ವಿಜಯಪುರ, ಏಪ್ರಿಲ್ 14: ವಿಜಯಪುರದಲ್ಲೊಂದು ವಿಚಿತ್ರ ಮತ್ತು ಅಮಾನವೀಯ ಘಟನೆ ನಡೆದಿದೆ. ನೋಡಲು ತನ್ನಂತೆ ಇಲ್ಲ ಎಂದು 6 ವರ್ಷದ ತನ್ನ ಮಗನನ್ನೇ ತಂದೆ (ತಂದೆ) ಕೊಲೆ (ಕೊಲ್ಲಲು) ಇಂತಹ ದಾರುಣ ಘಟನೆ ನಡೆದಿದೆ. ಮಹಾರಾಷ್ಟ್ರದ ಕರಾಡ್ ಜಿಲ್ಲೆಯ ವಡೋಲಿಯ ಕೃಷ್ಣಾ ನದಿ ಬಳಿ ಮಗ ಸಿದ್ದಾರ್ಥನನ್ನ ಕರೆದುಕೊಂಡು ಹೋದ ತಂದೆ ಮಲ್ಲಿಕಾರ್ಜುನ ಅರಕೇರಿ ನದಿಗೆ ತಳ್ಳಿ ಹತ್ಯೆ ಮಾಡಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು?
ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದ ಮಲ್ಲಿಕಾರ್ಜುನಕೇರಿ ಮತ್ತು ಭಾಗ್ಯಶ್ರೀ ದಂಪತಿ ವಾಸವಾಗಿದ್ದಾರೆ. ಇವರ ಮಗ ಸಿದ್ದಾರ್ಥ. ಮಗನ ಹೋಲಿಕೆ ನಿನ್ನಂತಿಲ್ಲ ಎಂದು ಗ್ರಾಮದಲ್ಲಿ ಛೇಡಿಸಿದ್ದರು. ಒಪ್ಪಿಕೊಂಡ ರೋಸಿಹೋದ ಮಲ್ಲಿಕಾರ್ಜುನ ಇಂತಹದೊಂದು ಕೆಟ್ಟ ನಿರ್ಧಾರಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ: ನಿಶ್ಚಿತಾರ್ಥವಾದ ಯುವಕನ ಮನೆಯವರಿಗೆ ಯುವತಿಯ ಜೊತೆ ಫೋಟೋ ಕಳುಹಿಸಿದ ಪ್ರೇಮಿ; ಮುಂದಾಗಿದ್ದು ದುರಂತ
ಮಾರ್ಚ್ 16 ರಂದು ಮಗನನ್ನು ಶಾಲೆಗೆ ಸೇರಿಸುವುದಾಗಿ ಹೇಳಿ ಮಲ್ಲಿಕಾರ್ಜುನ ಕರೆದೊಯ್ದಿದ್ದಾರೆ. ಮಹಾರಾಷ್ಟ್ರದ ಕರಾಡ್ ಜಿಲ್ಲೆಯ ವಡೋಲಿಗೆ ಕರೆದೊಯ್ದ ತಂದೆ, ಕೃಷ್ಣಾ ನದಿಗೆ ತಳ್ಳಿ ಸಿದ್ದಾರ್ಥನನ್ನು ಹತ್ಯೆಗೈದಿದ್ದಾರೆ. ಬಳಿಕ ಮನೆಗೆ ಶಾಲೆಗೆ ಸೇರಿಸಿ ಹಾಸ್ಟೆಲ್ ನಲ್ಲಿ ಬಿಟ್ಟಿದ್ದಾಗಿ ಹೇಳಿದ್ದಾರೆ. ಏಪ್ರಿಲ್ 1 ರಂದು ಮಗ ಸಿದ್ದಾರ್ಥ ಹುಟ್ಟುಹಬ್ಬ ಇರುವ ಹಿನ್ನೆಲೆ ಮಗನನ್ನು ಕರೆದುಕೊಂಡು ಬರುವಂತೆ ತಾಯಿ ಭಾಗ್ಯಶ್ರೀ ಪಟ್ಟು ಹಿಡಿದಿದ್ದಾರೆ.
ಪೊಲೀಸ್ ವಿಚಾರಣೆ ವೇಳೆ ಅಸಲಿ ಕಹಾನಿ ಬಾಯಿಬಿಟ್ಟ ತಂದೆ
ಈ ಬಗ್ಗೆ ಹೆಚ್ಚು ವಿಚಾರಿಸಿದಾಗ ಮಲ್ಲಿಕಾರ್ಜುನ ಮನೆಯಿಂದ ಪರಾರಿ ಆಗಿದ್ದಾರೆ. ಇದರಿಂದ ಬಂದು ಭಾಗ್ಯ ಶ್ರೀ ಪೊಲೀಸರಿಗೆ ಅನುಮಾನ ದೂರು. ಪೊಲೀಸರ ವಿಚಾರಣೆ ವೇಳೆ ಮಹಾರಾಷ್ಟ್ರದಲ್ಲಿ ಕೊಲೆಗೈದ ಆರೋಪಿ ಮಲ್ಲಿಕಾರ್ಜುನ ಅಸಲಿ ಸತ್ಯ ಬಾಯಿಬಿಟ್ಟಿದ್ದಾರೆ. ಸದ್ಯ ಆರೋಪಿ ಮಲ್ಲಿಕಾರ್ಜುನನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
14 ವರ್ಷದ ಮಗಳನ್ನು ಉಸಿರುಗಟ್ಟಿಸಿ ಕೊಂಡು ತಾಯಿಯೂ ಆತ್ಮಹತ್ಯೆ
14 ವರ್ಷದ ಮಗಳನ್ನು ಉಸಿರುಗಟ್ಟಿಸಿ ಕೊಂಡು ಬಳಿಕ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಂತಹ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ ಠಾಣಾ ನಿರ್ಮಾಣ ನಡೆದಿದೆ. ಮಗಳು ಕಾರುಣ್ಯ ಕೊಲೆಗೈದು ತಾಯಿ ಸುವರ್ಣ(40) ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಇದನ್ನೂ ಓದಿ: ಕಾಂಗ್ರೆಸ್ ಯುವ ಮುಖಂಡನ ಹತ್ಯೆ: 24 ಗಂಟೆಯೊಳಗೇ ಹಂತಕರ ಬಂಧನ, ಕೊಲೆ ರಹಸ್ಯ ಬಯಲು
ಇಮ್ಮಡಿಹಳ್ಳಿಯ ಮನೆಯ ಕೋಣೆಯನ್ನು ಕೊಂದು ಬಳಿಕ ತಾಯಿ ಸುವರ್ಣ ನೇಣಿಗೆ ಶರಣಾಗಿದ್ದಾರೆ. ಘಟನಾ ಸ್ಥಳಕ್ಕೆ ವೈಟ್ಫೀಲ್ಡ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.