Headlines

ಹಾಸ್ಯ ‘ಅಪಹಾಸ್ಯ’ವಾಗದಿರಲಿ: ಜೀವನಕ್ಕೆ ನಗು ಎಷ್ಟು ಮುಖ್ಯವೋ, ಅದರ ಇತಿಮಿತಿಗಳೂ ಅಷ್ಟೇ ಅಗತ್ಯ!

ಹಾಸ್ಯ ‘ಅಪಹಾಸ್ಯ’ವಾಗದಿರಲಿ: ಜೀವನಕ್ಕೆ ನಗು ಎಷ್ಟು ಮುಖ್ಯವೋ, ಅದರ ಇತಿಮಿತಿಗಳೂ ಅಷ್ಟೇ ಅಗತ್ಯ!


ಹಾಸ್ಯ ‘ಅಪಹಾಸ್ಯ’ವಾಗದಿರಲಿ: ಜೀವನಕ್ಕೆ ನಗು ಎಷ್ಟು ಮುಖ್ಯವೋ, ಅದರ ಇತಿಮಿತಿಗಳೂ ಅಷ್ಟೇ ಅಗತ್ಯ!

ಬೆಂಗಳೂರು, ಏ.16: ಹಾಸ್ಯವು ಜೀವನದ ಒಂದು ಅವಿಭಾಜ್ಯ ಅಂಗವಾಗಿದ್ದು, ಮಾನಸಿಕ ಮತ್ತು ದೈಹಿಕ ಶಕ್ತಿಯನ್ನು ಹೊಂದಿದೆ. ಇದು ಒತ್ತಡ ನಿವಾರಣೆ ಮತ್ತು ಆತ್ಮವಿಶ್ವಾಸ ವೃದ್ಧಿಗೆ ಸಹಾಯ ಮಾಡುತ್ತದೆ. ಆದರೆ, ಹಾಸ್ಯವು ಅಪಹಾಸ್ಯವಾಗಿ ಪರಿವರ್ತನೆಯಾಗಬಾರದು. ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಹಾಸ್ಯವನ್ನು ಮಾಡುವುದು ಅಸಮರ್ಪಕ. ದೇವಾಲಯಗಳಲ್ಲಿ, ಮೌನವಾಗಿ ಭಗವಂತನ ಮೇಲೆ ಗಮನವಿಡಬೇಕು, ಅಲ್ಲಿ ಹಾಸ್ಯ ಮಾಡಬಾರದು. ಯಾರಾದರೂ ನಿಧನರಾದಾಗ ಅಥವಾ ಅವರ ಮನೆಯಲ್ಲಿ ಹಾಸ್ಯ ಮಾಡುವುದು ಶುಭವಲ್ಲ. ಪ್ರಾರ್ಥನಾ ಮಂದಿರಗಳು, ಧ್ಯಾನ ಕೇಂದ್ರಗಳು ಅಥವಾ ಪ್ರವಚನ ನಡೆಯುವ ಸ್ಥಳಗಳಲ್ಲಿ ಗಂಭೀರತೆಯನ್ನು ಕಾಪಾಡಿಕೊಳ್ಳಬೇಕು. ಹಿರಿಯರು, ಧರ್ಮ ಚಿಂತಕರು, ಸನ್ಯಾಸಿಗಳು, ಮಠಾಧೀಶರು ಮತ್ತು ಸಾಧುಗಳ ಬಗ್ಗೆ ಹಾಸ್ಯದಿಂದ ಮಾತನಾಡುವುದು ಸರಿಯಲ್ಲ. ಸ್ತ್ರೀಯರ ಬಗ್ಗೆ ಅವರ ಮುಂದೆಯೇ ಹಾಸ್ಯ ಮಾಡುವುದು ಅಷ್ಟು ಶುಭಕರವಲ್ಲ. ತೊದಲುವವರು, ಕಿವುಡರು, ಅಂಗವಿಕಲರು ಅಥವಾ ಕುರುಡರ ಬಗ್ಗೆ ಹಾಸ್ಯ ಮಾಡಬಾರದು. ಹಾಸ್ಯವು ಪವಿತ್ರವಾಗಿದ್ದರೂ, ಸದಾ ಇತಿಮಿತಿಗಳನ್ನು ಅರಿತು ಸರಿಯಾದ ಸ್ಥಳ ಮತ್ತು ಸಮಯದಲ್ಲಿ ಬಳಸಬೇಕು ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಸಂಸ್ಥೆ ಡಾ. ಬಸವರಾಜ ಗುರೂಜಿ ಅವರು ಹೇಳಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *