
ಡಾರ್ಲಿಂಗ್ ಕೃಷ್ಣ ನಟಿಸಿ ಶಶಾಂಕ್ ನಿರ್ದೇಶನ ಮಾಡಿರುವ ‘ಬ್ರ್ಯಾಟ್’ ಸಿನಿಮಾ ಬಿಡುಗಡೆ ಆಗಿ ಉತ್ತಮ ಪ್ರದರ್ಶನ ನೀಡಿತ್ತು. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದೆ. ಈ ಹಿಂದೆಯೇ ಸಿನಿಮಾದ ಕನ್ನಡ ವರ್ಷನ್ ಒಟಿಟಿಗೆ ಬಂದಿತ್ತು. ಈಗ ತೆಲುಗು, ತಮಿಳು ವರ್ಷನ್ ಸಹ ಸೇರಿಸಲಾಗಿದೆ.

ದುಲ್ಕರ್ ಸಲ್ಮಾನ್, ಭಾಗ್ಯಶ್ರೀ ಬೋರ್ಸೆ, ರಾಣಾ ದಗ್ಗುಬಾಟಿ, ಸಮುದ್ರಕಿಣಿ ನಟಿಸಿರುವ ‘ಕಾಂತ’ ಸಿನಿಮಾ ಕೆಲ ವಾರಗಳ ಹಿಂದಷ್ಟೇ ಚಿತ್ರಮಂದಿರಕ್ಕೆ ಬಿಡುಗಡೆ ಆಗಿದ್ದು ಸಿನಿಮಾ ಸಖತ್ ಹಿಟ್ ಆಗಿದೆ. ಸಿನಿಮಾದಲ್ಲಿ ದುಲ್ಕರ್ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದೆ. ನೆಟ್ಫ್ಲಿಕ್ಸ್ನಲ್ಲಿ ಸಿನಿಮಾ ನೋಡಲಾಗಿದೆ.

ಕುನಾಲ್ ಕೇಮು ಮುಖ್ಯ ಪಾತ್ರದಲ್ಲಿ ನಟಿಸಿರುವ ಹಾಸ್ಯ ಪ್ರಧಾನ ಕೌಟುಂಬಿಕ ಸಿನಿಮಾ ‘ಸಿಂಗಲ್ ಪಾಪ’ ಈ ವಾರ ಒಟಿಟಿಗೆ ಬಂದಿದೆ. ಹೆಸರೇ ಸೂಚಿಸುತ್ತಿರುವಂತೆ ತಂದೆ ಯಾರಾದರೂ, ಒಬ್ಬನೇ ಕಾರ್ಯಕ್ರಮದ ಬಗ್ಗೆ ಕತೆ ಇರುವ ಈ ಸಿನಿಮಾ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆ ಆಗಿದೆ.

ಕೆಲ ತಿಂಗಳ ಹಿಂದೆ ಬಿಡುಗಡೆ ಆಗಿ ಕಾಣಿಸಿಕೊಂಡ ಹಾಗೂ ವಿಮರ್ಶಕರ ಮನ ಗೆದ್ದಿರುವ ಹೊಸ ಸೂಪರ್ ಹೀರೋ ಸಿನಿಮಾ ಇದೀಗ ಒಟಿಗೆ ಬಂದಿದೆ. ಹೊಸ ‘ಸೂಪರ್ ಹೀರೋ’ ಸಿನಿಮಾ ಜಿಯೋ ಹಾಟ್ಸ್ಟಾರ್ನಲ್ಲಿ ಉಚಿತವಾಗಿ ವೀಕ್ಷಿಸಲು ಲಭ್ಯವಿದೆ.

ಅರ್ಜುನ್ ಸರ್ಜಾ ಮುಖ್ಯ ಪಾತ್ರದಲ್ಲಿ ನಟಿಸಿರುವ ಆಕ್ಷನ್ ಥ್ರಿಲ್ಲರ್ ತಮಿಳು ಸಿನಿಮಾ ‘ತೀವ್ರ ಕೋಳಿಗಲ್ ನಡುಂಗ’ ಸಿನಿಮಾ ಇದೇ ವಾರ ಒಟಿಟಿಗೆ ಬಂದಿದೆ. ಈ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವನ್ನು ಸನ್ ನೆಕ್ಸ್ಟ್ ನಲ್ಲಿ ವೀಕ್ಷಿಸಲಾಗಿದೆ.
ರಂದು ಪ್ರಕಟಿಸಲಾಗಿದೆ – 6:51 pm, ಶನಿ, 13 ಡಿಸೆಂಬರ್ 25