ಕಾರ್ಪೊರೇಟ್ ಜಿಹಾದ್ ಗುಟ್ಟು ರಟ್ಟಾಗಿದ್ದೇಗೆ? ಪೊಲೀಸರ ಮಾರುವೇಷದ ಕಾರ್ಯಾಚರಣೆ ಹೇಗಿತ್ತು? | How Did The Tcs Corporate Jihad Case Come To Light What Was The Police Undercover Operation Like Mrq

ಕಾರ್ಪೊರೇಟ್ ಜಿಹಾದ್ ಗುಟ್ಟು ರಟ್ಟಾಗಿದ್ದೇಗೆ? ಪೊಲೀಸರ ಮಾರುವೇಷದ ಕಾರ್ಯಾಚರಣೆ ಹೇಗಿತ್ತು? | How Did The Tcs Corporate Jihad Case Come To Light What Was The Police Undercover Operation Like Mrq



ಕಾರ್ಪೊರೇಟ್ ಜಿಹಾದ್ ಗುಟ್ಟು ರಟ್ಟಾಗಿದ್ದೇಗೆ? ಪೊಲೀಸರ ಮಾರುವೇಷದ ಕಾರ್ಯಾಚರಣೆ ಹೇಗಿತ್ತು? | How Did The Tcs Corporate Jihad Case Come To Light What Was The Police Undercover Operation Like Mrq

ನಾಸಿಕ್‌ನ ಟಿಸಿಎಸ್ ಬಿಪಿಒದಲ್ಲಿ ನಡೆದ ‘ಕಾರ್ಪೊರೇಟ್ ಜಿಹಾದ್’ ಪ್ರಕರಣವು, ಮಾರುವೇಷದ ಪೊಲೀಸ್ ಕಾರ್ಯಾಚರಣೆಯಿಂದ ಬಯಲಾಗಿದೆ. ಈ ತನಿಖೆಯಲ್ಲಿ ಲೈಂ*ಗಿಕ ಶೋಷಣೆ, ಮತಾಂತರ ಯತ್ನ, ಮತ್ತು ವಿದೇಶಿ ನಂಟಿನಂತಹ ಆಘಾತಕಾರಿ ವಿಷಯಗಳು ಬೆಳಕಿಗೆ ಬಂದಿದ್ದು, ಹಲವರನ್ನು ಬಂಧಿಸಲಾಗಿದೆ.

ನಾಸಿಕ್: ದೇಶಾದ್ಯಂತ ಭಾರೀ ಸದ್ದು ಮಾಡುತ್ತಿರುವ ಇಲ್ಲಿನ ಟಿಸಿಎಸ್ ಕಂಪನಿಯ ಬಿಪಿಒದಲ್ಲಿ ನಡೆದ ಕಾರ್ಪೊರೇಟ್ ಜಿಹಾದ್ ಪ್ರಕರಣವು ಬೆಳಕಿಗೆ ಬಂದ ಬಗೆ ಮತ್ತು ಪೊಲೀಸರು ಅದರ ತನಿಖೆ ನಡೆಸಿದ ರೀತಿಯ ಬಗೆಗಿನ ಮಾಹಿತಿಗಳು ಇದೀಗ ಬಹಿರಂಗವಾಗಿದೆ. ರಾಜಕೀಯ ಪಕ್ಷವೊಂದರ ಕಾರ್ಯಕರ್ತರೊಬ್ಬರು, ಈ ಬಿಪಿಒದಲ್ಲಿ ಕೆಲಸಮಾಡುತ್ತಿದ್ದ ಹಿಂದೂ ಯುವತಿಯೊಬ್ಬಳು ರಂಜಾನ್ ಮಾಸದಲ್ಲಿ ಉಪವಾಸ ಮಾಡುತ್ತಿದ್ದುದನ್ನು ಗಮನಿಸಿದ್ದರು. ಕೂಡಲೇ ಅವರು ನಾಸಿಕ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಇದರ ಬೆನ್ನಲ್ಲೇ ಪೊಲೀಸರು ಆ ಯುವತಿಯ ಮನೆಯವರನ್ನು ಸಂಪರ್ಕಿಸಿದಾಗ, ‘ಅವಳ ಧಾರ್ಮಿಕ ಆಚರಣೆಗಳಲ್ಲಿ ಕೆಲ ಬದಲಾವಣೆಗಳು ಕಂಡ ಕಾರಣ ಕೆಲಸ ಬಿಡಿಸಿದ್ದೇವೆ’ ಎಂಬ ಉತ್ತರ ಸಿಕ್ಕಿತು. ಇದರಿಂದ ಪೊಲೀಸರಿಗಿದ್ದ ಅನುಮಾನ ಗಾಢವಾಗಿ, ತನಿಖೆಗೆ ಮುನ್ನುಡಿ ಬರೆಯಿತು ಎಂಬ ವಿಷಯ ಬೆಳಕಿಗೆ ಬಂದಿದೆ.

ಮಾರುವೇಷದಲ್ಲಿ ಪೊಲೀಸ್‌ ಕಾರ್ಯಾಚರಣೆ

ಐಪಿಒದಲ್ಲಿ ನಡೆಯುತ್ತಿದ್ದ ಘಟನೆಗಳ ಬಗ್ಗೆ ಅಲ್ಲಿನವರ್ಯಾರೂ ನೇರವಾಗಿ ದೂರು ನೀಡಿರದ ಕಾರಣ 4 ಪೊಲೀಸ್ ಕಾನ್‌ಸ್ಟೇಬಲ್‌ಗಳನ್ನು ಮಾರುವೇಷದಲ್ಲಿ ಕಚೇರಿಗೆ ಕಳುಹಿಸಲಾಯಿತು. ಕೆಲಸದವರಾಗಿ ಸೇರಿಕೊಂಡ ಆ ನಾಲ್ವರು 2 ವಾರಗಳ ಕಾಲ ತಮ್ಮ ಸುತ್ತಮುತ್ತ ನಡೆಯುವ ಚಟುವಟಿಕೆ ಗಮನಿಸಿ ಸಂಗ್ರಹಿಸಿದ್ದ ಮಾಹಿತಿಗಳು ಕಾರ್ಪೊರೇಟ್ ಜಿಹಾದ್‌ಗೆ ಸೂಕ್ತ ಸಾಕ್ಷ ಒದಗಿಸಲು ಶಕ್ತವಾಗಿವೆ ಎಂಬುದು ದೃಢವಾಗುತ್ತಿದ್ದಂತೆ ಎಸ್‌ಐಟಿ ರಚನೆಯಾಯಿತು.

Scroll to load tweet…

ಕೆಲಸ ಬಿಟ್ಟಿದ್ದ ಮಹಿಳೆ, ಟಿಸಿಎಸ್ ಉದ್ಯೋಗಿ ಡ್ಯಾನಿಶ್ ಶೇಖ್ ಎಂಬ ವಿವಾಹಿತನ ಜತೆ ಸಂಬಂಧದಲ್ಲಿದ್ದಳು. ಆತ ಮದುವೆಯಾಗುವ ಭರವಸೆ ನೀಡಿ ಲೈಂಗಿ*ಕವಾಗಿ ಬಳಸಿಕೊಂಡದ್ದಲ್ಲದೆ, ಮತಾಂತರಕ್ಕೂ ಯತ್ನಿಸಿದ್ದ ಕಾರಣ ಅತ್ಯಾ*ಚಾರ ಮತ್ತು ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಆರೋಪದ ಮೇಲೆ ಎಫ್‌ ಐಆರ್ ದಾಖಲಿಸಲಾಯಿತು. ಬಳಿಕ ಆತನ ಬಂಧನವಾಯಿತು.

ಇಡೀ ಪ್ರಕರಣ ಬಯಲಿಗೆ ಬಂದಿದ್ದು ಹೇಗೆ?

