
ಅಮೆರಿಕ ನಿರ್ಬಂಧ ಹೇರಿದ ಹಿನ್ನೆಲೆ ಭಾರತದ ತೈಲ ಸಂಸ್ಕರಣಾ ಕಂಪನಿಗಳು ರಷ್ಯಾದಿಂದ ಹೊಸದಾಗಿ ತೈಲ ಖರೀದಿ ನಿಲ್ಲಿಸಿದೆ. ಅಮೆರಿಕ ನಿರ್ಬಂಧದ ಪರಿಣಾಮ, ಪಾವತಿ ವಿಧಾನ ಕುರಿತ ಗೊಂದಲ ಬಗೆಹರಿಯುವವರೆಗೂ ರಷ್ಯಾದ ರೋಸ್‌ನೆಫ್ಟ್ ಮತ್ತು ಲುಕೋಯಿಲ್‌ನಿಂದ ತೈಲ ಖರೀದಿ ಸ್ಥಗಿತಕ್ಕೆ ನಿರ್ಧರಿಸಿವೆ.
ನವದೆಹಲಿ: ರಷ್ಯಾದ ಎರಡು ಪ್ರಮುಖ ತೈಲ ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ ಹೇರಿದ ಹಿನ್ನೆಲೆ ಭಾರತದ ತೈಲ ಸಂಸ್ಕರಣಾ ಕಂಪನಿಗಳು ರಷ್ಯಾದಿಂದ ಹೊಸದಾಗಿ ತೈಲ ಖರೀದಿ ನಿಲ್ಲಿಸಿದೆ. ಅಮೆರಿಕ ನಿರ್ಬಂಧದ ಪರಿಣಾಮ, ಪಾವತಿ ವಿಧಾನ ಕುರಿತ ಗೊಂದಲ ಬಗೆಹರಿಯುವವರೆಗೂ ರಷ್ಯಾದ ರೋಸ್‌ನೆಫ್ಟ್ ಮತ್ತು ಲುಕೋಯಿಲ್‌ನಿಂದ ತೈಲ ಖರೀದಿ ಸ್ಥಗಿತಕ್ಕೆ ನಿರ್ಧರಿಸಿವೆ.
ದೀರ್ಘ ಕಾಲೀನ ಒಪ್ಪಂದದದ ಬದಲಾಗಿ ಸ್ಪಾಟ್ ಮಾರ್ಕೆಟ್‌ನಿಂದ ತೈಲ ಖರೀದಿ
ಆದರೆ ತಕ್ಷಣದ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ದೀರ್ಘ ಕಾಲೀನ ಒಪ್ಪಂದದದ ಬದಲಾಗಿ ಸ್ಪಾಟ್ ಮಾರ್ಕೆಟ್‌ನಿಂದ ತೈಲ ಖರೀದಿಗೆ ದೇಶದ ಅತಿದೊಡ್ಡ ತೈಲ ಉದ್ಯಮವಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ನಿರ್ಧರಿಸಿದೆ. ಮತ್ತೊಂದೆಡೆ ದೇಶದ ಅತಿದೊಡ್ಡ ಖಾಸಗಿ ತೈಲ ಸಂಸ್ಕರಣ ಘಟಕ ರಿಲಯನ್ಸ್ ಕೂಡ ತಾತ್ಕಾಲಿಕ ಖರೀದಿಯತ್ತ ಒಲವು ತೋರಿದೆ,
ಭಾರತವೇ ಶೇ.40ರಷ್ಟು ತೈಲವನ್ನು ಖರೀದಿಸುತ್ತಿತ್ತು
ರಷ್ಯಾದ ಒಟ್ಟು ತೈಲ ರಫ್ತಿನ ಪ್ರಮಾಣದಲ್ಲಿ ಭಾರತವೇ ಶೇ.40ರಷ್ಟು ತೈಲವನ್ನು ಖರೀದಿಸುತ್ತಿತ್ತು. ಆದರೆ ಕಠಿಣ ನಿಯಮಗಳ ಕಾರಣದಿಂದ ಏಪ್ರಿಲ್- ಸೆಪ್ಟೆಂಬರ್ ನಡುವೆ ಶೇ.8.4ರಷ್ಟು ಕುಸಿದಿತ್ತು. ಇದೀಗ ನಿರ್ಬಂಧದಿಂದಾಗಿ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆಯಿದೆ.