Headlines

ಹುಲಿರಾಯನ ಖಡಕ್ ಲುಕ್​​​ಗೆ ಪ್ರವಾಸಿಗರು ಫಿದಾ: ತಣಿಗೆಬೈಲ್ ಅರಣ್ಯದಲ್ಲಿ ವ್ಯಾಘ್ರನ ‘ಫೋಟೋ ಶೂಟ್’!

ಹುಲಿರಾಯನ ಖಡಕ್ ಲುಕ್​​​ಗೆ ಪ್ರವಾಸಿಗರು ಫಿದಾ: ತಣಿಗೆಬೈಲ್ ಅರಣ್ಯದಲ್ಲಿ ವ್ಯಾಘ್ರನ ‘ಫೋಟೋ ಶೂಟ್’!


ಹುಲಿರಾಯನ ಖಡಕ್ ಲುಕ್​​​ಗೆ ಪ್ರವಾಸಿಗರು ಫಿದಾ: ತಣಿಗೆಬೈಲ್ ಅರಣ್ಯದಲ್ಲಿ ವ್ಯಾಘ್ರನ ‘ಫೋಟೋ ಶೂಟ್’!

ಚಿಕ್ಕಮಗಳೂರು, ಏ.16: ಕಾಫಿನಾಡು ಚಿಕ್ಕಮಗಳೂರಿನ ಪ್ರಸಿದ್ಧ ಪ್ರವಾಸಿ ತಾಣವಾದ ಕೆಮ್ಮಣ್ಣುಗುಂಡಿ ಅರಣ್ಯ ಪ್ರದೇಶದಲ್ಲಿ ಅದೃಷ್ಟವಶಾತ್ ವ್ಯಾಘ್ರ ದರ್ಶನವಾಗಿದೆ. ಅಭಯಾರಣ್ಯದ ಅಂಚಿನ ರಸ್ತೆಯಲ್ಲೇ ಹುಲಿಯೊಂದು ರಾಜಗಾಂಭೀರ್ಯದಿಂದ ಇದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿ ಸಮೀಪದ ತಣಿಗೆಬೈಲ್ ಅರಣ್ಯ ವಲಯದಲ್ಲಿ ಈ ಘಟನೆ ನಡೆದಿದೆ. ವಾಹನದಲ್ಲಿ ತೆರಳುತ್ತಿದ್ದಾಗ ಅರಣ್ಯದ ಅಂಚಿನಲ್ಲಿ ಹುಲಿಯೊಂದು ಅಂಜಿಕೆಯಿಲ್ಲದೆ ಆರಾಮವಾಗಿ ಕುಳಿತಿರುವುದು ಕಂಡುಬಂದಿದೆ. ವಿಡಿಯೋ ಚಿತ್ರೀಕರಿಸುತ್ತಿದ್ದಾಗಲೂ ಹುಲಿ ದಿಟ್ಟವಾಗಿ ‘ಲುಕ್’ ಕೊಟ್ಟಿದೆ. ಅರಣ್ಯದಲ್ಲಿ ಸಫಾರಿ ಹೋದರೂ ಕಾಣದ ವ್ಯಾಘ್ರ, ಇಂದು ರಸ್ತೆ ಬದಿಯಲ್ಲೇ ನಿರ್ಮಿಸಲು ಪುಳಕಿತವಾಗಿದೆ. ಹುಲಿಯು ಕೆಲಕಾಲ ಅಲ್ಲೇ ಕುಳಿತು, ನಂತರ ನಿಧಾನವಾಗಿ ಕಾಡಿನೊಳಗೆ ಮರೆಯಾಗಿದೆ. ಈ ಭಾಗದ ಹುಲಿಗಳ ಸಂಚಾರವು ದೃಢಪಟ್ಟಿದೆ, ಕೆಮ್ಮಣ್ಣುಗುಂಡಿ ಮತ್ತು ತಣಿಗೆಬೈಲ್ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಂದ ಕೆಳಗಿಳಿಯಬಾರದು ಮತ್ತು ಕಾಡುಪ್ರಾಣಿಗಳಿಗೆ ತೊಂದರೆ ನೀಡಬಾರದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *