Headlines

ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸುವವರಿಗೆ ಬಿಗ್​​ ಶಾಕ್​​: ಸಾರಿಗೆ ಇಲಾಖೆಯಿಂದ ಹೊಸ ನಿಯಮ

ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸುವವರಿಗೆ ಬಿಗ್​​ ಶಾಕ್​​: ಸಾರಿಗೆ ಇಲಾಖೆಯಿಂದ ಹೊಸ ನಿಯಮ


ಬೆಂಗಳೂರು, ಜನವರಿ 27: ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಪುನರಾವರ್ತಿತ ಸಂಚಾರ ನಿಯಮ ಉಲ್ಲಂಘನೆಗಳನ್ನು ತಡೆಯಲು ಸಾರಿಗೆ ಇಲಾಖೆಯ ಹೊಸ ಕಟ್ಟುನಿಟ್ಟಿನ ಕ್ರಮವನ್ನು ಜಾರಿಗೆ ತಂದಿದೆ. ಹೊಸ ಮಾರ್ಗಸೂಚಿಯ ಪ್ರಕಾರ, ವಾಹನ ಸವಾರರು ಒಂದು ವರ್ಷದ ಅವಧಿಯಲ್ಲಿ ಐದು ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಚಾಲನಾ ಪರವಾನಿಗೆ ರದ್ದಾಗಲಿದೆ. ಮೋಟಾರು ವಾಹನ ಕಾಯ್ದೆಗೆ ಕೇಂದ್ರ ತಿದ್ದುಪಡಿ ಹೊಸ ನಿಯಮ ಈ ವರ್ಷದ ಜನವರಿ 1 ರಿಂದ ಜಾರಿಗೆ ಬಂದಿದೆ. ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ (ಆರ್‌ಟಿಒ) ಪರವಾನಿಗೆ ರದ್ದುಗೊಳಿಸುವ ಅಧಿಕಾರವನ್ನು ನೀಡಲಾಗಿದೆ. ಅತಿಯಾದ ವೇಗ, ಕುಡಿದು ಚಾಲನೆ, ಮೊಬೈಲ್ ಬಳಕೆ, ಸಿಗ್ನಲ್ ಜಂಪ್, ಹೆಲ್ಮೆಟ್ ಅಥವಾ ಸೀಟ್ಬೆಲ್ಟ್ ಧರಿಸಿರುವುದು ಸೇರಿದಂತೆ ಒಟ್ಟು 24 ಅಪರಾಧಗಳಿಗೆ ಈ ನಿಯಮ ಅನ್ವಯ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *