Headlines

Late Night Eating: ರಾತ್ರಿ ಹೊತ್ತು ತಡವಾಗಿ ಊಟ ಮಾಡ್ತೀರಾ? ಹಾಗಿದ್ರೆ ಲಿವರ್‌ಗೆ ಕಾದಿದೆ ಅಪಾಯ! | Health Risks Of Late Night Dinner And Irregular Eating Habits Gvd

Late Night Eating: ರಾತ್ರಿ ಹೊತ್ತು ತಡವಾಗಿ ಊಟ ಮಾಡ್ತೀರಾ? ಹಾಗಿದ್ರೆ ಲಿವರ್‌ಗೆ ಕಾದಿದೆ ಅಪಾಯ! | Health Risks Of Late Night Dinner And Irregular Eating Habits Gvd



Late Night Eating: ರಾತ್ರಿ ಹೊತ್ತು ತಡವಾಗಿ ಊಟ ಮಾಡ್ತೀರಾ? ಹಾಗಿದ್ರೆ ಲಿವರ್‌ಗೆ ಕಾದಿದೆ ಅಪಾಯ! | Health Risks Of Late Night Dinner And Irregular Eating Habits Gvd

ರಾತ್ರಿ ಹೊತ್ತು ತಡವಾಗಿ ಊಟ ಮಾಡುವುದು ಮತ್ತು ಸಮಯಕ್ಕೆ ಸರಿಯಾಗಿ ತಿನ್ನದೇ ಇರುವುದು ನಿಮ್ಮ ಲಿವರ್ ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಇದರಿಂದ ‘ನಾನ್-ಆಲ್ಕೊಹಾಲಿಕ್ ಫ್ಯಾಟಿ ಲಿವರ್’ ಕಾಯಿಲೆ ಬರುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಇವತ್ತಿನ ಬ್ಯುಸಿ ಲೈಫ್‌ಸ್ಟೈಲ್‌ನಲ್ಲಿ ನಮ್ಮಲ್ಲಿ ಹಲವರು ಸರಿಯಾದ ಸಮಯಕ್ಕೆ ಊಟ ಮಾಡುವುದೇ ಇಲ್ಲ. ಕೆಲಸದ ಒತ್ತಡದಲ್ಲಿ ಕೆಲವರು ಬೆಳಗಿನ ತಿಂಡಿಯನ್ನೇ ಮರೆತುಬಿಡುತ್ತಾರೆ. ಸಮಯಕ್ಕೆ ಸರಿಯಾಗಿ ಊಟ ಮಾಡದೆ, ಕಂಡ ಕಂಡ ಸ್ನ್ಯಾಕ್ಸ್ ತಿನ್ನುವುದು ಮತ್ತು ರಾತ್ರಿ ತಡವಾಗಿ ಊಟ ಮಾಡುವುದು ಒಂದು ಕೆಟ್ಟ ಅಭ್ಯಾಸವಾಗಿಬಿಟ್ಟಿದೆ. “ನೀವು ಏನು ತಿನ್ನುತ್ತೀರಿ ಅದೇ ನಿಮ್ಮ ಆರೋಗ್ಯ” ಅನ್ನೋ ಮಾತಿದೆ. ಆದರೆ, ನೀವು ಯಾವಾಗ ತಿನ್ನುತ್ತೀರಿ ಅನ್ನೋದು ಕೂಡ ಅಷ್ಟೇ ಮುಖ್ಯ ಅಂತ ತಜ್ಞರು ಹೇಳುತ್ತಾರೆ.

ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಮುಖ್ಯಸ್ಥ ಮತ್ತು ಸಲಹೆಗಾರರಾದ ಡಾ. ಹರ್ಷವರ್ಧನ್ ರಾವ್ ಬಿ ಅವರ ಪ್ರಕಾರ, ನಮ್ಮ ಆಹಾರ ಪದ್ಧತಿ ನಮ್ಮ ಲಿವರ್ (ಯಕೃತ್ತು) ಮೇಲೆ ನೇರ ಪರಿಣಾಮ ಬೀರುತ್ತದೆ. ನಮ್ಮ ದೇಹದಲ್ಲಿ ಸಕ್ಕರೆ ಮತ್ತು ಕೊಬ್ಬನ್ನು ಸಂಸ್ಕರಿಸುವಲ್ಲಿ ಲಿವರ್ ಪ್ರಮುಖ ಪಾತ್ರ ವಹಿಸುತ್ತದೆ. ನಾವು ಸಮಯಕ್ಕೆ ಸರಿಯಾಗಿ ಊಟ ಮಾಡದೆ, ಸಂಸ್ಕರಿಸಿದ ಆಹಾರಗಳನ್ನು ಹೆಚ್ಚಾಗಿ ತಿಂದಾಗ, ನಮ್ಮ ರಕ್ತದಲ್ಲಿ ಸಕ್ಕರೆ ಮಟ್ಟ ಪದೇ ಪದೇ ಏರಿಕೆಯಾಗುತ್ತದೆ.

