ಪ್ರಾತಿನಿಧಿಕ ಚಿತ್ರಚಿತ್ರ ಕ್ರೆಡಿಟ್ ಮೂಲ: indianexpress
ಬೆಂಗಳೂರು, ಏಪ್ರಿಲ್ 17: ಕೂಲ್ ಸಿಟಿ ಎಂದು ಕರೆಸಿಕೊಳ್ಳುವ ರಾಜಧಾನಿ ಬೆಂಗಳೂರು (ಬೆಂಗಳೂರು) ಸದ್ಯ ಹಾಟ್ ಸಿಟಿಯಾಗಿ (ಉಷ್ಣ ಅಲೆ) ಬದಲಾಗಿದೆ. ಸೆಕೆ ಜೊತೆಗೆ ಏರಿಕೆಯಾಗುತ್ತಿರುವ ತಾಪಮಾನಕ್ಕೆ ಸಿಟಿ ಜನ ಶಾಪ್ ಹಾಕುವುದಕ್ಕೆ ಶುರುವಾಗಿದೆ. ಅದರಲ್ಲೂ ಮಕ್ಕಳು, ವೃದ್ಧರು ಹಾಗೂ ಗರ್ಭಿಣಿಯರು ಎಚ್ಚರಿಕೆಯಿಂದ ಇರುವಂತೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
ಗರ್ಭಿಣಿಯರು, ಮಕ್ಕಳ ಬಗ್ಗೆ ಎಚ್ಚರ
ಬೆಂಗಳೂರಿನಲ್ಲಿ ಇಂದು 36ರ ಗರಿಷ್ಠ ತಾಪಮಾನ ದಾಖಲಾಗಿದೆ. ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿರುವ ರಾಜಧಾನಿಯ ವಾತಾವರಣ ಬೆಂಗಳೂರಿಗರನ್ನ ಹೈರಾಣಾಗಿದೆ. ಮುಂಜಾನೆ ಸೂರ್ಯನ ಉದಯವಾಗುತ್ತಿದ್ದಂತೆ ಬಿರುಬಿಸಿಲು, ರಾತ್ರಿ ಆದರೆ ಬಿಸಿ ಗಾಳಿ, ಈ ವರ್ಷದ ತಾಪಮಾನ ಹಾಗೂ ಸೆಕೆಯಿಂದ ಜನರು ಕಂಗಾಲಾಗಿದ್ದರೆ ಗರ್ಭಿಣಿಯರು, ವೃದ್ಧರು, ಮಕ್ಕಳ ವೈದ್ಯರು ತುಸು ಎಚ್ಚರಗೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಬಿಸಿಲ ಝಳದಿಂದ ತತ್ತರಿಸಿದ ಜನತೆ: ಇನ್ನೂ 3 ದಿನ ಉಷ್ಣ ಅಲೆ, ಬೆಂಗಳೂರಿಗೂ ತಟ್ಟಲಿದೆ ತಾಪಮಾನ ಬಿಸಿ
ಕೂಲ್ ಕೂಲ್ ಸಿಟಿಗೆ ಈಗ ವೆದರ್ ಟ್ರಬಲ್ ಶುರುವಾಗಿದೆ. ಬಿಸಿಲಿನ ಎಫೆಕ್ಟ್ ಜನರ ಆರೋಗ್ಯಕ್ಕೆ ಸಂಕಷ್ಟ ತರುತ್ತಿದೆ. ವೃದ್ಧರು, ಮಕ್ಕಳು ಹಾಗೂ ಗರ್ಭಿಣಿಯರಿಗೆ ತೊಂದರೆ ಕೊಡುತ್ತಿದೆ. ಹೀಗಾಗಿ ಸಿಟಿಯ ಆಸ್ಪತ್ರೆಗಳಲ್ಲಿ ನಿತ್ರಾಣ, ನಿರ್ಜಲೀಕರಣ , ಚರ್ಮದ ಅಲರ್ಜಿ ಮತ್ತು ಅಜೀರ್ಣ ಸೇರಿದಂತೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ.
ಆರೋಗ್ಯ ