Headlines

ಮತ್ತೆ ತೆಲುಗು ಸಿನಿಮಾನಲ್ಲಿ ನಟಿಸಲಿರುವ ಆಲಿಯಾ ಭಟ್, ನಾಯಕ ಯಾರು?

ಮತ್ತೆ ತೆಲುಗು ಸಿನಿಮಾನಲ್ಲಿ ನಟಿಸಲಿರುವ ಆಲಿಯಾ ಭಟ್, ನಾಯಕ ಯಾರು?


ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ಆಲಿಯಾ ಭಟ್ (ಆಲಿಯಾ ಭಟ್), ಬಾಲಿವುಡ್ ನ ಸೂಪರ್ ಸ್ಟಾರ್ ನಟಿ. ಹಿಂದಿ ಚಿತ್ರರಂಗದ ಸ್ಟಾರ್ ನಟಿ ಆಗಿರುವ ಆಲಿಯಾ ಭಟ್, ಬಾಲಿವುಡ್ ನ ಬಲು ದುಬಾರಿ ನಟಿ ಕೂಡ ಹೌದು. ಹಿಂದಿದೆ, ತೆಲುಗಿನ ‘ಆರ್ ಆರ್ ಆರ್’ ಸಿನಿಮಾದಲ್ಲಿಯೂ ಆಲಿಯಾ ಭಟ್ ನಟಿಸಿದ್ದು, ಆ ಸಿನಿಮಾ ಭಾರಿ ಹಿಟ್ ಎನಿಸಿಕೊಂಡಿದೆ. ಇದೀಗ ಹಲವು ವರ್ಷಗಳ ಬಳಿಕ ಆಲಿಯಾ ಭಟ್ ಮತ್ತೊಮ್ಮೆ ತೆಲುಗು ಸಿನಿಮಾದಲ್ಲಿ ನಟಿಸಲಿದ್ದಾರೆ. ಅಂದಹಾಗೆ ಈ ಬಾರಿಯೂ ಅತಿಥಿ ಪಾತ್ರದಲ್ಲೇ.

ಈ ಹಿಂದೆ ‘RRR’ ಚಿತ್ರದಲ್ಲಿ ‘ಸೀತಾ’ ​​ಪಾತ್ರದ ಮೂಲಕ ದಕ್ಷಿಣ ಭಾರತದ ಮನ ಗೆದ್ದಿದ್ದ ಆಲಿಯಾ ಭಟ್, ಈಗ ಮತ್ತೊಂದು ಭಾರಿ ಬಜೆಟ್‌ನ ಪ್ಯಾನ್ ಇಂಡಿಯಾ ಚಿತ್ರದ ಭಾಗವಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಜೂನಿಯರ್ ಎನ್ ಆರ್ ಮತ್ತು ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಸದ್ಯ ‘ಡ್ರ್ಯಾಗನ್’ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದ್ದು, ಈ ಸಿನಿಮಾದ ಪ್ರಮುಖ ಪಾತ್ರಕ್ಕಾಗಿ ಆಲಿಯಾ ಭಟ್ ನಟಿಸುತ್ತಿದ್ದಾರೆ.

‘ಡ್ರ್ಯಾಗನ್’ ಸಿನಿಮಾದ ನಾಯಕಿಯಾಗಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ. ಆದರೆ ಈ ಸಿನಿಮಾದಲ್ಲಿ ಜೂ.ಎನ್ ಟಿಆರ್ ಅವರು ದ್ವಿಪಾತ್ರ ಎನ್ನಲಾಗುತ್ತಿದ್ದು, ಜೂ ಎನ್ ಟಿಆರ್ ಅವರ ಒಂದು ಪಾತ್ರದ ನಾಯಕಿಯಾಗಿ ಆಲಿಯಾ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಜೊತೆಗೆ, ಆಲಿಯಾ ನಟಿಸುತ್ತಿರುವ ಪಾತ್ರ ಸಹ ಸಖತ್ ಪವರ್ ಫುಲ್ ಆಗಿ ಇರಲಿದೆಯಂತೆ. ಆಲಿಯಾ ಅವರದ್ದು ಪರಿಪೂರ್ಣ ನಾಯಕಿ ಪಾತ್ರವಲ್ಲದೆ, ಎಕ್ಸ್ ಟೆಂಡ್ ಕ್ಯಾಮಿಯೋ ರೀತಿ ಇರಲಿದೆಯಂತೆ.

ಇದನ್ನೂ ಓದಿ:550 ಕೋಟಿ ರೂಪಾಯಿ ಒಡತಿ ಆಲಿಯಾ ಭಟ್; ಗಳಿಕೆ ಹೇಗೆ?

ಆಲಿಯಾ ಭಟ್ ಅವರು ‘ಆರ್ ಆರ್ ಆರ್’ ಸಿನಿಮಾದಲ್ಲಿ ನಟ ರಾಮ್ ಚರಣ್ ಪ್ರೇಯಸಿಯಾಗಿ ನಟಿಸಿದ್ದರು. ರಾಮ್ ಚರಣ್, ಜೂ ಎನ್ ಟಿಆರ್ ಮತ್ತು ಆಲಿಯಾ ಅವರ ಹಾಡು ಸಹ ಸಿನಿಮಾದ ಅಂತ್ಯದಲ್ಲಿ ಇತ್ತು. ಆದರೆ ಜೂ ಎನ್ ಟಿಆರ್ ಮತ್ತು ಆಲಿಯಾ ನಡುವೆ ಕೇವಲ ಒಂದು ದೃಶ್ಯವಷ್ಟೇ ಇತ್ತು. ಇದೀಗ ಜೂ ಎನ್ ಟಿಆರ್ ಅವರಿಗೆ ನಾಯಕಿಯಾಗಿ ಆಲಿಯಾ ಭಟ್ ನಟಿಸುತ್ತಿದ್ದಾರೆ.

‘ಡ್ರ್ಯಾಗನ್’ ಸಿನಿಮಾಕ್ಕಾಗಿ ಜೂ ಎನ್ ಟಿಆರ್ ಸಾಕಷ್ಟು ಶ್ರಮಪಡುತ್ತಿದ್ದಾರೆ. ದೇಹವನ್ನು ಹುರಿಗೊಳಿಸಿಕೊಂಡಿದ್ದು, ಸಿನಿಮಾಕ್ಕಾಗಿ ಸಿಕ್ಸ್ ಪ್ಯಾಕ್ ಸಹ ಮಾಡಿಕೊಂಡಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಸಾಕಷ್ಟು ಪ್ರತಿಭಾವಂತ ಕಲಾವಿದರು ನಟಿಸುತ್ತಿದ್ದಾರೆ. ಬಾಲಿವುಡ್ ನಟ ವಿವೇಕ್ ಒಬೆರಾಯ್, ಈ ಸಿನಿಮಾದ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡದ ನಟ ಸಹ ಈ ಸಿನಿಮಾದಲ್ಲಿ ಇರಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *