Shivamogga: ಅಂಗಳದಲ್ಲಿ ಆಟವಾಡುತ್ತಿದ್ದ ಕಂದಮ್ಮನಿಗೆ ನಾಗರಹಾವು ಕಡಿತ: ಚಿಕಿತ್ಸೆ ಫಲಿಸದೆ ಸಾವು! | Shivamogga Child Death Snake Bite Sagara Tragedy Gvd

Shivamogga: ಅಂಗಳದಲ್ಲಿ ಆಟವಾಡುತ್ತಿದ್ದ ಕಂದಮ್ಮನಿಗೆ ನಾಗರಹಾವು ಕಡಿತ: ಚಿಕಿತ್ಸೆ ಫಲಿಸದೆ ಸಾವು! | Shivamogga Child Death Snake Bite Sagara Tragedy Gvd



Shivamogga: ಅಂಗಳದಲ್ಲಿ ಆಟವಾಡುತ್ತಿದ್ದ ಕಂದಮ್ಮನಿಗೆ ನಾಗರಹಾವು ಕಡಿತ: ಚಿಕಿತ್ಸೆ ಫಲಿಸದೆ ಸಾವು! | Shivamogga Child Death Snake Bite Sagara Tragedy Gvd

ಬೇಸಿಗೆ ರಜೆಗೆಂದು ಅಜ್ಜಿ ಮನೆಗೆ ಬಂದಿದ್ದ ಎರಡೂವರೆ ವರ್ಷದ ಮಗುವೊಂದು ಹಾವಿನ ಕಡಿತಕ್ಕೆ ಬಲಿಯಾದ ಹೃದಯ ವಿದ್ರಾವಕ ಘಟನೆ ಸಾಗರ ಪಟ್ಟಣದ ಎಸ್‌ಎನ್ ನಗರದಲ್ಲಿ ನಡೆದಿದೆ. ಭವೀನ್ (2.5) ಮೃತಪಟ್ಟ ಬಾಲಕ.

ಶಿವಮೊಗ್ಗ (ಏ.16): ಬೇಸಿಗೆ ರಜೆಗೆಂದು ಅಜ್ಜಿ ಮನೆಗೆ ಬಂದಿದ್ದ ಎರಡೂವರೆ ವರ್ಷದ ಮಗುವೊಂದು ಹಾವಿನ ಕಡಿತಕ್ಕೆ ಬಲಿಯಾದ ಹೃದಯ ವಿದ್ರಾವಕ ಘಟನೆ ಸಾಗರ ಪಟ್ಟಣದ ಎಸ್‌ಎನ್ ನಗರದಲ್ಲಿ ನಡೆದಿದೆ. ಭವೀನ್ (2.5) ಮೃತಪಟ್ಟ ಬಾಲಕ. ಮೃತ ಮಗು ಭವೀನ್ ತನ್ನ ತಂದೆ-ತಾಯಿಯೊಂದಿಗೆ ರಜೆ ಕಳೆಯಲು ಅಜ್ಜಿ ಮನೆಗೆ ಬಂದಿದ್ದನು.

ಮನೆಯ ಮುಂದೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ನಾಗರಹಾವೊಂದು ಮಗುವಿನ ಕೈಗೆ ಕಚ್ಚಿದೆ. ತಕ್ಷಣವೇ ಎಚ್ಚೆತ್ತ ಪೋಷಕರು ಮಗುವನ್ನು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಸಂಜೆ ವೇಳೆಗೆ ಮಗು ಕೊನೆಯುಸಿರೆಳೆದಿದೆ.

