Actress Mrunal Thakur: ಬಹುಭಾಷಾ ನಟಿ ಮೃಣಾಲ್ ಠಾಕೂರ್ ಹಾಗೂ ತಮಿಳು ನಟ ಧನುಷ್ ನಡುವಿನ ರಿಲೇಶನ್‌ಶಿಪ್, ಮದುವೆ ಸುದ್ದಿ ತೀವ್ರಸ್ವರೂಪ ಪಡೆದುಕೊಳ್ಳುತ್ತಿರುವ ನಡುವೆಯೇ ಧನುಷ್ ಕಾರಣಕ್ಕೆ ಮೃಣಾಲ್ ನಾಚಿಕೊಂಡ ಘಟನೆ ಸಿನಿಮಾ ಈವೆಂಟ್ ಒಂದರಲ್ಲಿ ನಡೆದಿದೆ.

ಧನುಷ್ ಹಾಗೂ ಮೃಣಾಲ್ ನಡುವೆ 11 ವರ್ಷಗಳ ನಡುವಿನ ಅಂತರ ಇದೆ. ಧನುಷ್ ಅವರ ಹಿರಿಯ ಮಗನಿಗೆ 20 ವರ್ಷ ಆಗಿದೆ. ಒಟ್ಟೂ ಇಬ್ಬರು ಮಕ್ಕಳಿದ್ದಾರೆ.

ಈ ಹಿಂದೆ ಮೃಣಾಲ್ ಠಾಕೂರ್ ಜೊತೆಗೆ ಕೆಲ ನಟರ ಹೆಸರು ಥಳುಕು ಹಾಕಿಕೊಂಡಿತ್ತು. ಆಗೆಲ್ಲ ಮೃಣಾಲ್ ಅವರು ಇಲ್ಲ ಎಂದು ಕಡ್ಡಿ ತುಡ್ಡಾದಂತೆ ಹೇಳುತ್ತಿದ್ದರು. ಈ ಬಾರಿ ಮಾತ್ರ ಮೌನದಿಂದ ಇದ್ದಾರೆ. ಧನುಷ್ ಅವರ ಸಹೋದರಿಯರನ್ನು ಕೂಡ ಮೃಣಾಲ್ ಫಾಲೋ ಮಾಡುತ್ತಿದ್ದು, ಇದು ಕೂಡ ಆಶ್ಚರ್ಯ ತಂದಿದೆ.

ಮೃಣಾಲ್ ಅವರ ಮುಂಬರುವ ಸಿನಿಮಾ ‘ದೋ ದೀವಾನೆ ಶೆಹರ್ ಮೇ’ ಸಿನಿಮಾದ ಪ್ರಚಾರದ ಕಾರ್ಯಕ್ರಮದಲ್ಲಿ ಸಹ ನಟ ಸಿದ್ಧಾಂತ್ ಚತುರ್ವೇದಿ ‘ಚೆನ್ನೈವಾಲೆ’ ಎಂದು ಕಾಲೆಳೆದಾಗ ಮೃಣಾಲ್ ನಾಚಿಕೊಂಡರು.

ಅಚಾನಕ್ ಆಗಿ ನಡೆದ ಈ ಘಟನೆಯಿಂದ ಮೃಣಾಲ್-ಧನುಷ್ ನಡುವಿನ ಸಂಬಂಧದ ಚರ್ಚೆ ಮತ್ತಷ್ಟು ರಂಗು ಪಡೆದಿದೆ. ಈ ಸುದ್ದಿಗೆ ಇನ್ನಷ್ಟು ಪುಷ್ಟಿ ಸಿಕ್ಕಿದೆ.

ಇದಕ್ಕೂ ಮೊದಲು ಪ್ರೇಮದ ಬಗ್ಗೆ ಮಾತನಾಡಿದ ಮೃಣಾಲ್, ‘ಪ್ರೀತಿ ಸುಂದರವಾದ ಭಾವನೆ. ನಿಮ್ಮೊಳಗಿನ ಮಗುತನವನ್ನು ಮತ್ತೆ ಚಿಗುರಿಸುವ ಅದ್ಭುತ. ಈ ಭೂಮಿ ಮೇಲಿರುವ ಎಲ್ಲರಿಗೂ ಪ್ರೀತಿಯ ಅನುಭೂತಿ ಸಿಗಲಿ ಎಂಬುದು ನನ್ನ ಪ್ರಾರ್ಥನೆ’ ಎಂದಿದ್ದರು.

Source link
20 ವರ್ಷದ ಮಗನ ಮುಂದೆ 2ನೇ ಮದುವೆಗೆ ನಟ ಧನುಷ್ ರೆಡಿ; ಇವೆಂಟ್‌ನಲ್ಲಿ ಸತ್ಯ ಹೇಳಲಾಗದೆ ಜಾರಿಕೊಂಡ ನಟಿ!