Headlines

ಒಂದೇ ಸೂಜಿ, ಎಲ್ಲರಿಗೂ ಬಳಕೆ, ಪಾಕಿಸ್ತಾನ ಸರ್ಕಾರಿ ಆಸ್ಪತ್ರೆ ನಿರ್ಲಕ್ಶ್ಯಕ್ಕೆ 300ಕ್ಕೂ ಹೆಚ್ಚು ಮಕ್ಕಳಿಗೆ HIV | Pakistan Child Hiv Outbreak Bbc Undercover Exposes Needle Reuse At Taunsa Hospital

ಒಂದೇ ಸೂಜಿ, ಎಲ್ಲರಿಗೂ ಬಳಕೆ, ಪಾಕಿಸ್ತಾನ ಸರ್ಕಾರಿ ಆಸ್ಪತ್ರೆ ನಿರ್ಲಕ್ಶ್ಯಕ್ಕೆ 300ಕ್ಕೂ ಹೆಚ್ಚು ಮಕ್ಕಳಿಗೆ HIV | Pakistan Child Hiv Outbreak Bbc Undercover Exposes Needle Reuse At Taunsa Hospital



ಒಂದೇ ಸೂಜಿ, ಎಲ್ಲರಿಗೂ ಬಳಕೆ, ಪಾಕಿಸ್ತಾನ ಸರ್ಕಾರಿ ಆಸ್ಪತ್ರೆ ನಿರ್ಲಕ್ಶ್ಯಕ್ಕೆ 300ಕ್ಕೂ ಹೆಚ್ಚು ಮಕ್ಕಳಿಗೆ HIV | Pakistan Child Hiv Outbreak Bbc Undercover Exposes Needle Reuse At Taunsa Hospital

ಪಾಕಿಸ್ತಾನದ ಟೌನ್ಸಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯದಿಂದ ನೂರಾರು ಮಕ್ಕಳಿಗೆ ಎಚ್‌ಐವಿ ಸೋಂಕು ತಗುಲಿದೆ. ಬಿಬಿಸಿ ನಡೆಸಿದ ರಹಸ್ಯ ತನಿಖೆಯಲ್ಲಿ, ಕಲುಷಿತ ಸೂಜಿಗಳ ಮರುಬಳಕೆಯಿಂದ ಈ ದುರಂತ ಸಂಭವಿಸಿರುವುದು ಬಯಲಾಗಿದೆ. ಅಧಿಕಾರಿಗಳು ನಿರ್ಲಕ್ಷ್ಯ, ಪಾಕಿಸ್ತಾನ ಸರ್ಕಾರವೇ ಮೌನ.

ಪಾಕಿಸ್ತಾನದ ಟೌನ್ಸಾದ ಸರ್ಕಾರಿ ಆಸ್ಪತ್ರೆಯೊಂದು ರೋಗಿಗಳ ಪಾಲಿಗೆ ದೇಗುಲವಾಗುವ ಬದಲು ಸಾವಿನ ಮನೆಯಾಗಿ ಬದಲಾಗಿದೆ. ರೋಗ ಗುಣಪಡಿಸಬೇಕಾದ ಆಸ್ಪತ್ರೆಯೇ ನೂರಾರು ಅಮಾಯಕ ಮಕ್ಕಳಿಗೆ ಜೀವಹಾನಿಕಾರಕ ಎಚ್‌ಐವಿ (HIV) ಸೋಂಕು ಹರಡಲು ಕಾರಣವಾಗಿದೆ. ಈ ಆಘಾತಕಾರಿ ಸತ್ಯ ಬಿಬಿಸಿ ನಡೆಸಿದ ರಹಸ್ಯ ತನಿಖೆಯಿಂದ ಬಯಲಾಗಿದೆ. ಅಧಿಕಾರಿಗಳು ಕ್ರಮದ ಭರವಸೆ ನೀಡಿದ ಮೇಲೂ ಇಲ್ಲಿನ ಅಸುರಕ್ಷಿತ ವೈದ್ಯಕೀಯ ಪದ್ಧತಿಗಳು ಮಾತ್ರ ಇನ್ನೂ ನಿಂತಿಲ್ಲ!

ಒಂದು ಕುಟುಂಬದ ಕಣ್ಣೀರಿನ ಕಥೆ ಕೇಳಿ!

