ಸ್ಲಿಮ್ ಡಿಸೈನ್, 32MP ಎಐ ಕ್ಯಾಮೆರಾ, ಅತೀ ಕಡಿಮೆ ಬೆಲೆಯಲ್ಲಿ ರೆಡ್ಮಿ ಎ7 ಪ್ರೋ 5ಜಿ ಫೋನ್ ಲಾಂಚ್, 6300 ಎಂಎಎಚ್ ಬ್ಯಾಟರಿ ಹೊಂದಿದೆ. 6.9 ಇಂಚಿನ ಡಿಸ್ಪ್ಲೇ ಸೇರಿದಂತೆ ಹಲವು ವಿಶೇಷತೆ ಇದರಲ್ಲಿದೆ.

ಶಓಮಿಯಿಂದ ಅತೀ ಕಡಿಮೆ ಬೆಲೆಗೆ ಗರಿಷ್ಠ ಫೀಚರ್ಸ್ ಫೋನ್ ಬಿಡುಗಡೆಯಾಗಿದೆ. ವಿಶೇಷ ಅಂದರೆ 32MP ಎಐ ಕ್ಯಾಮೆರಾ, ತೆಳುವಾದ 6.9-ಇಂಚು ಡಿಸ್ಪ್ಲೇ, 6300 ಎಂಎಎಚ್ ಬ್ಯಾಟರಿ ಮತ್ತು ಸ್ಮಾರ್ಟ್ ಅನುಭವಗಳನ್ನು ನೀಡುವ ರೆಡ್ಮಿ ಎ7 ಪ್ರೊ 5ಜಿ ಬಿಡುಗಡೆಯಾಗಿದೆ. ಇದು ರೆಡ್ಮಿ ಎ ಸೀರಿಸ್ನಲ್ಲಿ ಮೊದಲ ಪ್ರೋ ಫೋನ್ ಆಗಿದೆ.

ರೆಡ್ಮಿ ಎ7 ಪ್ರೊ 5ಜಿ ಹತ್ತು ಹಲವು ಫೀಚರ್ಸ್ ಹೊಂದಿದೆ. ವಿಶೇಷ ಅಂದರೆ ಇದರ ಬೆಲೆ 11499 ರೂಪಾಯಿ ಮಾತ್ರ. ಕೈಗೆಟುಕುವ ದರದಲ್ಲಿ ಅತ್ಯುತ್ತಮ ಕ್ಯಾಮೆರಾ, ಬ್ಯಾಟರಿ, ಸ್ಲೀಕ್ ಡಿಸೈನ್ ಜೊತೆಗೆ ಅಡ್ವಾನ್ಸ್ ಟೆಕ್ ಫೋನ್ ಬಿಡುಗಡೆಯಾಗಿದೆ.

ಈ ಸೀರಿಸ್ನಲ್ಲಿ ಅತೀ ದೊಡ್ಡ 17.53 ಸೆಂ.ಮೀ. (6.9 ಇಂಚು) ಡಿಸ್ಪ್ಲೇ, ಮೃದುವಾದ 120 ಹರ್ಟ್ಸ್ ರಿಫ್ರೆಶ್ ರೇಟ್ ನೊಂದಿಗೆ ಹೊಂದಿರುವ ರೆಡ್ಮಿ ಎ7 ಪ್ರೊ 5ಜಿ ಫೋನ್ ಪ್ರತಿದಿನ ಬಳಕೆಗೆ ಸೂಕ್ತವಾಗಿದೆ. ಬ್ರೌಸಿಂಗ್ ಹಾಗೂ ಸಾಮಾಜಿಕ ಮಾಧ್ಯಮದಿಂದ ವಿಡಿಯೋ ಸ್ಟ್ರೀಮಿಂಗ್ ವರೆಗೆ ಉತ್ತಮ ಅನುಭವ ನೀಡಲಿದೆ. ವೆಟ್ ಟಚ್ ಟೆಕ್ನಾಲಜಿ 2.0 ಸೇರ್ಪಡಿಕೆಯಿಂದ ಕೈಗಳು ತೇವ ಅಥವಾ ಜಿಡ್ಡು ಹೊಂದಿದ್ದರೂ ನಿಖರ ಮತ್ತು ಪ್ರತಿಕ್ರಿಯಾತ್ಮಕ ಇನ್ಪುಟ್ ಅನ್ನು ನೀಡುತ್ತದೆ, ಇದರಿಂದ ಹೆಚ್ಚು ವಿಶ್ವಾಸಾರ್ಹವಾಗಿಸಿದೆ.

