ಪಾಟ್ನಾ, ಏಪ್ರಿಲ್ 15: ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ನಿತೀಶ್ ಕುಮಾರ್ ರಾಜೀನಾಮೆ ನೀಡಿದ ನಂತರ ಅವರು ಬಿಹಾರದ ಮೊದಲ ಬಿಜೆಪಿ ಮುಖ್ಯಮಂತ್ರಿ ಇವರಾಗಿದ್ದಾರೆ. ಬಿಹಾರ ರಾಜಕೀಯದಲ್ಲಿ ಇಂದು ಹೊಸ ಯುಗ ಪ್ರಾರಂಭವಾಗಿದ್ದು, ಬಿಜೆಪಿ ನಾಯಕರಿಂದ ಮೊದಲ ಬಾರಿಗೆ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಲಿದ್ದಾರೆ. ಲೋಕ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಸಾಮ್ರಾಟ್ ಚೌಧರಿ ಈ ಐತಿಹಾಸಿಕ ದಾಖಲೆಯನ್ನು ಸ್ಥಾಪಿಸಿದ್ದಾರೆ.ಹೊಸ ಸರ್ಕಾರದ ರೂಪದಲ್ಲಿ, ಜೆಡಿಯು ಕೋಟಾದ ಬಿಜೇಂದ್ರ ಯಾದವ್ ಮತ್ತು ವಿಜಯ್ ಚೌಧರಿ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬಿಹಾರದ ಇತಿಹಾಸದಲ್ಲಿ ಜೆಡಿಯು ಕೋಟಾದ ಇಬ್ಬರು ಉಪಮುಖ್ಯಮಂತ್ರಿಗಳು ಸರ್ಕಾರದ ಭಾಗವಾಗುವುದು ಇದೇ ಮೊದಲು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