ಎಂಟು ವರ್ಷದ ಬಾಲಕ ಮೊಹಮ್ಮದ್ ಅಮೀನ್, ಎಚ್‌ಐವಿ ಪಾಸಿಟಿವ್ ಬಂದ ಕೆಲವೇ ದಿನಗಳಲ್ಲಿ ತೀವ್ರ ಜ್ವರ, ನೋವಿನಿಂದ ಬಳಲಿ ಅನ್ಯಾಯವಾಗಿ ನರಳಿ ಸಾವನ್ನಪ್ಪಿದ. ಆ ಬಾಲಕನ ಸಾವು ಕುಟುಂಬವನ್ನು ಕಂಗಾಲಾಗಿಸಿತು. ಇದರ ಬೆನ್ನಲ್ಲೇ, ಅವನ ಸಹೋದರಿ ಅಸ್ಮಾ ಕೂಡ ಎಚ್‌ಐವಿ ಪೀಡಿತಳೆಂದು ಗೊತ್ತಾಗಿ ಕುಟುಂಬಕ್ಕೆ ಆಕಾಶ ಕಳಚಿಬಿದ್ದಂತಾಯ್ತು. ಈ ಇಬ್ಬರೂ ಮಕ್ಕಳಿಗೆ ಆಸ್ಪತ್ರೆಯಲ್ಲಿ ದಿನನಿತ್ಯದ ಚಿಕಿತ್ಸೆ ನೀಡುವಾಗ ಬಳಸಿದ ಕಲುಷಿತ ಸೂಜಿಗಳೇ ಈ ಮಾರಕ ರೋಗಕ್ಕೆ ಕಾರಣವೆಂದು ಕುಟುಂಬದವರು ಆರೋಪಿಸಿದ್ದಾರೆ. ಮಕ್ಕಳಿಗೆ ಹೆಚ್‌ಐವಿ ತಗಲುಬೇಕೆಂದರೆ ತಾಯಿಗೂ ಹೆಚ್‌ಐವಿ ಇರಬೇಕು. ಆದರೆ ತಾಯಿ ಆರೋಗ್ಯವಾಗಿದ್ದಾರೆ, ಹೆಚ್‌ಐವಿ ಇಲ್ಲ. ತಾಯಿಗೆ ಸೋಂಕಿಲ್ಲದಿದ್ದರೂ ಮಕ್ಕಳಿಗೆ ಸೋಂಕು ತಗುಲಿರುವುದು ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಒಂದೇ ವರ್ಷದಲ್ಲಿ 331 ಮಕ್ಕಳು ಎಚ್‌ಐವಿ ಪಾಸಿಟಿವ್

ನವೆಂಬರ್ 2024 ರಿಂದ ಅಕ್ಟೋಬರ್ 2025 ರ ನಡುವೆ ಟೌನ್ಸಾದಲ್ಲಿ ಬರೋಬ್ಬರಿ 331 ಮಕ್ಕಳು ಎಚ್‌ಐವಿ ಪಾಸಿಟಿವ್ ಎಂದು ಪತ್ತೆಯಾಗಿದ್ದಾರೆ. ಹೆಚ್‌ಐವಿ ಪೀಡಿತ 97 ಕುಟುಂಬಗಳನ್ನು ಪರೀಕ್ಷಿಸಿದಾಗ ಕೇವಲ ನಾಲ್ಕು ತಾಯಂದಿರಲ್ಲಿ ಮಾತ್ರ ಸೋಂಕು ಕಂಡುಬಂದಿದೆ. ಅಂದರೆ, ಉಳಿದ ಮಕ್ಕಳಿಗೆ ಸೋಂಕು ಹರಡಿದ್ದು ತಾಯಿಯಿಂದಲ್ಲ, ಬದಲಾಗಿ ಆಸ್ಪತ್ರೆಯ ಕಲುಷಿತ ಸೂಜಿಗಳಿಂದ! ಹೆಚ್‌ಐವಿ ಪೀಡಿತರಿಗೆ ಮಾಡಿದ ಇಂಜೆಕ್ಷನ್ ಸಿರೀಂಜ್‌ಗಳಿಂದಲೇ ಮಕ್ಕಳಿಗೂ ಇಂಜೆಕ್ಷನ್! ಸೂಜಿ ಬದಲಿಸದೇ ಎಲ್ಲರಿಗೂ ಒಂದೇ ಸೂಜಿ ಬಳಸಿದ ಪರಿಣಾಮ ಹೆಚ್‌ಐವಿ ಹರಡಲು ಕಾರಣ. ಅರ್ಧಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಸೋಂಕು ಹರಡಲು ಅಸುರಕ್ಷಿತ ವೈದ್ಯಕೀಯ ಪದ್ಧತಿಗಳೇ ಕಾರಣವೆಂದು ಪ್ರಾಂತೀಯ ಸ್ಕ್ರೀನಿಂಗ್ ಕಾರ್ಯಕ್ರಮವೇ ಪಟ್ಟಿ ಮಾಡಿದೆ.

ಬಿಬಿಸಿ ಕ್ಯಾಮೆರಾದಲ್ಲಿ ಸೆರೆಯಾದ ಭೀಕರ ನಿರ್ಲಕ್ಷ್ಯ!