ರೆಡ್ಮಿ ಎ7 ಪ್ರೊ 5ಜಿಯು ಈ ವರ್ಗದ ಅತ್ಯಂತ ದೊಡ್ಡ 6300 ಎಂಎಎಚ್ ಬ್ಯಾಟರಿ ಹೊಂದಿದೆ. ದೀರ್ಘಬಾಳಿಕೆಗೆ ರೂಪಿಸಲಾಗಿದೆ. ಹೀಗಾಗಿ ಪ್ರತಿ ಬಾರಿ ಚಾರ್ಜ್ ಮಾಡುವ ಅಗತ್ಯವಿಲ್ಲ. ಸ್ಟ್ರೀಮಿಂಗ್ ಮಾಡಲಿ, ಸಂಪರ್ಕದಲ್ಲಿರಲಿ ಅಥವಾ ಚಲನೆಯಲ್ಲಿ ಬ್ರೌಸಿಂಗ್ ಮಾಡುವುದಿರಲಿ ಇದನ್ನು ಪ್ರತಿನಿತ್ಯದ ಬೇಡಿಕೆಗಳಿಗೆ ಅನುಗುಣವಾಗಿ ನಿರ್ಮಿಸಲಾಗಿದೆ.

ಈ ಡಿವೈಸ್ 15ಡಬ್ಲ್ಯೂ ಚಾರ್ಜಿಂಗ್ ಇನ್-ಬಾಕ್ಸ್ ಚಾರ್ಜರ್ ನೊಂದಿಗೆ ಬೆಂಬಲಿಸುತ್ತದೆ ಮತ್ತು 7.5ಡಬ್ಲ್ಯೂ ವೈರ್ ರಿವರ್ಸ್ ಚಾರ್ಜಿಂಗ್ ಸಾಧ್ಯವಾಗಿಸುತ್ತದೆ. ದೀರ್ಘಾವಧಿ ವಿಶ್ವಾಸಾರ್ಹತೆಗೆ ನಿರ್ಮಿಸಲಾದ ಇದು ವಿಸ್ತರಿಸಿದ ಚಾರ್ಜ್ ಆವರ್ತಗಳ ನಂತರವೂ ಉತ್ತಮ ಬ್ಯಾಟರಿ ಕಾರ್ಯಕ್ಷಮತೆ ನೀಡುತ್ತದೆ.

ರೆಡ್ಮಿ ಎ7 ಪ್ರೊ 5ಜಿಯು ಶಕ್ತಿಯುತ ಆಕ್ಟಾ-ಕೋರ್ 5ಜಿ ಪ್ರೊಸೆಸರ್ ಹೊಂದಿದ್ದು ಪ್ರತಿನಿತ್ಯದ ಕೆಲಸಗಳಿಗೆ ದಕ್ಷ ಮತ್ತು ಪ್ರತಿಕ್ರಿಯಾತ್ಮಕ ಕಾರ್ಯಕ್ಷಮತೆ ನೀಡುತ್ತದೆ. 8ಜಿಬಿ ವರ್ಚುಯಲ್ ಆರ್.ಎ.ಎಂ. ವಿಸ್ತರಣೆಗೆ ಬೆಂಬಲ ಹೊಂದಿರುವ ಈ ಡಿವೈಸ್ ಮಲ್ಟಿ ಟಾಸ್ಕಿಂಗ್ ಸಾಮರ್ಥ್ಯಗಳನ್ನು ಮತ್ತಷ್ಟು ಹೆಚ್ಚಿಸುತ್ತಿದ್ದು ಮೃದುವಾದ ಆಪ್ ಬದಲಾವಣೆ ಮತ್ತು ಸುಧಾರಿತ ಒಟ್ಟಾರೆ ಪ್ರತಿಕ್ರಿಯಾತ್ಮಕತೆ ನೀಡುತ್ತದೆ.

Source link
ಸ್ಲಿಮ್ ಡಿಸೈನ್, 32MP ಎಐ ಕ್ಯಾಮೆರಾ, ಅತೀ ಕಡಿಮೆ ಬೆಲೆಯಲ್ಲಿ ರೆಡ್ಮಿ ಎ7 ಪ್ರೋ 5ಜಿ ಫೋನ್ ಲಾಂಚ್