ಷದ ಅಕ್ಟೋಬರ್ 16 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ತಮ್ಮ ಮೊದಲ ಹಾಲಿವುಡ್ ಸಿನಿಮಾದ ಪಯಣವನ್ನು ಪ್ರಾರ್ಥನೆಯೊಂದಿಗೆ ಆರಂಭಿಸಿದ ವಿದ್ಯುತ್ ಅವರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *