ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಕಾಂಬಿನೇಷನ್‌ನ ಬಹುನಿರೀಕ್ಷಿತ ‘ಜೈಲರ್ 2’ (ಜೈಲರ್ 2) ಶೂಟಿಂಗ್ ಸೆಟ್‌ನ ವಿಡಿಯೋವೊಂದು ಲೀಕ್ ಆಗಿದೆ. ಇದರಿಂದ ಚಿತ್ರತಂಡಕ್ಕೆ ದೊಡ್ಡ ತಲೆನೋವು ಶುರವಾಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ನಿರ್ಮಾಣ ಸಂಸ್ಥೆಯಾದ ‘ಸನ್ ಪಿಕ್ಚರ್ಸ್’ (ಸನ್ ಪಿಕ್ಚರ್ಸ್) ನೀಡಿದೆ. ಪ್ರತಿಕ್ರಿಯೆ ವಿಡಿಯೋ ಹಂಚಿಕೊಳ್ಳುವವರ ವಿರುದ್ಧ ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ.
‘ಜೈಲರ್ 2’ ಸಿನಿಮಾದ ಸೆಟ್‌ನಲ್ಲಿ ಚಿತ್ರೀಕರಿಸಲಾದ ಸಣ್ಣ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡುತ್ತಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ‘ಸನ್ ಪಿಕ್ಚರ್ಸ್’ ವಕ್ತಾರರು, ‘ನಮ್ಮ ಆಯಂಟಿ ಪೈರಸಿ ತಂಡವು ಪರಿಸ್ಥಿತಿಯನ್ನು ಗಮನಿಸುತ್ತಿದೆ. ಲೀಕ್ ಆಗಿರುವ ವಿಡಿಯೋಗಳನ್ನು ತೆಗೆದುಹಾಕುವ ಕೆಲಸ ನಡೆಯುತ್ತಿದೆ. ಈ ವಿಡಿಯೋಗಳನ್ನು ಹಂಚಿಕೊಳ್ಳುವ ಅಥವಾ ಪ್ರಚಾರ ಮಾಡುವ ಸಾಮಾಜಿಕ ಜಾಲತಾಣಗಳ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು.
ವಿಶೇಷವಾಗಿ ಅಭಿಮಾನಿಗಳಿಗೆ ಮತ್ತು ಮಾಧ್ಯಮಗಳಿಗೆ ಎಚ್ಚರಿಕೆ ನೀಡಿರುವ ಸಂಸ್ಥೆಯು, ‘ಈ ವಿಡಿಯೋವನ್ನು ಹಂಚಿಕೊಳ್ಳಬೇಡಿ ಅಥವಾ ಮರುಪೋಸ್ಟ್ ಮಾಡಬೇಡಿ. ಇದರಿಂದ ನಿಮ್ಮ ಖಾತೆಗಳು ಸಸ್ಪೆಂಡ್ ಆಗಬಹುದು ಅಥವಾ ನಿರ್ಬಂಧಕ್ಕೆ ಒಳಗಾಗಬಹುದು. ಒಂದು ವೇಳೆ ಖಾತೆ ಸಸ್ಪೆಂಡ್ ಆದರೆ ಅದಕ್ಕೆ ನಿರ್ಮಾಣ ಸಂಸ್ಥೆಯ ಜವಾಬ್ದಾರಿಯಲ್ಲ’ ಎಂದು ಸ್ಪಷ್ಟವಾಗಿ ಹೇಳಿದೆ.
ಏಪ್ರಿಲ್ 9 ರಂದು ನಟ ದಳಪತಿ ವಿಜಯ್ ಅವರ ‘ಜನ ನಾಯಕನ್’ ಚಿತ್ರ ಎಚ್‌ಡಿ ಪ್ರಿಂಟ್ ಆನ್‌ಲೈನ್‌ನಲ್ಲಿ ಸೋರಿಕೆಯಾಗಿತ್ತು. 9 ಜನರನ್ನು ಈ ಪ್ರಕರಣಕ್ಕೆ ಬಂಧಿಸಿದ್ದಾರೆ. ಬಂಧಿತರಲ್ಲಿ ಬೇರೆ ಸಿನಿಮಾದ ಫ್ರೀಲಾನ್ಸ್ ಅಸಿಸ್ಟೆಂಟ್ ಎಡಿಟರ್ ಆಗಿ ಕೆಲಸ ಮಾಡುತ್ತಿರುವುದು ತನಿಖೆಯಲ್ಲಿದೆ.
ಇದನ್ನೂ ಓದಿ: ‘ಜೈಲರ್ 2’ ಸಿನಿಮಾದಲ್ಲಿ ಪವನ್ ಕಲ್ಯಾಣ್? ಶಾರುಖ್ ಮಾಡಬೇಕಿದ್ದ ಪಾತ್ರ ಈಗ ಪವರ್ ಸ್ಟಾರ್ ಪಾಲು
ತಮಿಳು ಚಿತ್ರರಂಗಕ್ಕೆ ಪದೇ ಪದೇ ಲೀಕ್ ಕಾಟ ಎದುರಾಗುತ್ತಿದೆ. ದೊಡ್ಡ ದೊಡ್ಡ ಪ್ರೊಡಕ್ಷನ್ ಕಂಪನಿಗಳನ್ನೇ ಕಿಡಿಗೇಡಿಗಳು ಟಾರ್ಗೆಟ್ ಮಾಡುತ್ತಿದ್ದಾರೆ. ‘ಜನ ನಾಯಕನ್’ ನಂತರ ‘ಜೈಲರ್ 2’ ಸಿನಿಮಾದ ಶೂಟಿಂಗ್ ದೃಶ್ಯವನ್ನು ಸೋರಿಕೆ ಮಾಡಲಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಚಿತ್ರತಂಡಗಳಿಗೆ ತೊಂದರೆ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.