ಗಾಂಧಿ ಗ್ರಾಮ ಪುರಸ್ಕೃತ ಪಂಚಾಯತ್​​ ವ್ಯಾಪ್ತಿಯಲ್ಲಿಲ್ಲ ಕನಿಷ್ಠ ಮೂಲಸೌಕರ್ಯ: ಹನಿ ನೀರಿಗೂ ಜನರ ಪರದಾಟ!

ಗಾಂಧಿ ಗ್ರಾಮ ಪುರಸ್ಕೃತ ಪಂಚಾಯತ್​​ ವ್ಯಾಪ್ತಿಯಲ್ಲಿಲ್ಲ ಕನಿಷ್ಠ ಮೂಲಸೌಕರ್ಯ: ಹನಿ ನೀರಿಗೂ ಜನರ ಪರದಾಟ!


ನೀರಿಗಾಗಿ ಮಹಿಳೆಯರ ಪರದಾಟಚಿತ್ರ ಕ್ರೆಡಿಟ್ ಮೂಲ: ಟಿವಿ9 ಕನ್ನಡ

ಬೀದರ್, ಏಪ್ರಿಲ್ 16: ತೆಲಂಗಾಣ ರಾಜ್ಯದ ಗಡಿ ಹಂಚಿಕೊಂಡಿರುವ ಬೀದರ್ ಜಿಲ್ಲೆಯ ಓರಾದ ತಾಲೂಕಿನ ಜಂಬಗಿ ಗ್ರಾಮ ಪಂಚಾಯತ್ 2025 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ. ಹೀಗಿದ್ದರೂ ಈ ಪಂಚಾಯತ್‌ನ ಉದ್ದೇಶ ಮೂಲಸೌಕರ್ಯ ಎಂಬುದು ಮಾತ್ರ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ. ಕುಡಿಯುವ ನೀರಿಗೂ ಜನರು ಪರದಾಡಬೇಕಾದ ಸ್ಥಿತಿ ಇದ್ದು, ತಿನ್ನುವುದು ಎಂಬುದಂತೂ ಬಲು ದೂರದ ಮಾತು. ಜಂಬಗಿ ಸೇರಿದಂತೆ ಐದು ಗ್ರಾಮಗಳು ಈ ಪಂಚಾಯತ್ ವ್ಯಾಪ್ತಿಗೆ ಬರುತ್ತವೆ. 13 ತಾಂಡಾಗಳನ್ನು ಹೊಂದಿರುವ ಈ ಪಂಚಾಯತ್‌ಗೆ ಒಟ್ಟು 28 ಜನ ಸದಸ್ಯರಿದ್ದಾರೆ. ಆದರೂ ಜನರ ಪರದಾಟ ಕೇಳೋರು ಮಾತ್ರ ಯಾರೂ ಇಲ್ಲ ಎನ್ನುವ ಸ್ಥಿತಿ ಇಲ್ಲ.

ಆಡಳಿತ ಮತ್ತು ಪಾರದರ್ಶಕತೆ, ಹಸಿರು, ಮೂಲಸೌಕರ್ಯ ಮತ್ತು ಅಭಿವೃದ್ಧಿ, ಆರ್ಥಿಕ ಸ್ವಾವಲಂಬನೆ ಸೇರಿದಂತೆ ಹತ್ತು ಹಲವು ಕ್ಷೇತ್ರಗಳ ಆಧಾರದಲ್ಲಿ ಸರ್ಕಾರ ಗಾಂಧಿ ಗ್ರಾಮ ಪುರಸ್ಕಾರ ನೀಡಲಾಗುತ್ತದೆ. ಆದರೆ ಅದೇ ಪ್ರಶಸ್ತಿಗೆ ಭಾಜನವಾಗಿರುವ ಈ ಪಂಚಾಯತ್‌ನಲ್ಲಿ ಜನ, ಜಾನುವಾರುಗಳು ಹನಿ ನೀರಿಗೂ ಪರದಾಡಬೇಕಾಗಿದೆ. ಗ್ರಾಮದಲ್ಲಿ ಜಲ ಜೀವನ ಮಿಷನ್ ಯೋಜನೆಯಡಿ ಮನೆ ಮನೆಗೆ ಅಳವಡಿಸಲಾಗಿದೆಯಾದರೂ ಈವರೆಗೆ ಒಂದು ಹನಿ ನೀರು ಬಂದಿಲ್ಲ. ಹೀಗಾಗಿ ನೀರು ಬೇಕೆಂದರೆ ಕಿಲೋಮೀಟರ್ ಗಟ್ಟಲೆ ದೂರವನ್ನು ಗ್ರಾಮಸ್ಥರು ಸಾಗಬೇಕಾಗಿದೆ. ಈ ವಿಚಾರದ ಬಗ್ಗೆ ಹತ್ತಾರು ಸಲ ಗ್ರಾಮಸ್ಥರು ಮೇಲಾಧಿಕಾರಿಗೆ ಗಮನಕ್ಕೆ ತಂದರು ಕೂಡ ಯಾವುದಾದರೂ ಪ್ರಯೋಜನವಾಗಿಲ್ಲ. ಹೀಗಾಗಿ ಗ್ರಾಮಸ್ಥರು ಬೋರ್ವೆಲ್ ನೀರನ್ನೇ ಅವಲಂಬಿಸಿ ಬದುಕಬೇಕಿದೆ ಎಂಬುದು ಸ್ಥಳೀಯ ಮಹಿಳೆಯರ ಆಕ್ರೋಶ.

ಇದನ್ನೂ ಓದಿ: ಈರುಳ್ಳಿ ಬೀಜದ ದರ ಅರ್ಧದಷ್ಟು ಇಳಿಕೆ; ರೈತರಲ್ಲಿ ಕಣ್ಣೀರು ತರಿಸಿದ ಈರುಳ್ಳಿ

ಹೀಗೆ ಹತ್ತಾರು ಸಮಸ್ಯೆಗಳಿಂದ ಬಳಲುತ್ತಿರುವ ಜಂಬಗಿ ಗ್ರಾಮ ಪಂಚಾಯತ್‌ಗೆ ಅದ್ಯಾವ ಸ್ಥಳವನ್ನು ಪರಿಗಣಿಸಿ ಸರ್ಕಾರ ಗಾಂಧಿ ಗ್ರಾಮಪುರಸ್ಕಾರ ನೀಡಿದೆಯೋ ಗೊತ್ತಿಲ್ಲ. ಗ್ರಾಮದಲ್ಲಿರುವ ಪಂಚಾಯತ್ ಶೀಘ್ರ ಪರಿಹರಿಸಿದರೆ ನಮಗೆ ದೊಡ್ಡ ಸಹಾಯ ಎಂದು ಗ್ರಾಮಸ್ಥರು ಅಲವತ್ತುಕೊಂಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *