ಸುಡುವ ಬಿಸಿಲಲ್ಲಿ 5 ವರ್ಷದ ಮೊಮ್ಮಗಳ ಕೈಕಾಲು ಕಟ್ಟಿ ನೆಲದಲ್ಲಿ ಮಲಗಿಸಿದ ASI ಅಜ್ಜಿ, ಸಸ್ಪೆಂಡ್‌ ಮಾಡಿದ ಸರ್ಕಾರ | Punjab Police Asi Suspended Granddaughter Tied Up In Hot Sun Faridkot Video San

ಪಂಜಾಬ್‌ನ ಫರೀದ್‌ಕೋಟ್‌ನಲ್ಲಿ, ಎಎಸ್‌ಐ ಸರಬ್ಜಿತ್ ಕೌರ್ ಎಂಬುವವರು ತಮ್ಮ ಮೊಮ್ಮಗಳನ್ನು ಬಿಸಿಲಿನಲ್ಲಿ ಕಟ್ಟಿಹಾಕಿದ ಅಮಾನವೀಯ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆದ ನಂತರ, ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಫರೀದ್‌ಕೋಟ್‌ (ಏ.16): ರಕ್ಷಣೆ ನೀಡಬೇಕಾದ ಪೊಲೀಸರೇ ಕ್ರೌರ್ಯ ಮೆರೆದ ಘಟನೆಯೊಂದು ಪಂಜಾಬ್‌ನಲ್ಲಿ ನಡೆದಿದೆ. ತನ್ನ ಮೊಮ್ಮಗಳ ಕೈಕಾಲುಗಳನ್ನು ಬಟ್ಟೆಯಿಂದ ಕಟ್ಟಿ, ಸುಡುವ ಬಿಸಿಲಿನಲ್ಲಿ ನೆಲದಲ್ಲಿ ಮಲಗಿಸಿದ್ದ ಪೊಲೀಸ್ ಎಎಸ್‌ಐ (ASI) ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಎಎಸ್‌ಐ ಆಗಿ ಕಾರ್ಯನಿರ್ವಹಿಸುತ್ತಿರುವ ಸರಬ್ಜಿತ್ ಕೌರ್ ಎಂಬುವವರು ತಮ್ಮ ಮೊಮ್ಮಗಳನ್ನು ಮನೆಯ ಗೇಟ್‌ಗೆ ಬಟ್ಟೆಯಿಂದ ಕೈಕಾಲು ಕಟ್ಟಿ ಹಾಕಿದ್ದರು. ಬಾಲಕಿ ಬಿಸಿಲಿನಲ್ಲಿ ನಿಲ್ಲಲಾರದೆ ಜೋರಾಗಿ ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಈ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಮಗುವಿನ ಎದೆ ಸೀಳುವಂತಹ ಅಳು ಕೇಳಿದ ನೆರೆಹೊರೆಯವರು ತಕ್ಷಣ ಧಾವಿಸಿ ಬಂದಿದ್ದಾರೆ. ಅಲ್ಲಿ ಮಗುವನ್ನು ಕಟ್ಟಿ ಹಾಕಿರುವುದನ್ನು ಕಂಡು ದಂಗಾದ ಅವರು, ಕೂಡಲೇ ವಿಡಿಯೋ ರೆಕಾರ್ಡ್ ಮಾಡಿಕೊಂಡು ಮಗುವಿನ ಕೈಕಾಲುಗಳನ್ನು ಬಿಡಿಸಿ ರಕ್ಷಿಸಿದ್ದಾರೆ. ಈ ವಿಡಿಯೋ ಇಂಟರ್ನೆಟ್‌ನಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಯಿತು.

ವಿದೇಶದಲ್ಲಿರುವ ಪೋಷಕರು

ಪೊಲೀಸರ ಮಾಹಿತಿಯ ಪ್ರಕಾರ, ಈ ಬಾಲಕಿಯ ಪೋಷಕರು ಪೋರ್ಚುಗಲ್‌ನಲ್ಲಿ ವಾಸಿಸುತ್ತಿದ್ದಾರೆ. ಮಗುವಿನ ಆರೈಕೆಗಾಗಿ ಅಜ್ಜಿಯ ಬಳಿ ಬಿಟ್ಟು ಹೋಗಿದ್ದರು. ಆದರೆ, ‘ಮಹಿಳಾ ಮಿತ್ರ’ (ಮಹಿಳಾ ಸಹಾಯವಾಣಿ) ವಿಭಾಗದಲ್ಲಿ ಎಎಸ್‌ಐ ಆಗಿ ಕೆಲಸ ಮಾಡುತ್ತಿದ್ದ ಸರಬ್ಜಿತ್ ಕೌರ್, ಮಗುವಿಗೆ ಈ ರೀತಿಯ ಶಿಕ್ಷೆ ನೀಡಿರುವುದು ಎಲ್ಲರನ್ನೂ ಆಘಾತಕ್ಕೀಡು ಮಾಡಿದೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಫರಿದ್ಕೋಟ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ಪ್ರಜ್ಞಾ ಜೈನ್ ಅವರು ತಕ್ಷಣವೇ ಎಎಸ್‌ಐ ಸರಬ್ಜಿತ್ ಕೌರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ. ಡಿಎಸ್‌ಪಿ ತರ್ಲೋಚನ್ ಸಿಂಗ್ ಮಾತನಾಡಿ, “ಪೊಲೀಸ್ ಪಡೆಯಲ್ಲಿದ್ದರೂ ಮಗುವನ್ನು ಸುಡುವ ಬಿಸಿಲಿನಲ್ಲಿ ಕಟ್ಟಿಹಾಕಿರುವುದು ಸ್ವೀಕಾರಾರ್ಹವಲ್ಲದ ನಡೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಪ್ರಕರಣವನ್ನು ಮಕ್ಕಳ ಕಲ್ಯಾಣ ಸಮಿತಿಗೆ (CWC) ಒಪ್ಪಿಸಲಾಗಿದೆ” ಎಂದು ತಿಳಿಸಿದ್ದಾರೆ.

Scroll to load tweet…

Source link

Leave a Reply

Your email address will not be published. Required fields are marked *