Headlines

‘ರಾಮಾಯಣ’ ಚಿತ್ರದ ದೊಡ್ಡ ಸ್ಪಾಯ್ಲರ್ ರಿವೀಲ್ ಮಾಡಿ ತಪ್ಪು ಮಾಡಿದ್ರಾ ಯಶ್?

‘ರಾಮಾಯಣ’ ಚಿತ್ರದ ದೊಡ್ಡ ಸ್ಪಾಯ್ಲರ್ ರಿವೀಲ್ ಮಾಡಿ ತಪ್ಪು ಮಾಡಿದ್ರಾ ಯಶ್?


‘ರಾಮಾಯಣ’ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ (ಯಶ್) ಅವರು ರಾವಣನ ಪಾತ್ರ ಮಾಡುತ್ತಿದ್ದಾರೆ, ರಣಬೀರ್ ಕಪೂರ್ ಅವರು ರಾಮನಾಗಿ ಕಾಣಿಸಿಕೊಂಡಿದ್ದಾರೆ. ಸಾಯಿ ಪಲ್ಲವಿ ಅವರದ್ದು ಸೀತೆಯ ಪಾತ್ರ. ಈ ಚಿತ್ರ ಎರಡು ಕಡೆ ತೆರೆಗೆ ಬರಲಿದೆ. ಅದಕ್ಕೂ ಮೊದಲೇ ಯಶ್ ಅವರು ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ರೀತಿ ಸಂದರ್ಶನ ನೀಡುವಾಗ ಅವರು ಒಂದು ಪ್ರಮುಖ ವಿಷಯ ರಿವೀಲ್ ಮಾಡಿದರೇ ಎಂಬ ವಿಷಯ ಚರ್ಚೆಗೆ ಕಾರಣವಾಗಿದೆ. ಆದರೆ, ಅದರ ಅಸಲಿಯತ್ತು ಬೇರೆಯೇ ಇದೆ.

ಯಶ್ ಅವರು ‘ಸಿನಿಮಾಕಾನ್ 2026’ರಲ್ಲಿ ಕಾಣಿಸಿಕೊಂಡು ತಮ್ಮ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಯಶ್ ಅವರಿಗೆ ರಣಬೀರ್ ಕಪೂರ್ ಬಗ್ಗೆ ಕೇಳಲಾಯಿತು. ಆಗ ಯಶ್ ಅವರು ಮಾತನಾಡುತ್ತಾ, ‘ನಾನು ಹಾಗೂ ರಣಬೀರ್ ಕಪೂರ್ ರಾಮಾಯಣದಲ್ಲಿ ಈವರೆಗೆ ಒಟ್ಟಿಗೆ ಕಾಣಿಸಿಕೊಂಡಿಲ್ಲ’ ಎಂದು ಹೇಳಿದ್ದಾರೆ. ಅಂದರೆ, ಮೊದಲ ಭಾಗದಲ್ಲಿ ಒಟ್ಟಿಗೆ ಕಾಣಿಸುವುದಿಲ್ಲ ಎಂದು ಖಚಿತವಾಗಿ ಮಾಡಿದಂತಾಯ್ತು.

ಆದರೆ, ಇದನ್ನು ಬೇರೆ ರೀತಿಯಲ್ಲಿ ಬಣ್ಣಿಸಲಾಗುತ್ತಿದೆ. ‘ಯಶ್ ಹಾಗೂ ರಣಬೀರ್ ಕಪೂರ್ ಮೊದಲ ಪಾರ್ಟ್‌ನಲ್ಲಿ ಇರಲಿದೆ ಎಂದು ನಿರೀಕ್ಷಿಸಿದವರಿಗೆ ಇದು ನಿರಾಸೆ ಮೂಡಿಸಿದೆ. ಯಶ್ ದೊಡ್ಡ ಸ್ಪಾಯ್ಲರ್ ರಿವೀಲ್ ಮಾಡಿದ್ದಾರೆ’ ಎಂದೆಲ್ಲ ಹೇಳಿದರು.

ಇದನ್ನೂ ಓದಿ: ಬೆಂಬಲಿಸಿದವರನ್ನು ಅಮೆರಿಕದಲ್ಲೂ ನೆನಪಿಸಿಕೊಂಡ ಯಶ್

ಆದರೆ, ಅಸಲಿಯತ್ತು ಹಾಗಿಲ್ಲ. ವಾಲ್ಮೀಕಿ ರಾಮಾಯಣದ ಪ್ರಕಾರ, ಲಂಕಾದಲ್ಲಿ ಅಂತಿಮ ಯುದ್ಧ ನಡೆಯುವವರೆಗೂ ರಾಮ ಮತ್ತು ರಾವಣ ಮುಖಾಮುಖಿಯಾಗಲಿಲ್ಲ. ಈ ಸಿನಿಮಾ ಎರಡು ಕಡೆ ಬರಲಿದೆ ಎಂದು ಮೊದಲೇ ಹೇಳಲಾಗಿದೆ. ಹೀಗಿರುವಾಗ ಯಶ್ ಹೇಳಿದ್ದು ಸ್ಪಾಯ್ಲರ್ ಹೇಗಾಯಿತು ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು, ‘ಇವರು ಕ್ಲೈಮ್ಯಾಕ್ಸ್ ನ ಮೊದಲ ಭಾಗದಲ್ಲೇ ನಿರೀಕ್ಷೆ ಮಾಡಿದ್ದಾರೆ’ ಅನಿಸುತ್ತದೆ ಎಂದು ಟೀಕೆ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.

ರಂದು ಪ್ರಕಟಿಸಲಾಗಿದೆ – 8:27 am, ಗುರು, 16 ಏಪ್ರಿಲ್ 26





Source link

Leave a Reply

Your email address will not be published. Required fields are marked *