ಆಗ, ನಮ್ಮ ದೇಹವು ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ‘ಇನ್ಸುಲಿನ್’ ಎಂಬ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಆದರೆ, ಇದೇ ಕೆಟ್ಟ ಅಭ್ಯಾಸ ಮುಂದುವರಿದರೆ, ದೇಹದಲ್ಲಿ ಇನ್ಸುಲಿನ್ ಮಟ್ಟ ಹೆಚ್ಚಾಗಿ ‘ಇನ್ಸುಲಿನ್ ರೆಸಿಸ್ಟೆನ್ಸ್’ ಎಂಬ ಸ್ಥಿತಿ ಉಂಟಾಗುತ್ತದೆ. ಇದರಿಂದ ದೇಹದ ತೂಕ ಹೆಚ್ಚಾಗುವುದು, ರಕ್ತದಲ್ಲಿ ಸಕ್ಕರೆ ಮಟ್ಟ ಏರುವುದು ಮತ್ತು ಲಿವರ್‌ನಲ್ಲಿ ಕೊಬ್ಬು ಶೇಖರಣೆಯಾಗುವಂತಹ ಸಮಸ್ಯೆಗಳು ಶುರುವಾಗುತ್ತವೆ.

ಸಮಯಕ್ಕೆ ಸರಿಯಾಗಿ ಊಟ ಮಾಡದೇ ಇರುವುದರಿಂದ ಬರುವ ದೊಡ್ಡ ಸಮಸ್ಯೆ ಎಂದರೆ ‘ನಾನ್-ಆಲ್ಕೊಹಾಲಿಕ್ ಫ್ಯಾಟಿ ಲಿವರ್ ಡಿಸೀಸ್’ (NAFLD). ಇನ್ಸುಲಿನ್ ರೆಸಿಸ್ಟೆನ್ಸ್‌ನಿಂದಾಗಿ ಲಿವರ್‌ನ ಕೋಶಗಳಲ್ಲಿ ಕೊಬ್ಬು ಶೇಖರಣೆಯಾಗಲು ಶುರುವಾಗುತ್ತದೆ. ರಾತ್ರಿ ತಡವಾಗಿ ಊಟ ಮಾಡುವುದು ಮತ್ತೊಂದು ದೊಡ್ಡ ಅಪಾಯ. ನಮ್ಮ ದೇಹದ ಚಯಾಪಚಯ ಕ್ರಿಯೆ (metabolism) ಸಂಜೆಯಾಗುತ್ತಿದ್ದಂತೆ ನಿಧಾನವಾಗುತ್ತದೆ. ಹಾಗಾಗಿ, ರಾತ್ರಿ ತಿಂದ ಕ್ಯಾಲೋರಿಗಳು ಶಕ್ತಿಯಾಗಿ ಬಳಕೆಯಾಗುವ ಬದಲು ಕೊಬ್ಬಿನ ರೂಪದಲ್ಲಿ ಶೇಖರಣೆಯಾಗುವ ಸಾಧ್ಯತೆ ಹೆಚ್ಚು.

ಲಿವರ್‌ನಲ್ಲಿ ಕೊಬ್ಬು ಶೇಖರಣೆ

ಉದಾಹರಣೆಗೆ, 400 ಕ್ಯಾಲೋರಿ ಇರುವ ಒಂದು ಸ್ನ್ಯಾಕ್ ಅನ್ನು ಮಧ್ಯಾಹ್ನ ತಿಂದರೆ ಆಗುವ ಪರಿಣಾಮಕ್ಕೂ, ಅದನ್ನೇ ಮಧ್ಯರಾತ್ರಿ ತಿಂದರೆ ಆಗುವ ಪರಿಣಾಮಕ್ಕೂ ಬಹಳ ವ್ಯತ್ಯಾಸವಿದೆ. ಕಾಲಕ್ರಮೇಣ, ಈ ಅಭ್ಯಾಸವು ಲಿವರ್‌ನಲ್ಲಿ ಕೊಬ್ಬು ಶೇಖರಣೆಯಾಗಲು ಕಾರಣವಾಗುತ್ತದೆ. ಸರಿಯಾದ ಸಮಯಕ್ಕೆ ಊಟ ಮಾಡುವುದು, ಊಟಗಳ ನಡುವೆ ಅಂತರ ಕಾಯ್ದುಕೊಳ್ಳುವುದು, ಸ್ನ್ಯಾಕ್ಸ್ ಮತ್ತು ಸಂಸ್ಕರಿಸಿದ ಆಹಾರಗಳಿಂದ ದೂರವಿರುವುದು ಹಾಗೂ ಮಲಗುವ ಸ್ವಲ್ಪ ಸಮಯದ ಮುಂಚೆ ಏನನ್ನೂ ತಿನ್ನದಿರುವುದು ನಮ್ಮ ಲಿವರ್ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದು ಡಾ. ರಾವ್ ಸಲಹೆ ನೀಡುತ್ತಾರೆ.



Source link

Leave a Reply

Your email address will not be published. Required fields are marked *