ನಟಿ ಸಾಯಿ ಪಲ್ಲವಿ (ಸಾಯಿ ಪಲ್ಲವಿ) ದಕ್ಷಿಣದ ಸ್ಟಾರ್ ನಟಿ. ತಮ್ಮ ಅದ್ಭುತ ನಟನೆ, ನೃತ್ಯ ಮತ್ತು ಸೌಂದರ್ಯದಿಂದ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಸಾಯಿ ಪಲ್ಲವಿ ತಮ್ಮ ಸಿನಿಮಾಗಳಿಂದ ತಮ್ಮ ವ್ಯಕ್ತಿತ್ವದಿಂದಲೂ ಗಮನ ಸೆಳೆಯುತ್ತಾರೆ. ಇತರ ಸಮಕಾಲೀನ ನಟಿಯರಂತೆ ಗ್ಲಾಮರಸ್ ಮಾತ್ರ, ಮರ ಸುತ್ತುವ ಪಾತ್ರಗಳಲ್ಲಿ ನಟಿಸಿದರೆ ಸಮಾಜಕ್ಕೆ ಸಂದೇಶ ನೀಡುವ, ನಟನೆಗೆ ಒತ್ತು ಇರುವ ಪಾತ್ರಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಇದೀಗ ಸಾಯಿ ಪಲ್ಲವಿ ಮೊದಲ ಬಾರಿಗೆ ಬಾಲಿವುಡ್‌ಗೆ ಕಾಲಿಟ್ಟಿದ್ದು, ಮೊದಲ ಹೆಜ್ಜೆಯಲ್ಲೇ ಪ್ರದರ್ಶನಕ್ಕೆ ಮೋದಿ ಮಾಡಿದ್ದಾರೆ. ಜೊತೆಗೆ ಮೊದಲ ಬಾಲಿವುಡ್ ಸಿನಿಮಾ ಮೂಲಕ ಇಷ್ಟು ವರ್ಷ ಪಾಲಿಸಿಕೊಂಡು ಬಂದ ಸಂಪ್ರದಾಯ ಮುರಿದಿದ್ದಾರೆ.
ಸಾಯಿ ಪಲ್ಲವಿ ಹಿಂದಿಯ ‘ರಾಮಾಯಣ’ ಸಿನಿಮಾದಲ್ಲಿ ಸೀತೆಯ ಪಾತ್ರದಲ್ಲಿ ನಟಿಸುತ್ತಿರುವುದು ತಿಳಿದೇ ಇದೆ. ಆದರೆ ಸಾಯಿ ಪಲ್ಲವಿಯ ಮೊದಲ ಬಾಲಿವುಡ್ ಸಿನಿಮಾ ಇದಕ್ಕಿಂತ ಬದಲಾಗಿ ಅಮೀರ್ ಖಾನ್ ಪುತ್ರನ ಜೊತೆಗೆ ನಟಿಸಿರುವ ‘ಏಕ್ ದಿನ’. 2024 ರ ಆರಂಭದಲ್ಲೇ ಚಿತ್ರೀಕರಣ ಶುರುವಾದರೂ ಬಹಳ ತಡವಾಗಿ ಸಿನಿಮಾ ಬಿಡುಗಡೆ ಆಗುತ್ತಿದೆ. ಸಿನಿಮಾದ ಟೀಸರ್ ಇಂದು ಬಿಡುಗಡೆ ಆಗಿದ್ದು, ಸಾಯಿ ಪಲ್ಲವಿ ಸಖತ್ ಗಮನ ಸೆಳೆಯುತ್ತಿದೆ.
