ನಿಮ್ಮಲ್ಲಿ Wipro ಷೇರು ಇದ್ಯಾ? 2023ರ ಬಳಿಕ ಮೊದಲ ಬಾರಿಗೆ ಷೇರು Buyback ಘೋಷಿಸಿದ ಕಂಪನಿ! | Wipro Share Buyback 2026 Announcement Price Premium Q4 Results Updates San

ನಿಮ್ಮಲ್ಲಿ Wipro ಷೇರು ಇದ್ಯಾ? 2023ರ ಬಳಿಕ ಮೊದಲ ಬಾರಿಗೆ ಷೇರು Buyback ಘೋಷಿಸಿದ ಕಂಪನಿ! | Wipro Share Buyback 2026 Announcement Price Premium Q4 Results Updates San



ನಿಮ್ಮಲ್ಲಿ Wipro ಷೇರು ಇದ್ಯಾ? 2023ರ ಬಳಿಕ ಮೊದಲ ಬಾರಿಗೆ ಷೇರು Buyback ಘೋಷಿಸಿದ ಕಂಪನಿ! | Wipro Share Buyback 2026 Announcement Price Premium Q4 Results Updates San

ಭಾರತದ ಪ್ರಮುಖ ಐಟಿ ಸಂಸ್ಥೆ ವಿಪ್ರೋ, ₹15,000 ಕೋಟಿ ಮೊತ್ತದ ಬೃಹತ್ ಶೇರ್ ಬೈಬ್ಯಾಕ್ ಘೋಷಿಸಿದೆ. ಟೆಂಡರ್ ಆಫರ್ ಮೂಲಕ ಪ್ರತಿ ಷೇರಿಗೆ ₹250 ದರದಲ್ಲಿ 60 ಕೋಟಿ ಷೇರುಗಳನ್ನು ಮರುಖರೀದಿ ಮಾಡಲಿದೆ. ಇದರೊಂದಿಗೆ, ಕಂಪನಿಯು ತನ್ನ ನಾಲ್ಕನೇ ತ್ರೈಮಾಸಿಕದ ಆರ್ಥಿಕ ಫಲಿತಾಂಶವನ್ನೂ ಪ್ರಕಟಿಸಿದೆ.

ಬೆಂಗಳೂರು (ಏ.16): ಭಾರತದ ಪ್ರಮುಖ ಐಟಿ ಸೇವಾ ಸಂಸ್ಥೆಯಾದ ವಿಪ್ರೋ ಲಿಮಿಟೆಡ್ (Wipro Ltd.), ಗುರುವಾರ (ಏಪ್ರಿಲ್ 16) ಬರೋಬ್ಬರಿ ₹15,000 ಕೋಟಿ ಮೊತ್ತದ ಶೇರ್ ಬೈಬ್ಯಾಕ್ (Share Buyback) ಘೋಷಿಸಿದೆ. ಸುಮಾರು ಮೂರು ವರ್ಷಗಳ ನಂತರ ಕಂಪನಿಯು ಇಂತಹ ದೊಡ್ಡ ನಿರ್ಧಾರ ಕೈಗೊಂಡಿದೆ. ಕಂಪನಿಯು ಒಟ್ಟು 60 ಕೋಟಿ ಈಕ್ವಿಟಿ ಷೇರುಗಳನ್ನು ಮರುಖರೀದಿ ಮಾಡಲು ಯೋಜಿಸಿದೆ. ಇದು ಕಂಪನಿಯ ಒಟ್ಟು ಪಾವತಿಸಿದ ಈಕ್ವಿಟಿ ಶೇರು ಬಂಡವಾಳದ ಶೇ. 5.7 ರಷ್ಟಿದೆ. ಪ್ರತಿ ಷೇರಿಗೆ ₹250 ದರವನ್ನು ನಿಗದಿಪಡಿಸಲಾಗಿದೆ. ಗುರುವಾರದ ಮಾರುಕಟ್ಟೆ ಮುಕ್ತಾಯದ ಬೆಲೆಗೆ ಹೋಲಿಸಿದರೆ ಇದು ಸುಮಾರು ಶೇ. 19 ರಷ್ಟು ಪ್ರೀಮಿಯಂ (ಹೆಚ್ಚುವರಿ ಲಾಭ) ಹೊಂದಿದೆ.

