Headlines

ಚಿಪ್ಸ್ ಮಾಡೋಕೆ ತಂದ ಆಲೂಗಡ್ಡೆ ಒಣಗ್ತಿದ್ಯಾ? ಬೇಸಿಗೆಯಲ್ಲಿ ಬೇರು ಬರೋದನ್ನು ಹೀಗೆ ತಪ್ಪಿಸಿ

ಚಿಪ್ಸ್ ಮಾಡೋಕೆ ತಂದ ಆಲೂಗಡ್ಡೆ ಒಣಗ್ತಿದ್ಯಾ? ಬೇಸಿಗೆಯಲ್ಲಿ ಬೇರು ಬರೋದನ್ನು ಹೀಗೆ ತಪ್ಪಿಸಿ

ಚಿಪ್ಸ್ ಮಾಡೋಕೆ ತಂದ ಆಲೂಗಡ್ಡೆ ಒಣಗ್ತಿದ್ಯಾ? ಬೇಸಿಗೆಯಲ್ಲಿ ಬೇರು ಬರೋದನ್ನು ಹೀಗೆ ತಪ್ಪಿಸಿ

ಬೇಸಿಗೆ ಹೆಚ್ಚಾಗ್ತಿದ್ದಂತೆ ಮನೆಯಲ್ಲಿ ಕೆಲ ಸಮಸ್ಯೆ ಶುರುವಾಗುತ್ತೆ. ಹಾಲು ಹಾಳಾಗೋದು, ತರಕಾರಿ ಒಣಗೋದು ಹೆಚ್ಚು. ಹಾಗೆಯೇ ಆಲೂಗಡ್ಡೆಯಲ್ಲಿ ಬೇರುಗಳು ಕಾಣಿಸಿಕೊಳ್ಳುತ್ವೆ. ಆಲೂಗಡ್ಡೆ ಬೇಸಿಗೆಯಲ್ಲಿ ಹಾಳಾಗ್ಬಾರದು, ಬೇರು ಬರಬಾರದು, ಕೊಳೆಯಬಾರದು ಅಂದ್ರೆ ಕೆಲ ಟಿಪ್ಸ್ ಫಾಲೋ ಮಾಡಿ.

ಎಲ್ಲ ಪದಾರ್ಥಗಳ ರಾಜ ಆಲೂಗಡ್ಡೆ. ಬೇರೆ ತರಕಾರಿ ಇಲ್ಲ ಅಂದ್ರೂ ಆಲೂಗಡ್ಡೆಯಲ್ಲೇ ನಾಲ್ಕೈದು ದಿನವನ್ನು ಆರಾಮಾಗಿ ಕಳೆಯಬಹುದು. ಆಲೂ ಟಿಕ್ಕಾದಿಂದ ಹಿಡಿದು ಆಲೂಗಡ್ಡೆ ಸಾಂಬಾರ್ ವರೆಗೆ ಎಲ್ಲ ರೀತಿಯಲ್ಲೂ ಆಲೂಗಡ್ಡೆ ಬಳಸಲಾಗುತ್ತೆ. ಬಹುತೇಕ ಎಲ್ಲರ ಮನೆಯಲ್ಲಿ ಆಲೂಗಡ್ಡೆ ಸ್ಟಾಕ್ ಇದ್ದೇ ಇರುತ್ತೆ. ತುರ್ತು ಪರಿಸ್ಥಿತಿಗೆ ಬೇಕು ಅಂತ ಕೆಜಿ, ಎರಡು ಕೆಜಿ ಆಲೂಗಡ್ಡೆ ತಂದಿಟ್ಟುಕೊಂಡಿರ್ತಾರೆ. ಈ ಆಲೂಗಡ್ಡೆಗೆ ಬೇರು ಬಂದು, ಬಾಡಿ ಹಾಳಾಗುತ್ತೆ. ಅದನ್ನು ನೋಡಿದಾಗ ಮನಸ್ಸು ಚುರ್ ಅಂದೇ ಇರೋದಿಲ್ಲ. ಸುಮ್ನೆ ಆಲೂಗಡ್ಡೆ ಹಾಳಾಯ್ತು ಅಂತ ನಾವು ನೊಂದುಕೊಳ್ತೇವೆ. ಆಲೂಗಡ್ಡೆಯನ್ನು ಹಾಳಾಗದಂತೆ ಇಟ್ಕೊಳ್ಳೋದು ಹೇಗೆ ಅನ್ನೋದನ್ನು ತಿಳಿದ್ಕೊಳ್ಳಿ.