ಡ್ಯಾನಿಶ್ ಹಾಗೂ ಆತನ ಸ್ನೇಹಿತನನ್ನು ಬಂಧಿಸಿ ಮೊಬೈಲ್ ಪರಿಶೀಲಿಸಿದ ವೇಳೆ, ಅವರ ಹಿಂದೂ ಸಹೋದ್ಯೋಗಿ ಮಹಿಳೆಯರು ಮುಸಲ್ಮಾನರ ದಿರಿಸು ಧರಿಸಿದ್ದ ಫೋಟೋ ದೊರಕಿದವು. ಆದರೆ ಅತ್ತ ಇಬ್ಬರ ಬಂಧನವಾಗಿರುವುದರ ಅರಿವಿಲ್ಲದ ಮಹಿಳೆಯರು, ಕೆಲಸ ಕಳೆದುಕೊಳ್ಳುವ ಭೀತಿಯಿಂದ ದೂರು ಕೊಡಲು ಹಿಂಜರಿದರು. ಆದರೆ ಬಳಿಕ ಲೈಂ*ಗಿಕ ಶೋಷಣೆ, ಧರ್ಮದ ಹೇರಿಕೆ, ವೈಯಕ್ತಿಕ ನಿಂದನೆ, ಅಸಭ್ಯ ವರ್ತನೆ, ಸಹಕರಿಸದಿದ್ದರೆ ಅಧಿಕ ಕೆಲಸದಂತಹ ಕಷ್ಟಗಳ ಬಗ್ಗೆ ಬಾಯಿಟ್ಟರು. ಪರಿಣಾಮ 9 ಎಫ್‌ಐಆರ್ ಗಳು ದಾಖಲಾಗಿ, 7 ಜನರ ಬಂಧನವಾಗಿದೆ. ಇವರಿಗೆಲ್ಲಾ ನಮಾಜ್ ಕಲಿಸುತ್ತಿದ್ದ ಎಚ್ ಆರ್ ವಿಭಾಗದ ನಿದಾ ಖಾನ್ ಪರಾರಿಯಾಗಿದ್ದು, ಆಕೆಗಾಗಿಯೂ ಬಲೆ ಬೀಸಲಾಗಿದೆ.

ಇದನ್ನೂ ಓದಿ: ದೊಡ್ಡ ಕಂಪನಿಗಳಲ್ಲಿ ನಡೆಯುತ್ತಿದೆಯಾ ಕಾರ್ಪೋರೇಟ್ ಜಿಹಾದ್? ಹಿಂದೂ ಹೆಣ್ಣುಮಕ್ಕಳೇ ಟಾರ್ಗೆಟ್

ಮಲೇಷ್ಯಾ ನಂಟು?

ಮತಾಂತರ ಯತ್ನದ ಈ ಪ್ರಕರಣಕ್ಕೆ ವಿದೇಶದ ನಂಟು ಇರುವ ಬಗ್ಗೆಯೂ ಅನುಮಾನ ಮೂಡಿಸುವಂತಹ ಮಾಹಿತಿ ಬೆಳಕಿಗೆ ಬಂದಿದೆ. ಮಲೇಷ್ಯಾ ಮೂಲದ ಇಮ್ರಾನ್ ಎಂಬಾತನ ಜತೆ ಆರೋಪಿಗಳ ವಾಟ್ಸಪ್ ಸಂಭಾಷಣೆ ಬಹಿರಂಗವಾಗಿದೆ. ವಿಡಿಯೋ ಕರೆಯ ಮೂಲಕ ಸಂತ್ರಸ್ತರಿಗೆ ಈತನ ಪರಿಚಯ ಮಾಡಿಸಲಾಗಿತ್ತು. ಇವನು ಮಹಿಳೆಯರ ಜತೆ, ವಿದೇಶದಲ್ಲಿ ಕೆಲಸ ಹುಡುಕಿ ಉತ್ತಮ ಜೀವನ ಕಟ್ಟಿ ಕೊಳ್ಳುವ ಬಗ್ಗೆ ಮಾತನಾಡುತ್ತಿದ್ದ ಹಾಗೂ ಅದಕ್ಕೆ ಉತ್ತೇಜಿಸುತ್ತಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಮುಂಬಡ್ತಿ ಬೇಕೆಂದ್ರೆ ಗೋಮಾಂಸ ತಿನ್ನಿ; ಮಹಾರಾಷ್ಟ್ರ ಐಟಿ ಕಂಪನಿಯಲ್ಲಿ ಕಾರ್ಪೊರೆಟ್‌ ಜಿಹಾದ್‌ ಸದ್ದು!



Source link

Leave a Reply

Your email address will not be published. Required fields are marked *