‘ನಮ್ಮ ಸಿನಿಮಾ ರಿಲೀಸ್ ಆಗುವಾಗ ಒಂದು ಪಡೆ ಯುದ್ಧಕ್ಕೆ ಸಿದ್ಧವಾಗುತ್ತಿದೆ’ ಎಂದಿದ್ದರು. ಈ ವಾರ್ಗೆ ತಾವು ರೆಡಿ ಎಂದು ಕೂಡ ಹೇಳಿದ್ದರು. ಈ ಹೇಳಿಕೆ ಚಿತ್ರರಂಗದಲ್ಲಿ ದೊಡ್ಡ ಕಾಡ್ಗಿಚ್ಚನ್ನೇ ಹಬ್ಬಿಸಿದೆ. ದರ್ಶನ್ (ದರ್ಶನ್) ಅಭಿಮಾನಿಗಳು ಇದು ದರ್ಶನ್ ಬಗ್ಗೆ ಹೇಳಿದ್ದು ಎಂದು ಅರ್ಥವಾಯಿತು. ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಸುದೀಪ್ ಗೆ (ಸುದೀಪ್) ಕೌಂಟರ್ ಕೊಟ್ಟಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಸುದೀಪ್ ಆಪ್ತ ಚಕ್ರವರ್ತಿ ಚಂದ್ರಚೂಡ್ ಸ್ಪಷ್ಟನೆ ನೀಡಿದ್ದಾರೆ. ಸುದೀಪ್ ಆಡಿದ ಮಾತು ಪೈರಸಿ ಮಾಡುವವರ ಬಗ್ಗೆ.
‘ಸುದೀಪ್ ಹೇಳಿಕೆ ಬಳಿಕ ಕನ್ನಡ ಚಿತ್ರರಂಗದಲ್ಲಿ ಫ್ಯಾನ್ ವಾರ್, ಸ್ಟಾರ್ ವಾರ್ ನಡೀತಾ ಇದೆ ಎಂದು ಹೇಳುತ್ತಾ ಇದಾರೆ. ಪಡೆಗೆ ಟಾಂಗ್ ಕೊಟ್ಟಿದ್ದಾರೆ ಮತ್ತೊಂದು. ಭಾರತದ ಸಿನಿಮಾಗಳು ರಿಲೀಸ್ ಆದಾಗ ಅದನ್ನು ನಾಶ ಮಾಡಲು ಸಾಕಷ್ಟು ಪ್ರಯತ್ನಗಳು ನಡೆಯುತ್ತವೆ. ಒಂದು ಪಡೆ ಸಿನಿಮಾ ಭಯೋತ್ಪಾದಕರ ರೀತಿ ವರ್ತಿಸುತ್ತದೆ. ಸುದೀಪ್ ಸೇರಿದಂತೆ ಎಲ್ಲರೂ ಅದರ ವಿರುದ್ಧ ಹೋರಾಡಬೇಕಾಗಿದೆ. ಸುದೀಪ್ ಅವರು ಹೇಳಿದ್ದು ಇದನ್ನೇ’ ಕಿಚ್ಚನ ಆಪ್ತ ಚಕ್ರತಿ.
‘ಪೈರಸಿ ಮಾಡಲು 22ಕ್ಕೂ ಹೆಚ್ಚು ಆಯಪ್‌ಗಳು ಇವೆ. ಕ್ಷಣಮಾತ್ರದಲ್ಲಿ ಸಿನಿಮಾ ಡೌನ್ ಲೋಡ್ ಆಗುತ್ತದೆ. ಮೊದಲ ಶೋ ಮುಗಿಯುವ ಹೊತ್ತಿಗೆ ಸಿನಿಮಾ ಲೀಕ್ ಆಗುತ್ತದೆ. ಮ್ಯಾಕ್ಸ್ ಸಿನಿಮಾದ ಸಂದರ್ಭದಲ್ಲಿ ಸಾವಿರಾರು ಲಿಂಕ್‌ಗಳನ್ನು ನಾನು ಡಿಲೀಟ್ ಮಾಡಿದ್ದೇನೆ. ಸಿನಿಮಾನ ಕಷ್ಟಪಟ್ಟು ಮಾಡಬೇಕು. ಸಿನಿಮಾ ರಿಲೀಸ್ ಆದಮೇಲೆಯೂ ಯುದ್ಧ ಮಾಡೋದು ಕಲಾ ಲೋಕಕ್ಕೆ ಬಂದ ಶಾಪ. ಇದರ ವಿರುದ್ಧ, ಸಿಎಂ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ’ ಚಕ್ರವರ್ತಿ.
‘ದುಡ್ಡು ಕೊಟ್ಟು ಟಿಕೆಟ್ ಖರೀದಿಸಿದ ಎಲ್ಲರೂ ಸಿನಿಮಾನ ಅಥವಾ ಆ ಕೃತಿಯನ್ನು ವಿಮರ್ಶೆ ಮಾಡುವ ಹಕ್ಕಿರುತ್ತದೆ. ಆದರೆ, ವಿಮರ್ಶೆ ಹೆಸರಲ್ಲಿ ಸಿನಿಮಾನ ಸಾಯಿಸಲಾಗುತ್ತಿದೆ. ಇದಕ್ಕೆ ಒಂದು ಪಡೆ ಇದೆ. ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಹರಿಬಿಡಲು ಒಂದು ಪಡೆ ಇದೆ. ಈ ರೀತಿಯ ಪಡೆಗಳ ವಿರುದ್ಧ ಯುದ್ಧ ಮಾಡುತ್ತೇನೆ ಎಂದು ಸುದೀಪ್ ಹೇಳಿದ್ದಾರೆ. ಇದು ತಪ್ಪಾ? ಕುಂಬಳ ಕಾಯಿ ಕಳ್ಳ ಎಂದರೆ ಹೆಗಲುಮುಟ್ಟಿಕೊಳ್ಳಬಾರದು’ ಎಂದು ಚಕ್ರವರ್ತಿ.
ಇದನ್ನೂ ಓದಿ: ನಾನು ಬಾಯಿ ಮುಚ್ಕೊಂಡು ಇದ್ದೆ, ಯಾಕಂದ್ರೆ; ಹುಬ್ಬಳ್ಳಿಯಿಂದ ಇಡೀ ರಾಜ್ಯಕ್ಕೆ ಸುದೀಪ್ ಖಡಕ್ ಸಂದೇಶ
‘ಪೈರಸಿ ಎಂಬುದು 45, ಮಾರ್ಕ್‌ಗೆ ಇರುವ ಸವಾಲು. ಡೆವಿಲ್ ಸಿನಿಮಾಗೂ ಇದೇ ಸಮಸ್ಯೆ ಇದೆ. ಅವರಿಗೂ ಪೈರಸಿ ಕಾಟ ತಟ್ಟಿದೆ. ಸುದೀಪ್ ಅವರು ಯಾವಾಗಲೂ ಒಳ್ಳೆಯದನ್ನು ಬಯಸಿದ್ದಾರೆ’ ಚಕ್ರವರ್ತಿ. ಈ ಮೂಲಕ ಅದಕ್ಕೆ ಬೇರೆ ಅರ್ಥ ಕಲ್ಪಿಸೋದು ಬೇಡ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.