ಟೆಸ್ಲಾ ರೋಬೋಟ್ಯಾಕ್ಸಿ ಆರಂಭ; ಭಾರತದಲ್ಲಿ ಡ್ರೈವರ್ಲೆಸ್ ಕಾರ್ ಸರ್ವಿಸ್ ಸಾಧ್ಯವಾ? ಸ್ಥಳೀಯ ಸ್ಟಾರ್ಟಪ್ಗಳಿಂದಲೂ ನಡೆದಿದೆ ಪ್ರಯತ್ನ
ನವದೆಹಲಿ, ಜೂನ್ 23: ಇಲಾನ್ ಮಸ್ಕ್ ಅವರ ಟೆಸ್ಲಾ ಕಂಪನಿ ಕೊನೆಗೂ ತನ್ನ ಬಹುನಿರೀಕ್ಷಿತ ರೋಬೋಟ್ಯಾಕ್ಸಿ ಸೇವೆಯನ್ನು (Robotaxi service) ಆರಂಭಿಸಿದೆ. ಟೆಸ್ಲಾದ ಮುಖ್ಯ ಕಚೇರಿ ಇರುವ ಆಸ್ಟಿನ್ ನಗರದಲ್ಲಿ ಅದರ ಡ್ರೈವರ್ಲೆಸ್ ಕಾರ್ಗಳು (driverless vehicles) ಸಂಚರಿಸಲು ಆರಂಭಿಸಿವೆ. ಸೋಷಿಯಲ್ ಮೀಡಿಯಾದಲ್ಲಿ ಕೆಲವರು ರೋಬೋಟ್ಯಾಕ್ಸಿಯಲ್ಲಿ ಪ್ರಯಾಣಿಸಿದ ಫೋಟೋ, ವಿಡಿಯೋ, ಅನುಭವ ಹಂಚಿಕೊಂಡಿದ್ದಾರೆ. ಇಲಾನ್ ಮಸ್ಕ್ ತಮ್ಮ ಎಕ್ಸ್ ಅಕೌಂಟ್ನಿಂದ ರೋಬೋಟ್ಯಾಕ್ಸಿ ಸೇವೆ ಆರಂಭವಾಗಿರುವುದನ್ನು ಪ್ರಕಟಿಸಿದ್ದಾರೆ. ಪ್ರತೀ ಟ್ರಿಪ್ಗೆ 4.20 ಡಾಲರ್ (ಸುಮಾರು 360 ರೂ) ದರ…