ಆಲೂಗಡ್ಡೆ ಹಾಳಾಗಿದೆ ಅನ್ನೋದನ್ನು ಪತ್ತೆ ಮಾಡೋದು ಕೆಲವರಿಗೆ ಕಷ್ಟ. ಸಣ್ಣಪುಟ್ಟ ಬೇರು ಬಂದಿದ್ರೆ ಆ ಆಲೂಗಡ್ಡೆಯನ್ನು ನೀವು ಬಳಸ್ಬಹುದು. ಆದ್ರೆ , ಆಲೂಗಡ್ಡೆ ಹಸಿರು ಬಣ್ಣಕ್ಕೆ ತಿರುಗಿದ್ದರೆ, ಅದರ ಮೇಲೆ ಬಿಳಿ ಅಚ್ಚು ಇದ್ದರೆ ಅಥವಾ ಕೆಟ್ಟ ವಾಸನೆ ಇದ್ದರೆ, ಅದನ್ನು ತಕ್ಷಣ ಎಸೆಯಬೇಕು. ಇದಲ್ಲದೆ, ತುಂಬಾ ಮೃದುವಾದ, ಸುಕ್ಕುಗಟ್ಟಿದ ಅಥವಾ ನೀರು ಸೋರುತ್ತಿರುವ ಆಲೂಗಡ್ಡೆಯನ್ನು ಸಹ ಹಾಳಾದ ಮತ್ತು ಬಳಕೆಗೆ ಸೂಕ್ತವಲ್ಲ ಎಂದು ಪರಿಗಣಿಸಲಾಗುತ್ತದೆ.

ಆಲೂಗಡ್ಡೆ ಹಾಳಾಗ್ಬಾರದು ಅಂದ್ರೆ ಸರಿಯಾದ ಟೆಂಪರೇಚರ್ ಕಾಪಾಡಿಕೊಳ್ಳೋದು ಬಹಳ ಮುಖ್ಯ. ತುಂಬಾ ಬಿಸಿಯಾದ ಅಥವಾ ತುಂಬಾ ತಣ್ಣನೆಯ ಸ್ಥಳಗಳಲ್ಲಿ ಆಲೂಗಡ್ಡೆ ಇಡ್ಬೇಡಿ. ಯಾವಾಗಲೂ ತಂಪಾದ, ಶುಷ್ಕ ಸ್ಥಳದಲ್ಲಿ ಸಂಗ್ರಹಿಸುವುದು ಉತ್ತಮ. ಆಲೂಗಡ್ಡೆ ತೀವ್ರ ಶಾಖದಲ್ಲಿ ವೇಗವಾಗಿ ಒಣಗುತ್ತದೆ. ಅವುಗಳಿಗೆ ಬೇರು ಬರುತ್ತದೆ. ಅಡುಗೆಮನೆಯಲ್ಲಿರುವ ಪ್ಯಾಂಟ್ರಿ ಅಥವಾ ಬೀರುವಿನಲ್ಲಿ ಇದನ್ನು ಇಡಬಹುದು.

