ಬಾಲಿವುಡ್ ಬ್ಯೂಟಿ, ಕಪೂರ್ ಖಾಂಧಾನ್ ಸೊಸೆ ಆಲಿಯಾ ಭಟ್ (Alia Bhatt) ಮತ್ತೆ ಸೌತ್ ಸಿನಿಇಂಡಸ್ಟ್ರಿಗೆ ಬರ್ತಾ ಇದ್ದಾರೆ. ಈ ಹಿಂದೆ RRR ಮೂವಿಯಲ್ಲಿ ಸೀತೆಯಾಗಿ ಮುಂಚಿದ್ದ ಆಲಿಯಾ ಒನ್ಸ್ ಅಗೈನ್ ತೆಲುಗುನಲ್ಲಿ ಚಿತ್ರಿತವಾಗ್ತಾ ಇರೋ ಪ್ಯಾನ್ ಇಂಡಿಯಾ ಮೂವಿಯಲ್ಲಿ ನಟಿಸೋದು ಫಿಕ್ಸ್ ಆಗಿದೆ.
ಸೌತ್ ಸಿನಿಇಂಡಸ್ಟ್ರಿಗೆ ಆಲಿಯಾ ಭಟ್ ಕಂಬ್ಯಾಕ್; ಮ್ಯಾನ್ ಆಫ್ ಮಾಸಸ್ ಜೋಡಿಯಾದ ಆಲಿಯಾ..!
ಯೆಸ್ ಬಾಲಿವುಡ್ ಬ್ಯೂಟಿ , ಭಟ್ ಫ್ಯಾಮಿಲಿ ಕುವರಿ, ಕಪೂರ್ ಖಾಂಧಾನ್ ಸೊಸೆ ಆಲಿಯಾ ಭಟ್ ಮತ್ತೆ ಸೌತ್ ಸಿನಿಇಂಡಸ್ಟ್ರಿಗೆ ಕಡೆಗೆ ಬರ್ತಾ ಇದ್ದಾರೆ. ಅಸಲಿಗೆ ಅತಿಲೋಕ ಸುಂದರಿ ಆಲಿಯಾನ ಮೊದಲು ಸೌತ್ಗೆ ಕರೆತಂದಿದ್ದು ಎಸ್.ಎಸ್ ರಾಜಮೌಳಿ.
ರಾಜಮೌಳಿ ನಿರ್ದೇಶನದ RRR ಮೂವಿನಲ್ಲಿ ಆಲಿಯಾ ಸೀತೆ ಪಾತ್ರ ಮಾಡಿದ್ರು. ರಾಮ್ಚರಣ್ ಜೋಡಿಯಾಗಿ ಮಿಂಚಿದ್ರು. ರಾಮ್ ಚರಣ್, ಜೂ ಎನ್‌ಟಿಆರ್ ಮತ್ತು ಆಲಿಯಾ ಅವರ ಹಾಡು ಸಹ RRR ಸಿನಿಮಾದ ಕೊನೆಯಲ್ಲಿ ಇತ್ತು.
ಆದರೆ ಜೂ ಎನ್‌ಟಿಆರ್ ಮತ್ತು ಆಲಿಯಾ ನಡುವೆ ಕೇವಲ ಒಂದು ದೃಶ್ಯವಷ್ಟೆ ಇತ್ತು. ಇದೀಗ ಜೂ ಎನ್‌ಟಿಆರ್ ಗೆ ನಾಯಕಿಯಾಗಿ ಆಲಿಯಾ ಭಟ್ ನಟಿಸಲಿದ್ದಾರೆ. ಅದು ಕೂಡ ಪ್ರಶಾಂತ್ ನೀಲ್ ನಿರ್ದೇಶನದ ಡ್ರ್ಯಾಗನ್ ಸಿನಿಮಾದಲ್ಲಿ.
ಪ್ರಶಾಂತ್ ನೀಲ್ ಚಿತ್ರದಲ್ಲಿ NTR ಡಬಲ್ ರೋಲ್..? ತಾರಕ್ ಜೋಡಿಯಾಗಲಿದ್ದಾರೆ ರುಕ್ಮಿಣಿ & ಆಲಿಯಾ..!
ಹೌದು ಸಲಾರ್ ನಂತರ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬರ್ತಾ ಇರೋ ಡ್ರ್ಯಾಗನ್ ಮೂವಿಯಲ್ಲಿ NTR ದ್ವಿಪಾತ್ರದಲ್ಲಿ ಮಿಂಚಿದ್ದಾರಂತೆ. ಈಗಾಗ್ಲೇ ರುಕ್ಮಿಣಿ ವಸಂತ್ ಈ ಟೀಂಗೆ ಸೇರಿಯಾಗಿದೆ,.
ಇನ್ನೂ ಚಿತ್ರಕ್ಕೆ ಮತ್ತೊಬ್ಬ ನಾಯಕಿಯಾಗಿ ಆಲಿಯಾ ಎಂಟ್ರಿ ಕೊಟ್ಟಿದ್ದಾರೆ. ಆಲಿಯಾ ನಟಿಸ್ತಾ ಇರುವ ಪಾತ್ರ ಸಹ ಸಖತ್ ಪವರ್ಫುಲ್ ಆಗಿ ಇರಲಿದೆಯಂತೆ. ಆಲಿಯಾದು ಪರಿಪೂರ್ಣ ನಾಯಕಿ ಪಾತ್ರ ಅಲ್ಲದೆ, ಎಕ್ಸ್ಟೆಂಡೆಂಡ್ ಕ್ಯಾಮಿಯೋ ರೀತಿ ಇರಲಿದೆಯಂತೆ.
‘ಡ್ರ್ಯಾಗನ್’ ಸಿನಿಮಾಕ್ಕಾಗಿ ಜೂ ಎನ್‌ಟಿಆರ್ ಸಾಕಷ್ಟು ಶ್ರಮಪಡ್ತಾ ಇದ್ದಾರೆ. ದೇಹವನ್ನ ಹುರಿಗೊಳಿಸಿಕೊಂಡಿದ್ದು, ಸಿನಿಮಾಕ್ಕಾಗಿ ಸಿಕ್ಸ್ ಪ್ಯಾಕ್ ಸಹ ಮಾಡಿಕೊಂಡಿದ್ದಾರೆ. ಇನ್ನು ಈ ಸಿನಿಮಾನಲ್ಲಿ ಸಾಕಷ್ಟು ಪ್ರತಿಭಾವಂತ ಕಲಾವಿದರು ನಟಿಸ್ತಾ ಇದ್ದಾರೆ. ಬಾಲಿವುಡ್ ನಟ ವಿವೇಕ್ ಒಬೆರಾಯ್, ಈ ಸಿನಿಮಾದ ವಿಲನ್ ಪಾತ್ರದಲ್ಲಿದ್ದಾರೆ. ಇದೀಗ ಆಲಿಯಾ ಕೂಡ ಡ್ರ್ಯಾಗನ್ ಬಳಗಕ್ಕೆ ಎಂಟ್ರಿ ಕೊಟ್ಟಿರೋದು ಸಿನಿಮಾ ಬಗ್ಗೆ ಮತ್ತಷ್ಟು ನಿರೀಕ್ಷೆ ಮೂಡುವಂತೆ ಮಾಡಿದೆ.
ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ನೋಡಿ..