ಬೆಂಗಳೂರು, ಡಿ.13: ಬೆಂಗಳೂರು ಕೆಂಪೇಗೌಡ ವಿಮಾನದಲ್ಲಿ (ಕೆಂಪೇಗೌಡ ವಿಮಾನ ನಿಲ್ದಾಣ) ಹೊಸ ನಿಯಮ ಜಾರಿಯಲ್ಲಿದೆ. ಇಂದಿನಿಂದ ಟರ್ಮಿನಲ್ 1 ರಲ್ಲಿ ಯಲ್ಲೋ ಬೋರ್ಡ್ ಕಾರುಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಈ ಬಗ್ಗೆ ವಿಮಾನ ನಿಲ್ದಾಣ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಯಲ್ಲೋ ಬೋರ್ಡ್ ಕಾರುಗಳಿಗೆ ಟರ್ಮಿನಲ್ 1ಕ್ಕೆ ಪ್ರವೇಶ ಇರುವುದಿಲ್ಲ. ವಿಮಾನ ನಿಲ್ದಾಣದ ಪಿಕ್ ಆಪ್ ಪಾಯಿಂಟ್‌ನಲ್ಲಿ ಈ ನಿಷೇಧವನ್ನು ಮಾಡಲಾಗಿದೆ. ಅಸಂಘಟಿತ ಯಲ್ಲೋ ಬೋರ್ಡ್ ಕಾರುಗಳಿಗೆ P3, P4 ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇನ್ನು ಈ ಬಗ್ಗೆ ಧ್ವನಿ ವರ್ಧಕ ((ಸಾರ್ವಜನಿಕ ವಿಳಾಸ ವ್ಯವಸ್ಥೆ) ಮೂಲಕ ಪ್ರಯಾಣಿಕರಿಗೆ ಸಿಬ್ಬಂದಿಯಿಂದ ಯಾರೂ ಮಾಹಿತಿ ನೀಡಿಲ್ಲ. ಯಲ್ಲೋ ಬೋರ್ಡ್ ಕಾರುಗಳು P3, P4ರಲ್ಲಿ ಪಾರ್ಕಿಂಗ್ ಮಾಡುವಂತೆ ಏರ್ ಪೋರ್ಟ್ ಸಿಬ್ಬಂದಿ ಸೂಚನೆ ನೀಡಲಾಗಿದೆ. 8 ನಿಮಿಷಕ್ಕಿಂತ ಹೆಚ್ಚಾದರೆ 5 ನಿಮಿಷ ಕಾಲ ನಿಲುಗಡೆಗೆ 150 ರೂ.
ಇಂದಿನಿಂದಲೇ ಈ ನಿಯಮ ಜಾರಿಗೆ ಬರಲಿದೆ. ಈ ಬಗ್ಗೆ ಯಾವುದೇ ಕಾರು ಚಾಲಕರು ಕಿರಿಕಿರಿ ಮಾಡಬಾರದು ಎಂದು ವಿಮಾನ ನಿಲ್ದಾಣದ ಸಿಬ್ಬಂದಿ ಹೇಳಿದ್ದಾರೆ. ಈ ಬಗ್ಗೆ ವಿಮಾನ ನಿಲ್ದಾಣದಲ್ಲಿ ಯಾವುದೇ ಕಿರಿಕಿರಿ ಆಗದಂತೆ ಬಂದೋಬಸ್ತ್ ವಹಿಸುವಂತೆ ಪೊಲೀಸರಿಗೆ ಹೇಳಿದ್ದಾರೆ.
ಇದನ್ನೂ ಓದಿ: ವಿಮಾನ ನಿಲ್ದಾಣಗಳಲ್ಲಿ ಕಳ್ಳತನ ಪ್ರಕರಣ: ಬೆಂಗಳೂರಿಗೆ ದೇಶದಲ್ಲೇ ಮೊದಲನೇ ಸ್ಥಾನ!
ವಿಮಾನ ನಿಲ್ದಾಣಗಳಲ್ಲಿ ಕಳ್ಳತನ ಪ್ರಕರಣ:
ಇಂಡಿಗೋ ವಿಮಾನ ಹಾರಾಟ ರದ್ದಾದ ನಂತರ ಬೆಂಗಳೂರು ಕೆಂಪೇಗೌಡ ವಿಮಾನದಲ್ಲಿ ಹೊಸ ಪಾರ್ಕಿಂಗ್ ನಿಯಮವನ್ನು ಮಾಡಲಾಗಿದೆ. ಇದರಿಂದಲೂ ವಿಮಾನ ನಿಲ್ದಾಣ ದೊಡ್ಡ ಗೊಂದಲ ಸೃಷ್ಟಿಯಾಗಿತ್ತು. ಇದರೊಂದಿಗೆ ಕಳ್ಳತನದ ಪ್ರಕರಣ ಕೂಡ ವಿಮಾನ ನಿಲ್ದಾಣದಲ್ಲಿ ಎಂದು ಹೇಳಲಾಗಿದೆ. ಈ ವರ್ಷ ಭಾರತದಲ್ಲಿನ ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಪ್ರಕ್ರಿಯೆಯ ವೇಳೆ 9 ಕಳ್ಳತನ ಪ್ರಕರಣಗಳು ವರದಿಯಾಗಿದ್ದು, ನಾಲ್ಕು ಪ್ರಕರಣಗಳು ಕೆಐಎಬಿಯಲ್ಲೇ ನಡೆದಿವೆ. ಈ ಮೂಲಕ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ಜನವರಿ 1 ರಿಂದ ನವೆಂಬರ್ 27 ರವರೆಗೆ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಲ್ಕು ಕಳ್ಳತನ ಪ್ರಕರಣಗಳು ನಡೆದಿದ್ದು, ದೆಹಲಿ, ಹೈದರಾಬಾದ್, ಮುಂಬೈ, ನಾಗಪೂರ್ ಮತ್ತು ರಾಜ್‌ಕೋಟ್ ವಿಮಾನ ನಿಲ್ದಾಣಗಳಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ ಎಂದು ವಿಮಾನಯಾನ ರಾಜ್ಯ ಖಾತೆ ಸಚಿವ ಮುರಳೀಧರ ಮೊಹೋಲ್ ಲೋಕಸಭೆಗೆ ಪ್ರಾರಂಭಿಸಲಾಗಿದೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