‘ನನ್ನ ಮದುವೆ ಸೀರೆಗೆ 2,70,000 ರೂ ಕೊಟ್ಟಿಲ್ಲʼ-ನಿಜವಾದ ರೇಟ್ ಹೇಳಿದ ಅನುಶ್ರೀ! ಹೌಹಾರಿದ ವೀಕ್ಷಕರು

‘ನನ್ನ ಮದುವೆ ಸೀರೆಗೆ 2,70,000 ರೂ ಕೊಟ್ಟಿಲ್ಲʼ-ನಿಜವಾದ ರೇಟ್ ಹೇಳಿದ ಅನುಶ್ರೀ! ಹೌಹಾರಿದ ವೀಕ್ಷಕರು

‘ನನ್ನ ಮದುವೆ ಸೀರೆಗೆ 2,70,000 ರೂ ಕೊಟ್ಟಿಲ್ಲʼ-ನಿಜವಾದ ರೇಟ್ ಹೇಳಿದ ಅನುಶ್ರೀ! ಹೌಹಾರಿದ ವೀಕ್ಷಕರು

ನಿರೂಪಕಿ ಅನುಶ್ರೀ ಅವರು ರೋಶನ್‌ ಜೊತೆ ಮದುವೆಯಾಗಿ ಒಂದು ವಾರ ಕಳೆದಿದೆ. ಇವರ ಮದುವೆ ಬಗ್ಗೆ ಎಲ್ಲೆಡೆ ಸೋಶಿಯಲ್‌ ಮೀಡಿಯಾ ಪೋಸ್ಟ್‌ಗಳು ರಾರಾಜಿಸುತ್ತಿದ್ದವು. ಇನ್ನು ಅನುಶ್ರೀ ಸೀರೆ ಬೆಲೆ ಬಗ್ಗೆ ದೊಡ್ಡ ಚರ್ಚೆಯಾಗಿತ್ತು.

“ನಾ ಆರಾಧಿಸಿದ ದೇವರು … ಆಶೀರ್ವಾದ ಮಾಡಿದ ಪ್ರೀತಿಯ ಕನ್ನಡಿಗರು …

ಕೊಟ್ಟ ವರ .. ಈ ಕ್ಷಣ .. ಈ ನಗು” ಎಂದು ಅನುಶ್ರೀ ಅವರು ಸೋಶಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

ಅನುಶ್ರೀ ಅವರು 2,70,000 ರೂಪಾಯಿ ಸೀರೆ ಖರೀದಿ ಮಾಡಿದ್ದಾರೆ ಎಂಬ ಪೋಸ್ಟ್‌ ವೈರಲ್‌ ಆಗಿತ್ತು. ಇದರ ಬಗ್ಗೆ ದೊಡ್ಡ ಚರ್ಚೆ ಆಯಿತು. ಈ ಬಗ್ಗೆ ಅನುಶ್ರೀ ಅವರೇ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಮೂಲಕ ಉತ್ತರ ನೀಡಿದ್ದಾರೆ.

ಅನುಶ್ರೀ ಅವರು, “ನನ್ನ ಸೀರೆ ಬೆಲೆ 2,70,000 ರೂಪಾಯಿ ಎಂದು ಹೇಳುತ್ತಿದ್ದಿರಿ. ಆದರೆ ನನ್ನ ಸೀರೆ ಬೆಲೆ ಮೈಸೂರು ಸಿಲ್ಕ್‌ ಉದ್ಯೋಗ್‌ನಿಂದ 2700 ರೂಪಾಯಿಗೆ ಖರೀದಿ ಮಾಡಿದ್ದೇನೆ” ಎಂದು ಹೇಳಿದ್ದಾರೆ.

ಅನುಶ್ರೀ ಅವರ ಸರಳತೆ ಅನೇಕರಿಗೆ ಇಷ್ಟ ಆಗಿದೆ. ಇಷ್ಟು ಕಡಿಮೆ ಬೆಲೆಗೆ ಸೀರೆ ಖರೀದಿ ಮಾಡಿದ್ದು ಅನೇಕರಿಗೆ ಆಶ್ಚರ್ಯ ಆಗಿದೆ.

ಮದುವೆಗೆ ಈಗ ಸಾಮಾನ್ಯ ಜನರೇ 2 ಲಕ್ಷ ರೂಪಾಯಿ ಖರೀದಿ ಮಾಡುವ ಕಾಲದಲ್ಲಿ ಅನುಶ್ರೀ ಅವರು ಸೆಲೆಬ್ರಿಟಿಯಾಗಿ 2700 ರೂಪಾಯಿಗೆ ಖರೀದಿ ಮಾಡಿದ್ದು ನಿಜಕ್ಕೂ ಅನುಕರಣೀಯ ಆಗಿದೆ ಎಂದಿದ್ದಾರೆ.

Source link

Leave a Reply

Your email address will not be published. Required fields are marked *