ಇರಾನ್‌ನಲ್ಲಿ ಖಮೇನಿ ಆಡಳಿತ ಅಂತ್ಯಕ್ಕೆ ಸ್ಕೆಚ್ ಹಾಕಿದ ಅಮೇರಿಕಾ-ಇಸ್ರೇಲ್ ದೋಸ್ತಿ ಪಡೆ! | End Of Khamenei Era Iran Faces Leadership Crisis Us Israel Eyes On Tehran Sat
ತಹ್ರಾನ್/ಟೆಲಿವಿವ್/ವಾಷಿಂಗ್ಟನ್ (ಜೂ. 24): ಮಧ್ಯಪ್ರಾಚ್ಯ ಪುನಃ ರಾಜಕೀಯ ಭೂಕಂಪದ ಸಂಕೇತ ನೀಡುತ್ತಿದೆ. ಇರಾನ್‌ನ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಅವರ ಆರೋಗ್ಯ ಕುಗ್ಗಿದ್ದು, ಉತ್ತರಾಧಿಕಾರಿ ಹುಡುಕಾಟ ತೀವ್ರಗೊಂಡಿದೆ. ನಾಲ್ಕು ದಶಕಗಳಿಂದ ಇರಾನ್‌ನ ಆಡಳಿತದ ಸೂತ್ರಗಳನ್ನು ಬಲವಾಗಿ ಹಿಡಿದಿದ್ದ ಖಮೇನಿ, ಈಗ ಮೃತ್ಯು ಸಿಂಹಾಸನದ ನೆಲೆಯಲ್ಲಿ ಕೂತಿದ್ದಾರೆ ಎನ್ನೋದು ರಾಜಕೀಯ ವಲಯದ ಚರ್ಚೆಯಾಗಿದೆ. ಈ ಹಿಂದಿನ ಅಯತೊಲ್ಲಾ ಖೋಮೇನಿಯ ನಂತರ ಅಧಿಕಾರಕ್ಕೆ ಬಂದ ಖಮೇನಿ, ಇಸ್ಲಾಮಿಕ್ ಕ್ರಾಂತಿಯ ನಂತರ ರಾಜಕೀಯ, ಸೈನಿಕ, ಧಾರ್ಮಿಕ ಅಧಿಕಾರಗಳನ್ನು ಒಂದೇ ಕೈಯಲ್ಲಿ…