ಸಾವರಿನ್ ಗೋಲ್ಡ್ ಬಾಂಡ್ಚಿತ್ರದ ಕ್ರೆಡಿಟ್ ಮೂಲ: ಶಟರ್‌ಸ್ಟಾಕ್
ಜುಲೈ, ಏಪ್ರಿಲ್ 14: ಬಹಳ ಜನಪ್ರಿಯವಾಗುತ್ತಿದ್ದ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ನ 2019-20ರ ಸರಣಿ-5ರ ಗೋಲ್ಡ್ ಬ್ಯಾಂಡ್‌ಗಳನ್ನು (SGB ಸರಣಿ-V) ನಾಳೆ (2026ರ ಏಪ್ರಿಲ್ 15) ಪ್ರೀಮೆಚ್ಯೂರ್ ಆಗಿ ರಿಡೀಮ್ ಮಾಡಲು ಅವಕಾಶ ನೀಡಲಾಗಿದೆ. ಆರ್ಬಿಐ (RBI) ಈ ಬ್ಯಾಂಡ್‌ಗಳನ್ನು 2019ರ ಏಪ್ರಿಲ್ 15 ರಂದು ವಿತರಣೆ ಮಾಡಲಾಗಿತ್ತು. ಎಂಟು ವರ್ಷಕ್ಕೆ, ಅಂದರೆ 2027ರ ಏಪ್ರಿಲ್ 15ಕ್ಕೆ ಇದರ ಮೆಚ್ಯುರಿಟಿ ಡೇಟ್ ಇರುವುದು. ಈಗ ಪ್ರೀಮೆಚ್ಯೂರ್ ಆಗಿ ರಿಡೀಮ್ ಮಾಡಿಕೊಳ್ಳಬೇಕೆನ್ನುವವರಿಗೆ ಆಫರ್ ಕೊಡಲಾಗಿದೆ.
ಎಸ್ಜಿಬಿ ಬಾಂಡ್ ಮೌಲ್ಯ 3,738 ರೂನಿಂದ 15,009 ರೂ
2019ರ ಏಪ್ರಿಲ್ 15 ರಂದು ವಿತರಣೆ ಮಾಡಲಾದ ಸೀರೀಸ್-5ರ ಎಸ್ಜಿಬಿ ಬಾಂಡ್ನ ಮೌಲ್ಯ ಒಂದು ಗ್ರಾಮಕ್ಕೆ 3,738 ರೂ. ಈಗ 2026ರ ಏಪ್ರಿಲ್ 15 ರಂದು ಪ್ರೀಮೆಚ್ಯೂರ್ ರಿಡೆಂಪ್ಷನ್ ಆಫರ್‌ನಲ್ಲಿ ಒಂದು ಗ್ರಾಮ ಮೌಲ್ಯ 15,009 ರೂ ಎಂದು ನಿಗದಿಪಡಿಸಲಾಗಿದೆ. ಈ ಆರೂವರೆ ಪಡೆದ ಬಾಂಡ್ ಮೌಲ್ಯ ಶೇ. 302ರಷ್ಟು ಹೆಚ್ಚಾಗಿದೆ.
ಒಂದು ಲಕ್ಷ ರೂ ಹೂಡಿಕೆಗೆ 4 ಲಕ್ಷ ರಿಟರ್ನ್ಸ್
2019 ರಿಂದ 2026 ರ ನಡುವೆ ಎಸ್ ಜಿಬಿ ಬಾಂಡ್ ಒಂದು ಯುನಿಟ್ 3,738 ರೂನಿಂದ 15,009 ರೂ ಆಗಿದೆ. ಅಂದರೆ ಸುಮಾರು 1,271 ರೂಗಳಿವೆ. ಈ ಸರಣಿಯ ಬ್ಯಾಂಡ್‌ನಲ್ಲಿ ನೀವು 1 ಲಕ್ಷ ರೂ ಹೂಡಿಕೆ ಮಾಡಿದ್ದರೆ ಈ ಪ್ರೀಮೆಚ್ಯೂರ್ ರಿಡೆಂಪ್ಷನ್‌ನಲ್ಲಿ ಅದರ ಮೌಲ್ಯ 4.02 ಲಕ್ಷ ರೂ ಆಗಿರುತ್ತದೆ. ಹತ್ತು ಲಕ್ಷ ರೂ ಹೂಡಿಕೆ ಮಾಡಿದ್ದರೆ 40 ಲಕ್ಷ ರೂ ನಿಮ್ಮದಾಗಿರುತ್ತಿತ್ತು.
ಇದನ್ನೂ ಓದಿ: ಕಿಸಾನ್ ವಿಕಾಸ್ ಪತ್ರ; ಹಣ ಡಬಲ್ ಮಾಡುವ ಪೋಸ್ಟ್ ಆಫೀಸ್ ಸ್ಕೀಮ್
ಬಡ್ಡಿಯನ್ನು ಪರಿಗಣಿಸಿದರೆ ಇನ್ನೂ ಹೆಚ್ಚು ಲಾಭ
ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ನ ಇನ್ನೊಂದು ವಿಶೇಷತೆ ಎಂದರೆ, ಅದು ನೀಡುವ ಬಡ್ಡಿ ಆದಾಯ. ಈ ಸ್ಕೀಮ್ನಲ್ಲಿ ನೀವು ಮಾಡಿದ ಹೂಡಿಕೆಗೆ ಶೇರ್ ಮಾಡಿ. 2.5ರಷ್ಟು ವಾರ್ಷಿಕ ಬಡ್ಡಿ ಸಿಗುತ್ತದೆ. ಒಂದು ಲಕ್ಷ ರೂ ಹೂಡಿಕೆ ಮಾಡಿದ್ದರೆ ವರ್ಷಕ್ಕೆ 2,500 ರೂ ಹಣವು ಹೆಚ್ಚುವರಿಯಾಗಿ ಸಿಗುತ್ತಿರುತ್ತದೆ. ಇದು ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗುತ್ತದೆ.
ಏನಿದು ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್?
ಭೌತಿಕ ಚಿನ್ನವನ್ನು ಖರೀದಿಸುವುದು ಬೇಡ, ಆದರೆ, ಚಿನ್ನದ ಮೇಲೆ ಹೂಡಿಕೆ ಮಾಡಬೇಕಾದವರಿಗೆ ಗೋಲ್ಡ್ ಐಟಿಎಫ್, ಗೋಲ್ಡ್ ಮ್ಯೂಚುವಲ್ ಫಂಡ್, ಡಿಜಿಟಲ್ ಗೋಲ್ಡ್, ಸಾವರಿನ್ ಗೋಲ್ಡ್ ಬಾಂಡ್ ಇತ್ಯಾದಿ ಮಾರ್ಗಗಳಿವೆ. ಇದರಲ್ಲಿ ಎಸ್ಜಿಬಿ ಅಥವಾ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ ಬಹಳ ಜನಪ್ರಿಯವಾಗಿದೆ. ಎಂಟು ವರ್ಷದ ಈ ಸ್ಕೀಮ್‌ನಲ್ಲಿ ಒಬ್ಬ ವ್ಯಕ್ತಿ ಒಂದು ಗ್ರಾಮದಿಂದ ಹಿಡಿದು 4 ಕಿಲೋ ಚಿನ್ನದವರೆಗೂ ಹೂಡಿಕೆ ಮಾಡಬಹುದು.
ಇದನ್ನೂ ಓದಿ: ಕೇವಲ 2,000 ರೂ ಹೂಡಿಕೆಯಲ್ಲಿ ಕೋಟಿ ರೂ ಗಳಿಸಬೇಕಾ? ಎಸ್‌ಐಪಿ ಜೊತೆ ಸ್ಟೆಪಪ್ ತಂತ್ರ ಅನುಸರಿಸಿ
ಬಾಂಡ್ ಬಿಡುಗಡೆಗೆ ಕೆಲವು ದಿನಗಳ ಹಿಂದಿನ ಸರಾಸರಿ ಮಾರುಕಟ್ಟೆ ಬೆಲೆಯ ದರವನ್ನು ಎಸ್‌ಜಿಬಿಯ ಒಂದು ಯೂನಿಟ್ ಚಿನ್ನ ಬೆಲೆ ನಿಗದಿಪಡಿಸಲಾಗಿದೆ. ಮೆಚ್ಯೂರ್ ಆಗುವಾಗಲೂ ಹೀಗೆ ಸರಾಸರಿಯಾಗಿ ದರ ನಿಗದಿಪಡಿಸಲಾಗಿದೆ. ಅಷ್ಟೂ ಲಾಭವು ಹೂಡಿಕೆದಾರರ ಜೇಬು ಸೇರುತ್ತದೆ.
ಸದ್ಯ ಈ ಸಾವರಿನ್ ಗೋಲ್ಡ್ ಬಾಂಡ್ ಯೋಜನೆ ಚಾಲ್ತಿಯಲ್ಲಿ ಇಲ್ಲ. ಅಂದರೆ, ಕಳೆದ ಕೆಲವು ತಿಂಗಳುಗಳಿಂದ ಆರ್ ಬಿಐ ಯಾವುದೇ ಹೊಸ ಬ್ಯಾಂಡ್ ಸರಣಿಗಳನ್ನು ಬಿಡುಗಡೆ ಮಾಡಿಲ್ಲ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