ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಭರದ ಸಿದ್ಧತೆ: ಯಾವಾಗ ಶುರು? ಈ ಬಾರಿಯ ವಿಶೇಷವೇನು?

ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಭರದ ಸಿದ್ಧತೆ: ಯಾವಾಗ ಶುರು? ಈ ಬಾರಿಯ ವಿಶೇಷವೇನು?


ಬೆಂಗಳೂರು, ನವೆಂಬರ್ 14: ಪ್ರಾಚೀನ ಕಡಲೆಕಾಯಿ ಪರಿಷೆ (ಕಡಲೆಕಾಯಿ ಪರಿಷೆ) ಬೆಂಗಳೂರು (ಬೆಂಗಳೂರು) ಒಂದು ದೊಡ್ಡ ಜಾತ್ರೆ. ಪರಿಷೆ ನೋಡುವುದಕ್ಕೆ ನಗರದ ಮೂಲೆ ಮೂಲೆಗಳಿಂದ ಜನ ಬರುತ್ತಾರೆ. ನವೆಂಬರ್ 17 ರಿಂದ 21 ರವರೆಗೆ ಬೆಂಗಳೂರಿನ ಬಸವನಗುಡಿ ಐತಿಹಾಸಿಕ ಕಡಲೆಕಾಯಿ ಪರಿಷೆ ಶುರುವಾಗಿದೆ. ಹೀಗಾಗಿ ಪರಿಷೆಗೆ ಸಿದ್ಧತೆ ಭರದಿಂದ ಶುರುವಾಗಿದೆ. ಬಸವಣ್ಣ ಹಾಗೂ ದೊಡ್ಡಗಣಪತಿ ದೇವಾಲಯದಲ್ಲಿ ಈ ವರ್ಷ ವಿಜೃಂಭಣೆಯಿಂದ ಐತಿಹಾಸಿಕ ಕಡಲೆಕಾಯಿ ಪರಿಷೆ ಆಚರಿಸಲು ನಿರ್ಧರಿಸಲಾಗಿದೆ. ಪ್ರತಿ ವರ್ಷದಂತೆ ಕಡೇ ಕಾರ್ತಿಕ ಮಾಸದ ಕೊನೆಯ ಸೋಮವಾರ ಬಸವನಗುಡಿಯ ಬಸವಣ್ಣ ದೇವಾಲಯದಲ್ಲಿ ಬೆಳಗ್ಗೆ 10ಕ್ಕೆ ಕಡಲೆಕಾಯಿ ಪರಿಷೆಗೆ ಚಾಲನೆ ನೀಡಲಾಗುತ್ತಿದ್ದು, ಪರಿಷೆಗೆ 5 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡುವ ನಿರೀಕ್ಷೆಯಿದೆ.

ಕಾರ್ತಿಕ ಮಾಸದ ಕೊನೆಯ ಸೋಮವಾರ ನಡೆಯುವ ಕಡಲೆಕಾಯಿ ಪರಿಷೆ ಐತಿಹಾಸಿಕ ಹಿನ್ನಲೆಯಲ್ಲಿದೆ. ಪರಿಷೆಗೆ ಜನ ಸೇರುತ್ತಾರೆ.

ಕಡಲೆಕಾಯಿ ಪರಿಷೆ ಐದೇ ದಿನಕ್ಕೆ ಸೀಮಿತಗೊಳಿಸಲು ಬಸವನಗುಡಿ ನಿವಾಸಿಗಳ ಮನವಿ

ಕಡಲೆಕಾಯಿ ಪರಿಷೆಯನ್ನು ಐದು ದಿನಗಳಿಗೆ ಸೀಮಿತಗೊಳಿಸಬೇಕು ಎಂದು ಬಸವನಗುಡಿ ನಿವಾಸಿಗಳು ಮುಜರಾಯಿ ಇಲಾಖೆ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಹೆರಿಟೇಜ್ ಬಸವನಗುಡಿ ರೆಸಿಡೆಂಟ್ಸ್ ವೆಲ್ಫೇರ್ ಫೋರಂನಿಂದ ಪತ್ರ ಬರೆಯಲಾಗಿದೆ.

ಬಸವನಗುಡಿ ನಿವಾಸಿಗಳ ಸಮಸ್ಯೆ ಏನು?

ಕಡಲೆಕಾಯಿ ಮಾರಾಟ ಮಾಡಲು ಬೇರೆ, ಜಿಲ್ಲೆಗಳಿಂದ ವ್ಯಾಪಾರಿಗಳು ಬಂದು ಬಸವನಗುಡಿಯಲ್ಲಿ ಬಿಡಾರ ಹೂಡುತ್ತಾರೆ. ಈ ವ್ಯಾಪಾರಿಗಳಿಗೆ ಯಾವ ಕನಿಷ್ಠ ಸೌಲಭ್ಯವನ್ನೂ ಕಲ್ಪಿಸಲಾಗಿಲ್ಲ. ಅವರ ಶೌಚಕ್ಕೆ ಶೌಚಾಲಯ ಕೂಡ ಇರುವುದಿಲ್ಲ. ಹೀಗಾಗಿ ಅವರೆಲ್ಲಾ ಮನೆ ಮುಂದೆ, ರಸ್ತೆ ಗಲ್ಲಿಗಳಲ್ಲಿ ಬಹಿರ್ದೆಸೆ ಮುಗಿಸಿಕೊಳ್ಳುತ್ತಾರೆ. ರಾಶಿ ಕಸ, ಗಲೀಜಿನಿಂದ ಸಮಸ್ಯೆ ಏನು. ಹೀಗಾಗಿ ಪರಿಷೆಗೆ ಸಕಲ ವ್ಯವಸ್ಥೆ ಮಾಡಿಕೊಡಿ ಎಂದು ನಿವಾಸಿಗಳು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಇದೇ ತಿಂಗಳು ಎರಡೆರಡು ಕಡಲೆಕಾಯಿ ಪರಿಷೆ: ಎಲ್ಲೆಲ್ಲಿ? ಯಾವಾಗ? ಏನು ವಿಶೇಷ?

ಬಸವನಗುಡಿ ಕಡಲೆಕಾಯಿ ಪರಿಷೆ ಈ ಹಿಂದೆ ಮೂರು ದಿನಗಳ ಕಾಲ ನಡೆಯುತ್ತಿತ್ತು. ಆದರೆ ಈ ವರ್ಷ 5 ದಿನಗಳಿಗೆ ಅವಕಾಶ ನೀಡಲಾಗಿದೆ. ಒಟ್ಟಿನಲ್ಲಿ, ಪರಿಷೆಗೆ ಸಿದ್ಧತೆ ಭರದಿಂದ ಸಾಗುತ್ತಿದೆ, ಭರ್ಜರಿಯಾಗಿ ಕಡಲೆಕಾಯಿ ಪರಿಷೆ ಸಂಭ್ರಮಿಸಲು ನಗರವಾಸಿಗಳು ಕಾತರದಿಂದ ಇದ್ದಾರೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *