Headlines

ಪ್ರಶಸ್ತಿ ಸ್ವೀಕಾರ ಸಂದರ್ಭದಲ್ಲಿ ಹೊಂಬಾಳೆ ಫಿಲಂಸ್‌ ಹೆಸರು ಹೇಳದ ರಿಷಬ್‌ ಶೆಟ್ಟಿ | Rishab Shetty Skips Hombale Films Name At Inca Awards Kantara Chapter 1 San

ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ ಚಾಪ್ಟರ್‌ 1’ ಚಿತ್ರಕ್ಕೆ ಐಎನ್‌ಸಿಎ ಪ್ರಶಸ್ತಿ ಲಭಿಸಿದೆ. ಆದರೆ, ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ರಿಷಬ್ ಅವರು ನಿರ್ಮಾಪಕರಾದ ಹೊಂಬಾಳೆ ಫಿಲಂಸ್‌ ಹೆಸರನ್ನು ಉಲ್ಲೇಖಿಸದೇ ಇರುವುದು, ಇಬ್ಬರ ನಡುವಿನ ಭಿನ್ನಾಭಿಪ್ರಾಯದ ವದಂತಿಗೆ ಮತ್ತಷ್ಟು ಪುಷ್ಟಿ ನೀಡಿದೆ.

ಕನ್ನಡಪ್ರಭ ಸಿನಿವಾರ್ತೆ, ಬೆಂಗಳೂರು (ಏ.18): ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ ಚಾಪ್ಟರ್‌ 1’ ಸಿನಿಮಾಕ್ಕೆ ರಾಷ್ಟ್ರಮಟ್ಟದ ಐಎನ್‌ಸಿಎ ಪ್ರಶಸ್ತಿ ಲಭಿಸಿದೆ. ರಿಷಬ್‌ ಅವರಿಗೆ ಅತ್ಯುತ್ತಮ ನಟ, ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಮತ್ತು ‘ಕಾಂತಾರ 1’ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಬಾಚಿಕೊಂಡಿದೆ. ನಾಯಕಿ ರುಕ್ಮಿಣಿ ವಸಂತ್‌ ಅವರಿಗೂ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ.

ಪ್ರಶಸ್ತಿ ಸ್ವೀಕಾರ ಸಂದರ್ಭದಲ್ಲಿ ರಿಷಬ್‌ ಶೆಟ್ಟಿ ಅವರು ಸಿನಿಮಾದ ತಂತ್ರಜ್ಞರಿಗೆ, ಚಿತ್ರತಂಡದವರಿಗೆ ಕೃತಜ್ಞತೆ ಸಲ್ಲಿಸಿದರೂ ಅಪ್ಪಿತಪ್ಪಿಯೂ ನಿರ್ಮಾಪಕರ ಹೆಸರನ್ನಾಗಲೀ, ನಿರ್ಮಾಣ ಸಂಸ್ಥೆಯ ಹೆಸರನ್ನಾಗಲೀ ಹೇಳಲಿಲ್ಲ. ಹೊಂಬಾಳೆ ಫಿಲಂಸ್‌ ಹಾಗೂ ರಿಷಬ್‌ ಶೆಟ್ಟಿ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ವದಂತಿಗೆ ರಿಷಬ್‌ ಅವರ ಈ ನಡೆ ಇನ್ನಷ್ಟು ಪುಷ್ಠಿ ಒದಗಿಸಿದೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಿಷಬ್‌, ‘ಕಾಂತಾರ ಎರಡೂ ಸಿನಿಮಾಗಳು ನಮ್ಮೆಲ್ಲರ ನಾಲ್ಕು ವರ್ಷಗಳ ಪರಿಶ್ರಮದ ಫಲ. ಪ್ರಗತಿ ಶೆಟ್ಟಿ ನನ್ನ ಶಕ್ತಿಯಾಗಿ ನಿಂತು ಈ ಸಿನಿಮಾ ಮಾಡಲು ಸ್ಫೂರ್ತಿಯಾಗಿದ್ದಾರೆ. ಈ ಸಿನಿಮಾವನ್ನು ಕನ್ನಡ ಪ್ರೇಕ್ಷಕರು ಮತ್ತು ನಾನು ನಂಬುವ ದೈವಕ್ಕೆ ಅರ್ಪಣೆ ಮಾಡುವೆ’ ಎಂದರು.

Source link

Leave a Reply

Your email address will not be published. Required fields are marked *