ಆಲೂಗಡ್ಡೆಯನ್ನು ದೀರ್ಘಕಾಲ ಹಾಳಾಗದೆ ಹಾಗೆ ಇರ್ಬೇಕು ಅಂದ್ರೆ ಅದನ್ನು ನೇರವಾಗಿ ಸೂರ್ಯನ ಕಿರಣ ಬೀಡುವಂತ ಜಾಗದಲ್ಲಿ ಇಡ್ಬೇಡಿ. ಆಲೂಗಡ್ಡೆಯನ್ನು ನೇರ ಸೂರ್ಯನ ಬೆಳಕಿಗೆ ಒಡ್ಡುವುದರಿಂದ ಅವು ಹಸಿರು ಬಣ್ಣಕ್ಕೆ ತಿರುಗಬಹುದು, ಇದು ಅನಾರೋಗ್ಯಕರ. ಆಲೂಗಡ್ಡೆಯನ್ನು ಯಾವಾಗಲೂ ಕತ್ತಲೆಯ ಸ್ಥಳದಲ್ಲಿ ಸಂಗ್ರಹಿಸಿ. ಅವುಗಳನ್ನು ಕಾಗದದ ಚೀಲಗಳು, ರಟ್ಟಿನ ಪೆಟ್ಟಿಗೆ ಅಥವಾ ಮುಚ್ಚಿದ ಬೀರುಗಳಲ್ಲಿ ಸಂಗ್ರಹಿಸುವುದು ಉತ್ತಮ.

ಆಲೂಗಡ್ಡೆಯನ್ನು ಉತ್ತಮ ಗಾಳಿ ಇರುವ ಸ್ಥಳದಲ್ಲಿ ಸಂಗ್ರಹಿಸಿ. ಅವುಗಳನ್ನು ಬುಟ್ಟಿ, ತೆರೆದ ಪಾತ್ರೆ ಅಥವಾ ಕಾಗದದ ಚೀಲದಲ್ಲಿ ಸಂಗ್ರಹಿಸುವುದು ಬಹಳ ಮುಖ್ಯ. ಪ್ಲಾಸ್ಟಿಕ್ ಚೀಲಗಳು ಅಥವಾ ಗಾಳಿಯಾಡದ ಪಾತ್ರೆಗಳಲ್ಲಿ ಸಂಗ್ರಹಿಸುವುದನ್ನು ತಪ್ಪಿಸಿ.

ಅನೇಕ ಜನರು ಆಲೂಗಡ್ಡೆಯನ್ನು ದೀರ್ಘಕಾಲದವರೆಗೆ ತಾಜಾ ಇಡಲು ಫ್ರಿಜ್ ನಲ್ಲಿ ಇಡ್ತಾರೆ. ಆದ್ರೆ ಇದು ಒಳ್ಳೆ ಅಭ್ಯಾಸವಲ್ಲ. ಆಲೂಗಡ್ಡೆಯನ್ನು ಫ್ರಿಜ್ ನಲ್ಲಿ ಇಡೋದ್ರಿಂದ ರುಚಿ, ಆಕಾರ ಎರಡೂ ಹಾಳಾಗುತ್ತೆ. ಆಲೂಗಡ್ಡೆಯನ್ನು ನೀವು ಕತ್ತರಿಸಿದ್ದರೆ, ಸಿಪ್ಪೆ ಸುಲಿದಿದ್ದರೆ ಅದನು ನೀರಿನಲ್ಲಿ ಹಾಕಿ, ಫ್ರಿಜ್ ನಲ್ಲಿ ಇಡ್ಬಹುದು. ತುಂಬಾ ದಿನ ಹೀಗೆ ಇಡಲು ಸಾಧ್ಯವಿಲ್ಲ. ನೀವು 24 ಗಂಟೆಯೊಳಗೆ ಅದನ್ನು ಬಳಸಬೇಕು.

ಈರುಳ್ಳಿ ಹಾಗೂ ಆಲೂಗಡ್ಡೆ ಜೊತೆಗಾರರಿದ್ದಂತೆ. ಬಹುತೇಕ ಮನೆಗಳಲ್ಲಿ ಈರುಳ್ಳಿ ಪಕ್ಕದ ಜಾಗ ಆಲೂಗಡ್ಡೆಗೆ ಸೀಮಿತವಾಗಿರುತ್ತದೆ. ಈರುಳ್ಳಿಯಿಂದ ಹೊರಸೂಸುವ ಅನಿಲ ಆಲೂಗಡ್ಡೆ ಮೊಳಕೆಯೊಡೆಯಲು ಮತ್ತು ಬೇಗನೆ ಹಾಳಾಗಲು ಕಾರಣವಾಗಬಹುದು. ಆದ್ದರಿಂದ, ಅವುಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸುವುದು ಉತ್ತಮ.

Source link

Leave a Reply

Your email address will not be published. Required fields are marked *