ಬಿಬಿಸಿ ಪತ್ರಕರ್ತರು 32 ಗಂಟೆಗಳ ಕಾಲ ನಡೆಸಿದ ರಹಸ್ಯ ಚಿತ್ರೀಕರಣದಲ್ಲಿ ಆಸ್ಪತ್ರೆಯ ಸಿಬ್ಬಂದಿಯ ಬೇಜವಾಬ್ದಾರಿ ಸಾಕ್ಷಿ ಸಮೇತ ಸಿಕ್ಕಿಬಿದ್ದಿದೆ. ಒಂದೇ ಔಷಧಿಯ ಬಾಟಲಿಗೆ ಹತ್ತಾರು ಬಾರಿ ವಿವಿಧ ಸಿರಿಂಜ್‌ಗಳನ್ನು ಚುಚ್ಚುವುದು, ಒಬ್ಬ ಮಗುವಿಗೆ ಬಳಸಿದ ಬಾಟಲಿಯನ್ನೇ ಮತ್ತೊಬ್ಬ ಮಗುವಿಗೆ ಬಳಸುವುದು ಇಲ್ಲಿ ಸಾಮಾನ್ಯವಾಗಿದೆ. ವೈದ್ಯಕೀಯ ತಜ್ಞರ ಪ್ರಕಾರ, ಸೂಜಿಯನ್ನು ಬದಲಿಸಿದರೂ ಸಿರಿಂಜ್‌ ಕಲುಷಿತವಾಗಿದ್ದರೆ ವೈರಸ್ ಹರಡುವುದು ಗ್ಯಾರಂಟಿ. ಕೈಗವಸುಗಳಿಲ್ಲದೆ ಇಂಜೆಕ್ಷನ್ ನೀಡುವುದು ಮತ್ತು ವೈದ್ಯಕೀಯ ತ್ಯಾಜ್ಯವನ್ನು ಬೇಕಾಬಿಟ್ಟಿ ಎಸೆಯುವುದು ಇಲ್ಲಿನ ದೈನಂದಿನ ದೃಶ್ಯಗಳಾಗಿವೆ.

ಪಾಕಿಸ್ತಾನ ಸರ್ಕಾರದ ಮೌನ

2025 ರ ಆರಂಭದಲ್ಲಿ ಈ ಪ್ರಕರಣ ಸುದ್ದಿಯಾದಾಗ ಅಂದಿನ ವೈದ್ಯಕೀಯ ಮುಖ್ಯಸ್ಥರನ್ನು ಅಮಾನತು ಮಾಡಲಾಗಿತ್ತು. ಆದರೆ, ಈಗಿನ ಅಧೀಕ್ಷಕರು ತಪ್ಪು ಒಪ್ಪಿಕೊಳ್ಳುವ ಬದಲು ವೀಡಿಯೊ ದೃಶ್ಯಗಳನ್ನೇ ಪ್ರಶ್ನಿಸುತ್ತಿದ್ದಾರೆ. ಪಾಕಿಸ್ತಾನದ ಆರೋಗ್ಯ ವ್ಯವಸ್ಥೆಯಲ್ಲಿ ಇಂಜೆಕ್ಷನ್‌ಗಳ ಅತಿಯಾದ ಬಳಕೆ ಮತ್ತು ತರಬೇತಿಯ ಕೊರತೆ ಈ ಈ ಪರಿಸ್ಥಿತಿಗೆ ಕಾರಣ. ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಯುನಿಸೆಫ್ ಕೂಡ ಈ ಆಸ್ಪತ್ರೆಯ ಕಳಪೆ ನೈರ್ಮಲ್ಯ ಮತ್ತು ವೈದ್ಯಕೀಯ ಉಪಕರಣಗಳ ಮರುಬಳಕೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

ಇದೇ ಮೊದಲಲ್ಲ ಹಿಂದೆಯೂ ನೂರಾರು ಮಕ್ಕಳು ಬಲಿ

ಇದು ಮೊದಲೇನಲ್ಲ; 2019 ರಲ್ಲಿ ಸಿಂಧ್ ಪ್ರಾಂತ್ಯದ ರಾಟೊಡೆರೊದಲ್ಲಿ ಇದೇ ರೀತಿ ನೂರಾರು ಮಕ್ಕಳು ಎಚ್‌ಐವಿಗೆ ಬಲಿಯಾಗಿದ್ದರು. ಇಂದು ಅಸ್ಮಾಳಂತಹ ಮಕ್ಕಳು ಕೇವಲ ರೋಗದೊಂದಿಗೆ ಮಾತ್ರವಲ್ಲದೆ, ಸಮಾಜದ ಕಳಂಕದೊಂದಿಗೂ ಹೋರಾಡುತ್ತಿದ್ದಾರೆ. ಅಸ್ಮಾಳನ್ನು ನೋಡಿದ ಕೂಡಲೇ ನೆರೆಹೊರೆಯವರು ತಮ್ಮ ಮಕ್ಕಳನ್ನು ದೂರ ಕರೆಯುತ್ತಾರೆ. ಆಸ್ಪತ್ರೆಯ ಒಂದೇ ಒಂದು ನಿರ್ಲಕ್ಷ್ಯ, ಒಂದು ಇಡೀ ತಲೆಮಾರಿನ ಬಾಲ್ಯವನ್ನು ಮತ್ತು ಭವಿಷ್ಯವನ್ನು ಕಸಿದುಕೊಂಡಿದೆ.



Source link

Leave a Reply

Your email address will not be published. Required fields are marked *