ಅಮೀರ್ ಖಾನ್ ಪುತ್ರ ಝುನೈದ್ ಖಾನ್ ನಾಯಕನಾಗಿ ಸಾಯಿ ಪಲ್ಲವಿ ನಾಯಕಿಯಾಗಿರುವ ‘ಏಕ್ ದಿನ’ ಸಿನಿಮಾ ಅಪ್ಪಟ ಪ್ರೇಮಕಥಾ ಸಿನಿಮಾ ಆಗಿದ್ದು, ಇಬ್ಬರು ಭಾರತೀಯರು ದೂರದ ಜಪಾನ್‌ನಲ್ಲಿ ಪರಸ್ಪರ ಪ್ರೀತಿಯಿಂದ ಬೀಳುವ ಕಥೆ ಸಿನಿಮಾ ಸೇರಿದೆ. ಸಿನಿಮಾದ ಚಿತ್ರೀಕರಣವನ್ನು ಜಪಾನ್‌ನಲ್ಲಿ ಚಿತ್ರೀಕರಿಸಲಾಗಿದೆ, ಸಿನಿಮಾದ ಟೀಸರ್‌ನಲ್ಲಿ ಜಪಾನ್ ಸುಂದರ ತಾಣಗಳು ಅದ್ಭುತವಾಗಿ ಕಾಣುತ್ತಿವೆ.
ಇದನ್ನೂ ಓದಿ:ರಜನೀಕಾಂತ್-ಕಮಲ್ ಹಾಸನ್ ಸಿನಿಮಾದಲ್ಲಿ ನಟಿಸಲಿದ್ದಾರೆ ಸಾಯಿ ಪಲ್ಲವಿ?
‘ಏಕ್ ದಿನ’ ಸಿನಿಮಾ, ಹೆಸರಿನಂತೆ ಒಂದೇ ದಿನದಲ್ಲಿ ನಡೆಯುವ ಕತೆ ಎನ್ನಲಾಗುತ್ತಿದೆ. ಇದೀಗ ಬಿಡುಗಡೆ ಆಗಿರುವ ಟೀಸರ್ ನಲ್ಲಿ ಸಾಯಿ ಪಲ್ಲವಿ ತಮ್ಮ ನಟನೆ, ಕ್ಯೂಟ್ ನೆಸ್ ನಿಂದ ಗಮನ ಸೆಳೆಯುತ್ತಿದ್ದಾರೆ. ಝುನೈದ್ ಖಾನ್ ಸಹ ಪ್ರಬುದ್ಧ ನಟನೆ ನೀಡಿದಂತೆ ಟೀಸರ್ ನಲ್ಲಿ ಕಾಣುತ್ತಿದೆ. ಸಿನಿಮಾದ ಕತೆ ಇಬ್ಬರು ಪ್ರಬುದ್ಧರ ನಡುವೆ ನಡೆಯುವ ಪ್ರೇಮಕತೆಯನ್ನು ಒಳಗೊಂಡಿದೆ.
‘ಏಕ್ ದಿನ’ ಸಿನಿಮಾವನ್ನು ಸುನಿಲ್ ಪಾಂಡೆ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ರಾಮ್ ಸಂಪತ್ ಸಂಗೀತವಿದೆ. ಈ ಸಿನಿಮಾ 2016ರಲ್ಲಿ ಬಿಡುಗಡೆ ಆಗಿದ್ದ ಥಾಯ್ ಸಿನಿಮಾದ ರಿಮೇಕ್ ಆಗಿದೆ. ಅಸಲಿಗೆ ಸಾಯಿ ಪಲ್ಲವಿ ರಿಮೇಕ್ ಸಿನಿಮಾಗಳಲ್ಲಿ ನಟಿಸುವುದಿಲ್ಲ. ಈ ಹಿಂದೆ ರಿಮೇಕ್ ಸಿನಿಮಾ ಎಂಬ ಕಾರಣಕ್ಕೆ ಮೆಗಾಸ್ಟಾರ್ ಚಿರಂಜೀವಿ ಜೊತೆ ನಟಿಸುವ ಅವಕಾಶವನ್ನು ನಿರಾಕರಿಸಿದ್ದರು. ಖುದ್ದು ವೇದಿಕೆಯಲ್ಲಿ ತಾವು ರಿಮೇಕ್ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದಿದ್ದರು. ಆದರೆ ಈಗ ಥಾಯ್ ಭಾಷೆಯ ‘ಒನ್ ಡೇ’ ಸಿನಿಮಾದ ರಿಮೇಕ್‌ನಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ. ‘ಏಕ್ ದಿನ’ ಸಿನಿಮಾ ಮೇ 1 ರಂದು ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