
ಪಾಕಿಸ್ತಾನ್ ತಂಡದ ಸ್ಟಾರ್ ಬ್ಯಾಟರ್ ಬಾಬರ್ ಆಝಂ ಟೆಸ್ಟ್ ಶತಕ ಬಾರಿಸದೇ ಮೂರು ವರ್ಷಗಳೇ ಕಳೆದಿವೆ. ಈ ಕಾಯುವಿಕೆ ಇದೀಗ ಸೌತ್ ಆಫ್ರಿಕಾ ವಿರುದ್ಧ ಸರಣಿಯಲ್ಲೂ ಮುಂದುವರೆದಿದೆ. ಲಾಹೋರ್ನಲ್ಲಿ ನಡೆದ ಮೊದಲ ಪ್ರದರ್ಶನ ಬಾಬರ್ 23, 42 ರನ್ ಗಳಿಸಿದ್ದರು.

ಇದೀಗ ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಕೇವಲ 16 ರನ್ ಗಳಿಸಿ ದಾಖಲೆ ಒಪ್ಪಿಸಿದ್ದಾರೆ. ಅಂದರೆ 2022 ರಿಂದ 28 ಟೆಸ್ಟ್ ಇನಿಂಗ್ಸ್ ಆಡಿರುವ ಬಾಬರ್ ಒಮ್ಮೆ ಸೆಂಚುರಿ ಬಾರಿಸಲು ಸಾಧ್ಯವಾಗಿಲ್ಲ.

ಇನ್ನು ಬಾಬರ್ ಆಝಂ ಕೊನೆಯ ಬಾರಿಗೆ ಟೆಸ್ಟ್ ಸೆಂಚುರಿ ಸಿಡಿಸಿದ್ದು 2022 ರಲ್ಲಿ. ಕರಾಚಿಯಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧ 161 ರನ್ ಬಾರಿಸಿದ್ದು ಕೊನೆ. ಇದಾದ ಬಳಿಕ ಅವರಿಗೆ ಮೂರಂಕಿ ಮೊತ್ತ ಗಳಿಸಲು ಸಾಧ್ಯವಾಗಿಲ್ಲ ಎಂಬುದೇ ಅಚ್ಚರಿ.

ಅಷ್ಟೇ ಅಲ್ಲದೆ ಕಳೆದ 28 ಟೆಸ್ಟ್ ಇನಿಂಗ್ಸ್ಗಳಲ್ಲಿ ಕಲೆಹಾಕಿದ್ದು ಕೇವಲ 651 ರನ್ಗಳು ಮಾತ್ರ. ಇದರ ನಡುವೆ ಬಾರಿಸಿರುವುದು ಕೇವಲ 3 ಅರ್ಧಶತಕಗಳನ್ನು ಮಾತ್ರ ಎಂದರೆ ನಂಬಲೇಬೇಕು. ಕೇವಲ 24 ರ ಸರಾಸರಿಯಲ್ಲಿ ರನ್ ಕಲೆಹಾಕಿರುವ ಬಾಬರ್ ಆಝಂ ಅವರ ತಂಡದಿಂದ ಕೈ ಬಿಡಬೇಕೆಂಬ ಕೂಗುಗಳು ಕೇಳಿ ಬರಲಾರಂಭಿಸಿದೆ.

ಒಟ್ಟಿನಲ್ಲಿ 1030 ದಿನಗಳಿಂದ ಟೆಸ್ಟ್ ಶತಕದ ಬರ ಅನುಭವಿಸುತ್ತಿರುವ ಬಾಬರ್ ಆಝಂ ಇದೀಗ ಟೆಸ್ಟ್ ತಂಡದಿಂದ ಹೊರಬೀಳುವ ಭೀತಿಯಲ್ಲಿದ್ದಾರೆ. ಇದಾಗ್ಯೂತ್ ಆಫ್ರಿಕಾ ವಿರುದ್ಧದ 2 ನೇ ಟೆಸ್ಟ್ ಪಂದ್ಯದ ಮೂಲಕ ದ್ವಿತೀಯ ಇನಿಂಗ್ಸ್ ಸಾವಿರ ದಿನಗಳ ಕಾಯುವಿಕೆಯನ್ನು ಅಂತ್ಯಗೊಳಿಸಲಿದ್ದಾರಾ ಕಾದು ನೋಡಬೇಕಾಗಿದೆ.
ರಂದು ಪ್ರಕಟಿಸಲಾಗಿದೆ – 9:53 am, ಮಂಗಳವಾರ, 21 ಅಕ್ಟೋಬರ್ 25