ಈ ಬೈಬ್ಯಾಕ್ ಪ್ರಕ್ರಿಯೆಯು ‘ಟೆಂಡರ್ ಆಫರ್’ (Tender Offer) ಮೂಲಕ ನಡೆಯಲಿದ್ದು, ಪ್ರವರ್ತಕರು (Promoters) ಮತ್ತು ಪ್ರವರ್ತಕ ಗುಂಪು ಕೂಡ ಇದರಲ್ಲಿ ಭಾಗವಹಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಕಂಪನಿಯಲ್ಲಿ ಪ್ರವರ್ತಕರು ಶೇ. 72.6 ರಷ್ಟು ಪಾಲು ಹೊಂದಿದ್ದಾರೆ.

ವಿಪ್ರೋ ಕೊನೆಯದಾಗಿ 2023ರ ಜೂನ್‌ನಲ್ಲಿ ಬೈಬ್ಯಾಕ್ ನಡೆಸಿತ್ತು. ಅಂದು ₹12,000 ಕೋಟಿ ಮೊತ್ತದ ಮೂಲಕ ಶೇ. 4.91 ರಷ್ಟು ಷೇರುಗಳನ್ನು ಪ್ರತಿ ಷೇರಿಗೆ ₹445 ರಂತೆ ಮರುಖರೀದಿ ಮಾಡಿತ್ತು. 2024ರ ಡಿಸೆಂಬರ್‌ನಲ್ಲಿ ನೀಡಲಾದ 1:1 ಬೋನಸ್ ಇಶ್ಯೂ ನಂತರ ಈಗಿನ ಬೆಲೆ ಬದಲಾಗಿದೆ.

ನಾಲ್ಕನೇ ತ್ರೈಮಾಸಿಕದ ಫಲಿತಾಂಶ

ಬೈಬ್ಯಾಕ್ ಜೊತೆಗೆ ವಿಪ್ರೋ ತನ್ನ ನಾಲ್ಕನೇ ತ್ರೈಮಾಸಿಕದ ಆರ್ಥಿಕ ಫಲಿತಾಂಶವನ್ನೂ ಪ್ರಕಟಿಸಿದೆ. 2027ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಂಪನಿಯ ಬೆಳವಣಿಗೆಯು ಸ್ಥಿರ ಕರೆನ್ಸಿ (CC) ಆಧಾರದ ಮೇಲೆ -2% ರಿಂದ 0% ರಷ್ಟಿರಬಹುದು ಎಂದು ಅಂದಾಜಿಸಿದೆ. CLSA, JPMorgan ಮತ್ತು Morgan Stanley ನಂತಹ ಪ್ರಮುಖ ಬ್ರೋಕರೇಜ್ ಸಂಸ್ಥೆಗಳು ನಿರೀಕ್ಷಿಸಿದ್ದಂತೆಯೇ ಈ ಅಂಕಿ-ಅಂಶಗಳು ಇವೆ. ಗುರುವಾರ ವಿಪ್ರೋ ಷೇರುಗಳು ಶೇ. 0.19 ರಷ್ಟು ಏರಿಕೆ ಕಂಡು ₹210.15 ಕ್ಕೆ ಮುಕ್ತಾಯವಾಗಿದೆ. ಆದರೆ, ಈ ವರ್ಷದಲ್ಲಿ ವಿಪ್ರೋ ಷೇರುಗಳು ಒಟ್ಟಾರೆಯಾಗಿ ಶೇ. 20 ಕ್ಕಿಂತ ಹೆಚ್ಚು ಕುಸಿತ ಕಂಡಿವೆ.



Source link

Leave a Reply

Your email address will not be published. Required fields are marked *