ದರ್ಶನ್​ಗೆ ಮುಖ ತೋರಿಸಲು ಸಾಧ್ಯವಾಗದೇ ಊರು ಬಿಟ್ಟೆ: ಎಲ್ಲವನ್ನೂ ಹೇಳಿದ ಮಲ್ಲಿಕಾರ್ಜುನ್

ದರ್ಶನ್​ಗೆ ಮುಖ ತೋರಿಸಲು ಸಾಧ್ಯವಾಗದೇ ಊರು ಬಿಟ್ಟೆ: ಎಲ್ಲವನ್ನೂ ಹೇಳಿದ ಮಲ್ಲಿಕಾರ್ಜುನ್


ನಟ ದರ್ಶನ್ (ದರ್ಶನ್) ಅವರಿಗೆ ಮ್ಯಾನೇಜರ್ ಆಗಿದ್ದ ಮಲ್ಲಿಕಾರ್ಜುನ್ ಹಲವು ವರ್ಷಗಳಿಂದ ನಾಪತ್ತೆ ಆಗಿದ್ದರು. ಅವರು ಬದುಕಿಲ್ಲ ಎಂಬ ಅಭಿಪ್ರಾಯ ಕೂಡ ಕೆಲವರಿಗೆ ಇತ್ತು. ಆದರೆ ಈಗ ಮಲ್ಲಿಕಾರ್ಜುನ್ ಅವರು ಏಕಾಏಕಿ ಪ್ರತ್ಯಕ್ಷ ಆಗಿದ್ದಾರೆ. ತಾವು ಬಿಟ್ಟು ಹೋಗಿ ಕಣ್ಮರೆ ಆಗಲು ಕಾರಣ ಏನು ಎಂದು ಅವರು ಈಗ ವಿವರಿಸಿದ್ದಾರೆ. ‘ತುಂಬಾ ಸಾಲ ಮಾಡಿಕೊಂಡಿದ್ದೆ. ಹಲವಾರು ಬಿಸ್ನೆಸ್ ನಲ್ಲಿ ದುಡ್ಡು ಹಾಕಿ ಕಳೆದುಕೊಂಡಿದ್ದೆ. ತುಂಬ ಸಾಲ ಆಗಿದೆ. ಅದನ್ನು ಎದುರಿಸಲು ಸಾಧ್ಯವಾಗದೆ ನಾನು ಬಿಡಬೇಕಾಗಿದೆ. ಇದೆಲ್ಲವೂ ದರ್ಶನ್ ಅವರಿಗೆ ಗೊತ್ತಾದರೆ ಅವರು ಬೇಜಾರು ಮಾಡಿಕೊಳ್ಳುತ್ತಾರೆ ಅಂತ ಅನಿಸಿತು. ಆದಾಗಲೇ ಅವರು ನನಗೆ ಸಹಾಯ ಮಾಡಿದರು. ಪದೇ ಪದೇ ಅವರನ್ನೇ ಕೇಳೋದು ಸರಿ ಇರಲ್ಲ. ಅವರಿಗೆ ಹೇಗೆ ಮುಖ ತೋರಿಸೋದು ಅಂತ ಮುಜುಗರ. ಆ ಸಂದರ್ಭದಲ್ಲಿ ಅನಿವಾರ್ಯವಾಗಿ ಬಿಡಬೇಕಾದ ಪರಿಸ್ಥಿತಿ ಬಂತು’ ಎಂದು ಮಲ್ಲಿಕಾರ್ಜುನ್ ಹೇಳಿದರು (ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *