Headlines

BBK 12 ಗಿಲ್ಲಿ ನಟನ ಗುಣ ಹೇಳುತ್ತಲೇ ಬಿಗ್​ಬಾಸ್​ ವಿನ್ನರ್ ಯಾರೆಂದು​ ಹಿಂಟ್​ ಕೊಟ್ಟೇ ಬಿಟ್ರು ಶಿವರಾಜ್​ ಕುಮಾರ್!

BBK 12 ಗಿಲ್ಲಿ ನಟನ ಗುಣ ಹೇಳುತ್ತಲೇ ಬಿಗ್​ಬಾಸ್​ ವಿನ್ನರ್ ಯಾರೆಂದು​ ಹಿಂಟ್​ ಕೊಟ್ಟೇ ಬಿಟ್ರು ಶಿವರಾಜ್​ ಕುಮಾರ್!

BBK 12 ಗಿಲ್ಲಿ ನಟನ ಗುಣ ಹೇಳುತ್ತಲೇ ಬಿಗ್​ಬಾಸ್​ ವಿನ್ನರ್ ಯಾರೆಂದು​ ಹಿಂಟ್​ ಕೊಟ್ಟೇ ಬಿಟ್ರು ಶಿವರಾಜ್​ ಕುಮಾರ್!

ಬಿಗ್​ಬಾಸ್​ 12ರ ಫಿನಾಲೆಗೆ ಎರಡೇ ದಿನಗಳು ಬಾಕಿಯಿದ್ದು, ಗಿಲ್ಲಿ ನಟನ ಹವಾ ಜೋರಾಗಿದೆ. ಇದೀಗ ನಟ ಶಿವರಾಜ್​ ಕುಮಾರ್​ ಅವರು ಗಿಲ್ಲಿ ನಟನ ಸಹಜ ಗುಣವನ್ನು ಮೆಚ್ಚಿಕೊಂಡಿದ್ದು, ಈ ಬಾರಿ ಯಾರು ಗೆಲ್ಲುತ್ತಾರೆ ಎನ್ನುವ ಬಗ್ಗೆ ಪರೋಕ್ಷವಾಗಿ ಹಿಂಟ್​ ಕೊಟ್ಟರು.

ಬಿಗ್​ಬಾಸ್​ 12ರ (Bigg Boss)ರ ಗ್ರ್ಯಾಂಡ್​ ಫಿನಾಲೆಗೆ ಇನ್ನೇನು ಎರಡೇ ದಿನಗಳು ಇವೆ. ಇದೇ 18ರಂದು ಫಿನಾಲೆ ನಡೆಯಲಿದೆ. ಇದಾಗಲೇ ತಮ್ಮ ನೆಚ್ಚಿನ ಸ್ಪರ್ಧಿಗಳ ಗೆಲುವಿಗೆ ಅಭಿಮಾನಿಗಳು ಭರ್ಜರಿಯಾಗಿ ಕೊನೆಯ ಕ್ಷಣದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಇದರ ನಡುವೆಯೇ, ಸೋಷಿಯಲ್​ ಮೀಡಿಯಾದಲ್ಲಿ ಗಿಲ್ಲಿನಟನ (Bigg Boss Gilli Nata) ಹವಾ ಜೋರಾಗಿಯೇ ಇದೆ. ಬಿಗ್​ಬಾಸ್​​ನಿಂದ ಹೊರ ಬಂದಿರುವ ಸ್ಪರ್ಧಿಗಳೂ ಸೇರಿದಂತೆ ಎಲ್ಲರ ಬಾಯಲ್ಲಿಯೂ ಗಿಲ್ಲಿ ನಟನ ಮಾತೇ. ಅವರೇ ವಿನ್​ ಆಗುವುದು ಎಂದು ಬಹುತೇಕ ಎಲ್ಲರೂ ಹೇಳುತ್ತಿದ್ದಾರೆ.

ಇದೀಗ ನಟ ಶಿವರಾಜ್​ ಕುಮಾರ್​ ಕೂಡ ಗಿಲ್ಲಿ ನಟನ ಬಗ್ಗೆ ಒಳ್ಳೆಯ ಮಾತುಗಳನ್ನಾಗಿಡಿದ್ದಾರೆ. ತಮ್ಮದೇ ಆದ ಸ್ಟೈಲ್​ನಲ್ಲಿ ಗಿಲ್ಲಿ ಅವರಿಗೆ ವಿಷ್​ ಮಾಡಿದ್ದಾರೆ ಶಿವಣ್ಣ.

ಇದೇ ವೇಳೆ ಗಿಲ್ಲಿ ಅವರ ಗುಣದ ಬಗ್ಗೆ ಹಾಗೂ ಅವರು ಯಾಕೆ ಎಲ್ಲರಿಗೂ ಇಷ್ಟವಾಗುತ್ತಾರೆ ಎಂದು ತಿಳಿಸಿದ್ದಾರೆ ನಟ ಶಿವರಾಜ್​ ಕುಮಾರ್​ (Shivaraj Kumar about Gilli Nata). ಗಿಲ್ಲಿ ನಟ ಎಲ್ಲೂ ಫೇಕ್​ ಇಲ್ಲ. ಅದಕ್ಕೇ ನನಗೆ ಇಷ್ಟ ಆಗೋದು. ಅವರಿಗೆ ತುಂಬಾ ಪ್ರಚಾರ ಬರುತ್ತಿದೆ ನಿಜವಾದರೂ ನ್ಯಾಚುರಲ್​ ಆಗಿ ಒಳ್ಳೆಯವರಾಗಿರುವವರಿಗೆ ಅಷ್ಟೊಂದು ಪ್ರಚಾರವೂ ಬೇಡ. ಆತ ತುಂಬಾ ಒಳ್ಳೆಯ ವ್ಯಕ್ತಿ ಎಂದಿದ್ದಾರೆ.

ಗಿಲ್ಲಿ ನಟ ಸ್ಟ್ರೇಟ್​ ಫಾರ್ವರ್ಡ್ ಆಗಿ ಮಾತನಾಡುತ್ತಾರೆ.ಕೆಲವರು ಕಂಟೆಂಟ್​ಗೋಸ್ಕರ ಮಾತನಾಡುತ್ತಾರೆ. ಆದರೆ ಗಿಲ್ಲಿ ಹಾಗಲ್ಲ. ನ್ಯಾಚುರಲ್​ ಇನ್​ಸ್ಟೆಂಟ್​ ಇದೆ, ಅದೇ ಜನರಿಗೆ ಇಷ್ಟವಾಗೋದು ಎನ್ನುವ ಮೂಲಕ ಬಿಗ್​ಬಾಸ್​​ ಗೆಲ್ಲುವುದು ಗಿಲ್ಲಿ ನಟನೇ ಎಂದು ಪರೋಕ್ಷವಾಗಿ ನುಡಿದಿದ್ದಾರೆ.

Source link

Leave a Reply

Your email address will not be published. Required fields are marked *