ಮಧುಗಿರಿಯಲ್ಲಿ ನಾಗಾರ್ಜುನ ಸಾಗರ ರೇಸರ್ ಹಾವು ಪತ್ತೆ

ಮಧುಗಿರಿ ಪಟ್ಟಣದ ಬೆಟ್ಟದ ಇಳಿಜಾರಿನ ಕಲ್ಲು ಬಂಡೆಗಳಿಂದ ಕೂಡಿದ ಬಂಡೆಯ ಬುಡದಲ್ಲಿ ಅಪರೂಪದ ನಾಗಾರ್ಜುನ ಸಾಗರ ರೇಸರ್ ಹಾವು ಪತ್ತೆಯಾಗಿದ್ದು ಉರಗ ಪ್ರೇಮಿಗಳಿಗೆ ಕುತೂಹಲ ಹೆಚ್ಚಾಗಿದೆ ಎಂದು ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಅಧ್ಯಕ್ಷ ಬಿ.ವಿ.ಗುಂಡಪ್ಪ ತಿಳಿಸಿದ್ದಾರೆ.

ಇದು ರಸೆಲ್ಸ್ ಕುಕ್ರಿ ಹಾವನ್ನು ಹೋಲುತ್ತದೆಯಾದರೂ ಮೊನಚಾದ ತಲೆ,ದೇಹದ ಮೇಲಿನ ಹುರುಪೆಗಳು ಹಾಗೂ ಬಣ್ಣದ ಸಹಾಯದಿಂದ ವ್ಯತ್ಯಾಸ ತಿಳಿಯಬಹುದು. ನೀಳ ದೇಹದ ಮೇಲೆ ಮೃದುವಾದ ಹುರುಪೆಗಳು, ಬೆನ್ನಿನ ಭಾಗದಲ್ಲಿ ಗಾಡವಾದ ಬೂದು ಬಣ್ಣದ ಉಂಗುರಾಕಾರದ ರಚನೆಗಳು ದೇಹದ ಅರ್ದ ಭಾಗದವರೆಗೂ ಕಂಡುಬರುತ್ತವೆ.ದೇಹದ ನಡು ಭಾಗದಿಂದ ಬಾಲದ ತುದಿಯವರೆಗೆ ಉಂಗುರಾಕಾರದ ರಚನೆಗಳು ಕಂಡು ಬರುವುದಿಲ್ಲ.

ದಕ್ಷಿಣ ಭಾರತದ ದಖನ್ ಪ್ರಸ್ಥಭೂಮಿಯಲ್ಲಿ ಮಾತ್ರ ಕಂಡು ಬರುವ ಈ ಹಾವು 1976 ರಲ್ಲಿ ಆಂಧ್ರ ಪ್ರದೇಶದ ಗೂಂಟೂರು ಜಿಲ್ಲೆಯ ನಾಗಾರ್ಜುನ ಬೆಟ್ಟದಲ್ಲಿ ಕಂಡು ಬಂದಿದ್ದರಿಂದ ಈ ಹಾವಿಗೆ ಈ ಹೆಸರಿಟ್ಟಿದ್ದಾರೆ. ಈ ಹಾವುಗಳು ಶತೃಗಳಿಂದ ರಕ್ಷಸಿ ಕೊಳ್ಳಲು ಹಾಗೂ ಆಹಾರ ಜೀವಿಗಳನ್ನು ಹಿಡಿಯಲು ವೇಗ ಗತಿಯಲ್ಲಿ ಸಾಗುವುದರಿಂದ ರೇಸರ್ ಹೆಸರು ಬಂದಿದೆ. ಇದು ವಿಷ ರಹಿತ ಹಾವಾಗಿದ್ದು ಮಾನವರಿಗೆ ಯಾವುದೇ ಹಾನಿ ಇಲ್ಲ. ಹಗಲು ಹೊತ್ತಿನಲ್ಲಿ ಹಲ್ಲಿ,ಓತಿ, ಹಾವುರಾಣಿ, ಸಣ್ಣ ಇಲಿ ಮರಿಗಳನ್ನು ತಿಂದು ಕಲ್ಲಿನ ಪೊಟರೆಗಳಲ್ಲಿ ವಾಸಿಸುತ್ತದೆ ಎಂದು ತಿಳಿಸಿದ್ದಾರೆ.



Source link

Leave a Reply

Your email address will not be published. Required fields are marked *