Headlines

ಏಷ್ಯಾದ ನಂ. 1 ಶ್ರೀಮಂತ ಅಂಬಾನಿಯಲ್ಲ, ಅದಾನಿ; ಟಾಪ್-20ಯಲ್ಲಿ ಅಮೆರಿಕನ್ನರನ್ನು ಬಿಟ್ಟರೆ ಭಾರತೀಯರೇ ಹೆಚ್ಚು

ಏಷ್ಯಾದ ನಂ. 1 ಶ್ರೀಮಂತ ಅಂಬಾನಿಯಲ್ಲ, ಅದಾನಿ; ಟಾಪ್-20ಯಲ್ಲಿ ಅಮೆರಿಕನ್ನರನ್ನು ಬಿಟ್ಟರೆ ಭಾರತೀಯರೇ ಹೆಚ್ಚು


ಜನವರಿ, ಏಪ್ರಿಲ್ 17: ಭಾರತದ ಇಬ್ಬರು ದಿಗ್ಗಜ ಉದ್ಯಮಿಗಳ ನಡುವೆ ಯಾರು ನಂಬರ್ ಒನ್ ಎನ್ನುವ ರೇಸ್ ನಡೆದಿದೆ. ಹೆಚ್ಚು ಆಸ್ತಿವಂತಿಕೆಯಲ್ಲಿ ಮುಕೇಶ್ ಅಂಬಾನಿ ಅವರನ್ನು ಗೌತಮ್ ಅದಾನಿ (ಗೌತಮ್ ಅದಾನಿ) ಹಿಂದಿಕ್ಕಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ (ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್) ಅದಾನಿ 19 ನೇ ಸ್ಥಾನವನ್ನು ಪಡೆದಿದೆ, ಮುಕೇಶ್ ಅಂಬಾನಿ 20 ನೇ ಸ್ಥಾನದಲ್ಲಿದ್ದಾರೆ. ಅದಾನಿ ನಿವ್ವಳ ಆಸ್ತಿ ಮೌಲ್ಯ 3.56 ಬಿಲಿಯನ್ ಡಾಲರ್‌ನಷ್ಟು ಏರಿಕೆಯಾಗಿ 92.6 ಬಿಲಿಯನ್ ಡಾಲರ್ ಆಗಿದೆ. ಇದೆ ವೇಳೆ, ಮುಕೇಶ್ ಅಂಬಾನಿ ಅವರ ನಿವ್ವಳ ಆಸ್ತಿಮೌಲ್ಯ 90.8 ಬಿಲಿಯನ್ ಡಾಲರ್ ಇದೆ.

2022ರಲ್ಲಿ ಹಿಂಡನ್ಬರ್ಗ್ ವರದಿ ಬಿಡುಗಡೆಗೆ ಮುನ್ನ ಗೌತಮ್ ಅದಾನಿ ಅವರು ಮುಖೇಶ್ ಅಂಬಾನಿಯನ್ನು ಶ್ರೀಮಂತಿಕೆಯಲ್ಲಿ ಹಿಂದಿಕ್ಕಿದ್ದರು. ಆ ಬಳಿಕ ಅದಾನಿ ಗ್ರೂಪ್ ನ ವಿವಿಧ ಷೇರುಗಳು ಕುಸಿದ ಪರಿಣಾಮ ಅವರ ಆಸ್ತಿಮೌಲ್ಯ ತುಸು ಕ್ಷೀಣಿಸಿತು. ಈಗ ಮತ್ತೆ ಅವರು ಪುಟ್ಟಿದ್ದಾರೆ. ಭಾರತದ ನಂಬರ್ ಓನ್, ಏಷ್ಯಾದ ನಂಬರ್ ಓನ್ ಶ್ರೀಮಂತ ಎನಿಸಿದ್ದಾರೆ.

ಟಾಪ್-20 ರಲ್ಲಿ ಅಮೆರಿಕ ಕಾರುಬಾರು

ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ನಲ್ಲಿ ವಿಶ್ವದ ಅತ್ಯಂತ ಶ್ರೀಮಂತ 500 ಮಂದಿಯ ಪಟ್ಟಿ ಇದೆ. ಇದರಲ್ಲಿ ಟಾಪ್-20ಯಲ್ಲಿ 15 ಮಂದಿ ಅಮೆರಿಕನ್ನರೇ ಇದ್ದಾರೆ. ಫ್ರಾನ್ಸ್, ಮೆಕ್ಸಿಕೋ ಮತ್ತು ಸ್ಪೇನ್ ದೇಶದ ಒಬ್ಬೊಬ್ಬರು ಈ ಪಟ್ಟಿಯಲ್ಲಿದ್ದಾರೆ. ಭಾರತದವರು ಇಬ್ಬರಿದ್ದಾರೆ.

ಇದನ್ನೂ ಓದಿ: ಅಮೆರಿಕದ ನಿಷೇಧದ ನಡುವೆಯೂ ತೈಲ ಖರೀದಿ ಮುಂದುವರಿಸಲು ಭಾರತ

ಇಲಾನ್ ಮಾಸ್ಕ್ 656 ಬಿಲಿಯನ್ ಡಾಲರ್‌ನೊಂದಿಗೆ ವಿಶ್ವದ ನಂಬರ್ ಒನ್ ಶ್ರೀಮಂತನೆಂಬ ದಾಖಲೆಯನ್ನು ಮುಂದುವರಿಸಿದ್ದಾರೆ. ಲ್ಯಾರಿ ಪೇಜ್‌ನಿಂದ ಹಿಡಿದು ಲ್ಯಾರಿ ಎಲಿಸನ್‌ವರೆಗೆ ಐವರು ಶ್ರೀಮಂತರು 200 ಬಿಲಿಯನ್ ಡಾಲರ್‌ಗೂ ಹೆಚ್ಚಿನ ನಿವ್ವಳ ಆಸ್ತಿ.

ಬ್ಲೂಮ್ಬರ್ಗ್ ಇಂಡೆಕ್ಸ್; ವಿಶ್ವದ ಟಾಪ್-10 ಶ್ರೀಮಂತರು

  1. ಇಲಾನ್ ಮಾಸ್ಕ್: 656 ಬಿಲಿಯನ್ ಡಾಲರ್
  2. ಲ್ಯಾರಿ ಪೇಜ್: 286 ಬಿಲಿಯನ್ ಡಾಲರ್
  3. ಜೆಫ್ ಬೇಜೋಸ್: 269 ಬಿಲಿಯನ್ ಡಾಲರ್
  4. ಸೆರ್ಗೆ ಬ್ರಿನ್: 266 ಬಿಲಿಯನ್ ಡಾಲರ್
  5. ಮಾರ್ಕ್ ಜುಕರ್ಬರ್ಗ್: 239 ಬಿಲಿಯನ್ ಡಾಲರ್
  6. ಲ್ಯಾರಿ ಎಲಿಸನ್: 230 ಬಿಲಿಯನ್ ಡಾಲರ್
  7. ಮೈಕೆಲ್ ಡೆಲ್: 170 ಬಿಲಿಯನ್ ಡಾಲರ್
  8. ಜೆನ್ಸೆನ್ ಹುವಾಂಗ್: 164 ಬಿಲಿಯನ್ ಡಾಲರ್
  9. ಬರ್ನಾರ್ಡ್ ಆರ್ನಾಲ್ಟ್: 164 ಬಿಲಿಯನ್ ಡಾಲರ್
  10. ಜಿಮ್ ವಾಲ್ಟನ್: 150 ಬಿಲಿಯನ್ ಡಾಲರ್

ಇದನ್ನೂ ಓದಿ: ಜಾಗತಿಕ ರಾಜಕೀಯದಲ್ಲಿ ಬದಲಾದ ಲೆಕ್ಕಾಚಾರ, ಪಾಕಿಸ್ತಾನ ಭೇಟಿಗೆ ಇರಾನ್ ಒಪ್ಪಂದದ ಷರತ್ತು ವಿಧಿಸಿದ ಟ್ರಂಪ್

ಬ್ಲೂಮ್ಬರ್ಗ್ ಇಂಡೆಕ್ಸ್ನಲ್ಲಿ 23 ಮಂದಿ ಭಾರತೀಯರು

  1. ಗೌತಮ್ ಅದಾನಿ: 19ನೇ ಸ್ಥಾನ
  2. ಮುಕೇಶ್ ಅಂಬಾನಿ: 20ನೇ ಸ್ಥಾನ
  3. ಲಕ್ಷ್ಮೀ ಮಿತ್ತಲ್: 62ನೇ ಸ್ಥಾನ
  4. ಶಿವ ನಾದರ್: 70ನೇ ಸ್ಥಾನ
  5. ಶಾಪೂರ್ ಮಿಸ್ತ್ರಿ ಕುಟುಂಬ: 71ನೇ ಸ್ಥಾನ
  6. ಸಾವಿತ್ರಿ ಜಿಂದಾಲ್: 73ನೇ ಸ್ಥಾನ
  7. ಸುನಿಲ್ ಮಿಟ್ಟಲ್ ಕುಟುಂಬ: 101ನೇ ಸ್ಥಾನ
  8. ದಿಲೀಪ್ ಶಾಂಘವಿ: 107ನೇ ಸ್ಥಾನ
  9. ಅಜೀಂ ಪ್ರೇಮ್ಜಿ: 119ನೇ ಸ್ಥಾನ
  10. ಕುಮಾರ್ ಬಿರ್ಲಾ: 120ನೇ ಸ್ಥಾನ
  11. ರಾಧಾಕೃಷ್ಣ ದಮಾನಿ: 147ನೇ ಸ್ಥಾನ
  12. ಉದಯ್ ಕೋಟಕ್: 219ನೇ ಸ್ಥಾನ
  13. ಸೈರಸ್ ಪೂನಾವಾಲ: 232ನೇ ಸ್ಥಾನ
  14. ಕೆಪಿ ಸಿಂಗ್: 281ನೇ ಸ್ಥಾನ
  15. ವಿಕ್ರಮ್ ಲಾಲ್: 282ನೇ ಸ್ಥಾನ
  16. ರವಿ ಜೈಪುರಿಯಾ: 293ನೇ ಸ್ಥಾನ
  17. ಮುರಳಿ ದಿವಿ: 370ನೇ ಸ್ಥಾನ
  18. ನುಸ್ಲಿ ವಾಡಿಯಾ: 386ನೇ ಸ್ಥಾನ
  19. ಸಮೀರ್ ಮೆಹತಾ: 433ನೇ ಸ್ಥಾನ
  20. ಪಂಕಜ್ ಪಟೇಲ್: 447ನೇ ಸ್ಥಾನ
  21. ರಾಹುಲ್ ಭಾಟಿಯಾ: 451ನೇ ಸ್ಥಾನ
  22. ಸುಧೀರ್ ಮೆಹತಾ: 456ನೇ ಸ್ಥಾನ
  23. ಇಂದರ್ ಜೈಸಿಂಘಾನಿ: 466ನೇ ಸ್ಥಾನ

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *