ಕೇಂದ್ರ ಸಚಿವ ಕುಮಾರಸ್ವಾಮಿ ಯೋಚನೆ ಮಾಡೋದು ಬಿಟ್ಟು ಕೆಲಸ ಮಾಡಲಿ: ರವಿ ಗಣಿಗ

ಕೇಂದ್ರ ಸಚಿವ ಕುಮಾರಸ್ವಾಮಿ ಯೋಚನೆ ಮಾಡೋದು ಬಿಟ್ಟು ಕೆಲಸ ಮಾಡಲಿ: ರವಿ ಗಣಿಗ


ಮಂಡ್ಯ, ಜೂನ್ 23: ಕೈಯಲ್ಲೇ ಅಸ್ತ್ರವನ್ನು ಹಿಡಿದು ಅದನ್ನು ಹುಡುಕುವ ರಾಜಕಾರಣಿ ದೇಶದಲ್ಲಿ ಯಾರಾದರೂ ಇದ್ದರೆ ಅದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಎಂದು ಮಂಡ್ಯದ ಕಾಂಗ್ರೆಸ್ ಶಾಸಕ ರವಿ ಗಣಿಗ ಹೇಳಿದರು. ಮಾಧ್ಯಮಗಳೊಂದಿಗೆ ಮಾತಾಡಿದ ಅವರು, ತಾನು ಶಾಸಕನಾದ ಮೇಲೆ 2-3 ಸಾವಿರ ಉದ್ಯೋಗ ಸೃಷ್ಟಿ ಮಾಡಿದ್ದೇನೆ, ಹತ್ತಾರು ಮಾಲ್​ಗಳು ಮಂಡ್ಯ ನಗರಕ್ಕೆ ಬಂದಿವೆ, ಉತ್ತಮ ಹೋಟೆಲ್​ಗಳು ತಲೆಯೆತ್ತಿವೆ, ಇನ್ನೊಂದಾರು ತಿಂಗಳಲ್ಲಿ ಜವಳಿ ಪಾರ್ಕ್​ಗೆ ಗುದ್ದಲಿ ಪೂಜೆ ಮಾಡಿಸುವವರಿದ್ದೇವೆ, ಅಮ್ಯೂಸ್ಮೆಂಟ್ ಪಾರ್ಕ್​ ಮಾಡಿ ಅಲ್ಲೂ ಉದ್ಯೋಗಗಳನ್ನು ಸೃಷ್ಟಿಸುತ್ತೇವೆ, ಇದನ್ನೆಲ್ಲ ಮಾಡೋದು ಬಿಟ್ಟು ಕುಮಾರಸ್ವಾಮಿ, ನಾನು ಯೋಚನೆ ಮಾಡುತ್ತಿದ್ದೇನೆ ಎನ್ನುತ್ತಾರೆ, ಅವರೊಬ್ಬ ಥಿಂಕಿಂಗ್ ಮಿನಿಸ್ಟರ್ ಎಂದು ಗಣಿಗ ಲೇವಡಿ ಮಾಡಿದರು.

ಇದನ್ನೂ ಓದಿ:  ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲೇ ಅಸಮಾಧಾನದ ಹೊಗೆ: ಸತೀಶ್ ಜಾರಕಿಹೊಳಿ ವಿರುದ್ಧ ರವಿ ಗಣಿಗ ಆಕ್ಷೇಪ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *