ಸಮುದ್ರದೊಳಗೆ ಭರತನಾಟ್ಯ ಮಾಡಿದ 14 ವರ್ಷದ ಬಾಲಕಿ, ವಿಡಿಯೋ ವೈರಲ್

ಸಮುದ್ರದೊಳಗೆ ಭರತನಾಟ್ಯ ಮಾಡಿದ 14 ವರ್ಷದ ಬಾಲಕಿ, ವಿಡಿಯೋ ವೈರಲ್


ಪುದುಚೇರಿ, ಡಿ.22: ಪುದುಚೇರಿಯ 14 ವರ್ಷದ ಬಾಲಕಿಯೊಬ್ಬಳು ಸಮುದ್ರದ ಒಳಗೆ ಭರತನಾಟ್ಯ ಮಾಡಿದ್ದಾಳೆ. ಇದೀಗ ಈ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. 20 ಅಡಿ ನೀರಿನ ಒಳಗೆ ಭರತನಾಟ್ಯ ಮಾಡಿರುವ ವಿಡಿಯೋ ವೈರಲ್ ಆಗಿದೆ. ಭರತನಾಟ್ಯ ಭಾರತೀಯ ಪ್ರಮುಖ ಕಲೆ ಸಂಯೋಜನೆ, ಗಡಿ, ಭಾಷೆಗಳನ್ನು ಮೀರಿ ನಿಂತಿದೆ. ಇದೀಗ ನೀರಿನ ಒಳಗೆ ಭರತಮಾಟ್ಯ ಮಾಡುವ ಮೂಲಕ ಹೊಸ ದಾಖಲೆಯನ್ನು ಈ ಹುಡುಗಿ ಮಾಡಿದ್ದಾಳೆ. ಅಶ್ವಿನ್ ಬಾಲಾಳು ಎಂಬ ಹುಡುಗಿ ಈ ನೃತ್ಯ ಪ್ರದರ್ಶನ ನೀಡಿದ್ದು, ಎಲ್ಲರಿಗೂ ಮೆಚ್ಚುಗೆ ಇದೆ. ಇಂಟರ್ನ್ಯಾಷನಲ್ ಡಾನ್ಸ್ ಡೇಯಂದು ಈ ಪ್ರದರ್ಶನ ನೀಡಿದ್ದು, ಸಮುದ್ರಕ್ಕೆ ಫ್ಲಾಸ್ಟಿಕ್ ಎಸೆಯಬೇಡಿ ಎಂಬ ಜಾಗೃತಿ ಮೂಡಿಸಲು ಈ ಸಾಹಸವನ್ನು ಮಾಡಿದ್ದಾಳೆ. ಈ ಮೂಲಕ ಪ್ರಪಂಚಕ್ಕೆ ಸಮುದ್ರವನ್ನು ಮಾಲಿನ್ಯ ಮಾಡುವುದನ್ನು ತಡೆಗಟ್ಟಲು ಸಂದೇಶ ನೀಡಿದ್ದಾಳೆ. 2025 ಏಪ್ರಿಲ್‌ನಲ್ಲಿ ನಡೆದ ಈ ಪ್ರದರ್ಶನಕ್ಕೆ ಸಂಬಂಧಿಸಿದ 51 ವೀಡಿಯೊ ಕ್ಲಿಪ್ ಡಿಸೆಂಬರ್ 19 ರಂದು ರಿಪೋಸ್ಟ್ ಆಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ವಿಡಿಯೋ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *