ಆಪ್ಟಿಕಲ್ ಇಲ್ಯೂಷನ್ ಚಿತ್ರಚಿತ್ರ ಕ್ರೆಡಿಟ್ ಮೂಲ: ಸಾಮಾಜಿಕ ಮಾಧ್ಯಮ
ಆಪ್ಟಿಕಲ್ ಇಲ್ಯೂಷನ್ (ಆಪ್ಟಿಕಲ್ ಇಲ್ಯೂಷನ್) ಚಿತ್ರಗಳು ಹೆಸರಿಸುವಂತೆ ಭ್ರಮೆಯನ್ನು ಉಂಟು ಮಾಡುತ್ತವೆ. ಒಂದು ಕ್ಷಣ ನಿಮ್ಮನ್ನು ಗೊಂದಲಕ್ಕೀಡುಮಾಡುತ್ತದೆ. ಆದರೆ ಕೆಲವು ಇಂತಹ ಟ್ರಿಕ್ಕಿ ಒಗಟುಗಳನ್ನು ಬಿಡಿಸುವಲ್ಲಿ ಯಶಸ್ವಿಯಾಗುತ್ತಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಚಿತ್ರದಲ್ಲಿ ಜಿರಾಫೆಯನ್ನು ಎಲ್ಲಿದೆ ಎಂದು ಐದು ಸೆಕೆಂಡುಗಳಲ್ಲಿ ಹೇಳಬೇಕು. ಈ ಒಗಟು ಬಿಡಿಸಲು ನೀವು ರೆಡಿ ಇದ್ದೀರಾ.
ಈ ಚಿತ್ರ ನೋಡಿದಾಗ ನಿಮಗೇನು ಕಾಣಿಸಿತು?
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ನೀವು ನೋಡಬಹುದು. ಈ ಚಿತ್ರದಲ್ಲಿ ಮೂರು ಮರಗಳು ಕಂಡುಬರುತ್ತವೆ. ಇಲ್ಲಿ ಸೂರ್ಯಾಸ್ತದ ಸುಂದರ ನೋಟವಿದೆ. ಈ ಆಕರ್ಷಕ ಚಿತ್ರದಲ್ಲಿ ಜಿರಾಫೆ ಎಲ್ಲಿದೆ ಎಂದು ಹುಡುಕುವುದೇ ನಿಮ್ಮ ಮುಂದಿರುವ ಸವಾಲು. ಐದು ಸೆಕೆಂಡುಗಳೊಳಗೆ ಜಿರಾಫೆಯನ್ನು ಹುಡುಕಲು ಸಾಧ್ಯವೇ ಎಂದು ನೋಡಿ. ನೀವು ಈ ಸವಾಲು ಸ್ವೀಕರಿಸುವಿರಾ.
ಇದನ್ನೂ ಓದಿ: ನೀವು ಬುದ್ಧಿವಂತರೇ, ಈ ಚಿತ್ರದಲ್ಲಿರುವ ಬೆಕ್ಕನ್ನು ಹುಡುಕಿ ನೋಡಿ
ಜಿರಾಫೆ ನಿಮ್ಮ ಕಣ್ಣಿಗೆ ಬಿದ್ದಿತೇ?
ಮೊದಲು ಈ ಚಿತ್ರ ಭೇದಿಸುವುದು ಸುಲಭವೆಂದು ಭಾವಿಸಬಹುದು. ಆದರೆ ಸಮಯ ಕಳೆದಂತೆ ಟ್ರಿಕ್ಕಿ ಎಂದೆನಿಸುತ್ತದೆ. ಈ ಚಿತ್ರವನ್ನು ತುಂಬಾ ಸೂಕ್ಷ್ಮವಾಗಿ ಗಮನಿಸಿದ್ರೂ ಜಿರಾಫೆಯನ್ನು ಗುರುತಿಸಲು ಸಾಧ್ಯವಾಗದೇ ಹೋಗಬಹುದು. ಆದರೆ ಈ ಕೆಳಗಿನ ಚಿತ್ರದಲ್ಲಿ ಜಿರಾಫೆ ಎಲ್ಲಿದೆ ಎಂದು ನಾವು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