ಬೇಲೂರಿನ ಬಾಲೆಗೆ ಮನಸೋತ ಇಂಗ್ಲೆಂಡ್ ಯುವಕ: ಭಾನು ಭೂಮಿ ಮೀರಿದ ಪ್ರೀತಿಗೆ ವೇದಿಕೆಯಾಯ್ತು ಹಾಸನ

ಬೇಲೂರಿನ ಬಾಲೆಗೆ ಮನಸೋತ ಇಂಗ್ಲೆಂಡ್ ಯುವಕ: ಭಾನು ಭೂಮಿ ಮೀರಿದ ಪ್ರೀತಿಗೆ ವೇದಿಕೆಯಾಯ್ತು ಹಾಸನ


ಇಂಗ್ಲೆಂಡ್ ಮೂಲದ ಜಾನ್ ಹಾಗೂ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಇಬ್ಬೀಡು ಗ್ರಾಮದ ಹೇಮಶ್ರೀ ಪಕ್ಕಾ ಹಿಂದೂ ಸಂಪ್ರದಾಯದಂತೆ ಕೈ ಹಿಡಿದಿದ್ದಾರೆ. ಕಳೆದ ಎರಡು ವರ್ಷಗಳಿಂದ ಇಂಗ್ಲೆಂಡ್ ನ ಲಿವರ್ ಪೋಲ್ ನಲ್ಲಿ ನೆಲೆಸಿರುವ ಬೇಲೂರಿನ ಯುವತಿ ಹೇಮಶ್ರೀಗೆ ಸ್ವಂತ ಕಚೇರಿಯಲ್ಲಿ ಕೆಲಸ ಮಾಡುವ ಜಾನ್ ಜೊತೆಗೆ ಗೆಳೆತನವಾಗಿದೆ. ಗೆಳೆತನ ಪ್ರೀತಿಯಾಗಿ ಇಬ್ಬರೂ ಪರಸ್ಪರ ಇಷ್ಟಪಟ್ಟು ಮದುವೆಯಾಗುವ ತೀರ್ಮಾನ ಮಾಡಿದ್ದಾರೆ. ಆದರೆ ಜಾತಿ ಬೇರೆ, ಧರ್ಮ ಬೇರೆ, ದೇಶ ಬೇರೆ ಭಾಷೆ ಬೇರೆ, ಮನೆಯವರು ಒಪ್ತಾರಾ ಇಲ್ಲವೋ ಎನ್ನೋ ಆತಂಕಕ್ಕೆ ಮತ್ತೆ ಎಳೆದ ಹೆತ್ತವರು ಮಕ್ಕಳ ಆಸೆಗೆ ನೀರೆರೆದು ಹಿಂದೂ ಸಂಪ್ರದಾಯದಂತೆ ಕಂಕಣ ಭಾಗ್ಯ ಕರುಣಿಸಿದ್ದಾರೆ.



Source link

Leave a Reply

Your email address will not be published. Required fields are marked *