Headlines

RCB vs DC: ಬೆಂಗಳೂರಿನಲ್ಲಿ ಐಪಿಎಲ್, ಸ್ಟೇಡಿಯಂ ಸುತ್ತಮುತ್ತ ಸಂಚಾರ ಬದಲಾವಣೆ, ಪಾರ್ಕಿಂಗ್ ಮಾಹಿತಿ ಇಲ್ಲಿದೆ

RCB vs DC: ಬೆಂಗಳೂರಿನಲ್ಲಿ ಐಪಿಎಲ್, ಸ್ಟೇಡಿಯಂ ಸುತ್ತಮುತ್ತ ಸಂಚಾರ ಬದಲಾವಣೆ, ಪಾರ್ಕಿಂಗ್ ಮಾಹಿತಿ ಇಲ್ಲಿದೆ


ಬೆಂಗಳೂರು, ಏಪ್ರಿಲ್ 18: ಸಿಲಿಕಾನ್ ಸಿಟಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಐಪಿಎಲ್ (ಐಪಿಎಲ್ 2026) ಪಂದ್ಯಾವಳಿಯ ರೋಚಕ ಹಣಾಹಣಿ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಗಳು ಮುಖಾಮುಖಿಯಾಗುತ್ತಿದ್ದವು, ಪಂದ್ಯದ ಯಶಸ್ವಿ ನಿರ್ವಹಣೆ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಬೆಂಗಳೂರು ಸಂಚಾರಿ ಪೊಲೀಸ್ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪೊಲೀಸ್ ಬಂದೋಬಸ್ತ್ ಮತ್ತು ಬಿಗಿ ಕ್ರಮ

ಪಂದ್ಯದ ಭದ್ರತೆಗಾಗಿ ಸುಮಾರು 2000 ಪೊಲೀಸರನ್ನು ನಿಯೋಜಿಸಲಾಗಿದೆ. ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ, ವಿಶೇಷವಾಗಿ ಬ್ಲ್ಯಾಕ್ ಟಿಕೆಟ್ ಮಾರಾಟ ಜಾಲವನ್ನು ಭೇದಿಸಲು 7 ವಿಶೇಷ ತಂಡಗಳನ್ನು ರಚಿಸಲಾಗಿದೆ. ಟಿಕೆಟ್ ಇಲ್ಲದವರ ಬಳಿ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ, ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ತಮ್ಮ ಮೊಬೈಲ್ ಫೋನ್, ಪರ್ಸ್ ಮತ್ತು ಚಿನ್ನಾಭರಣಗಳ ಬಗ್ಗೆ ಜಾಗರೂಕರಾಗಿರಲು ಸೂಚಿಸಲಾಗಿದೆ.

ವಾಹನ ನಿಲುಗಡೆ ಎಲ್ಲೆಲ್ಲಿ?

  • ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ
  • ಸೆಂಟ್ ಜೋಸೆಫ್ ಶಾಲಾ ಮೈದಾನ
  • ಫ್ರೀಡಂ ಪಾರ್ಕ್ (MLCP ಪಾರ್ಕಿಂಗ್)
  • ಕಂಠೀರವ ಕ್ರೀಡಾಂಗಣ (ಹೊಸದಾಗಿ ಸೇರ್ಪಡೆ)
  • ಯು.ಬಿ. ಸಿಟಿ ಮತ್ತು ಗರುಡ ಮಾಲ್ ಪಾರ್ಕಿಂಗ್
  • ಶಿವಾಜಿನಗರ ಬಸ್ ನಿಲ್ದಾಣ (1ನೇ ಮಹಡಿ)

ವಾಹನ ನಿಲುಗಡೆ ನಿಷೇಧಿತ ರಸ್ತೆಗಳು

ಕ್ವೀನ್ಸ್ ರಸ್ತೆ, ಎಂ.ಜಿ. ರಸ್ತೆ (ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ), ಕಬ್ಬನ್ ರಸ್ತೆ, ರಾಜಭವನ ರಸ್ತೆ, ಮ್ಯೂಸಿಯಂ ರಸ್ತೆ, ಕಸ್ತೂರಬಾ ರಸ್ತೆ, ಲಾವೆಲ್ಲೆ ರಸ್ತೆ, ವಿಟ್ಟಲ್ ಮಲ್ಯ ರಸ್ತೆ ಕಬ್ಬನ್ ಪಾರ್ಕ್ ಮತ್ತು ಒಳಗಿನ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಓಲಾ/ಉಬರ್/ಆಟೋ ಪಿಕ್-ಅಪ್ ಪಾಯಿಂಟ್

  • ಬಿಆರ್‌ವಿ ಮೈದಾನ (ಗೇಟ್ ನಂ. 06ರ ಬಳಿ)
  • ಮಾಣಿಕ್ ಶಾ ಪರೇಡ್ ಮೈದಾನ (ಗೇಟ್ ನಂ. 03ರ ಬಳಿ)
  • ಕೇಂದ್ರದ ಪ್ರವೇಶ ದ್ವಾರಗಳ ವಿವರ:
  • ಲಿಂಕ್ ರಸ್ತೆ ಕಡೆಯಿಂದ: ಗೇಟ್ ನಂ. 11 ರಿಂದ 17 ರವರೆಗೆ ಪ್ರವೇಶಕ್ಕೆ ಅವಕಾಶವಿದೆ.
  • ಕಬ್ಬನ್ ರಸ್ತೆ ಕಡೆಯಿಂದ: ಗೇಟ್ ನಂ. ಇ-1 ರಿಂದ ಇ-3 ಮತ್ತು ಇ-18, 19, 22, 23 ರ ಮೂಲಕ ಪ್ರವೇಶಿಸಬಹುದು.
  • ಕ್ವೀನ್ಸ್ ರಸ್ತೆ ಕಡೆಯಿಂದ: ಗೇಟ್ ನಂ. ಇ-5 ಮತ್ತು ಇ-8 ಪ್ರವೇಶಕ್ಕೆ, ಹಾಗೂ ಗೇಟ್ ನಂ. 9 ಮತ್ತು 9ಎ ನಿರ್ಗಮನಕ್ಕೆ ಮಾತ್ರ ಮೀಸಲಿದೆ.
  • ವಿಐಪಿ ಪ್ರವೇಶ: ಗೇಟ್ ನಂ. ಇ-10 ರ ಮೂಲಕ ಆಟಗಾರರು ಮತ್ತು ಗಣ್ಯರಿಗೆ ಅವಕಾಶ ಕಲ್ಪಿಸಲಾಗಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 8:52 am, ಶನಿ, 18 ಏಪ್ರಿಲ್ 26



Source link

Leave a Reply

Your email address will not be published. Required fields are marked *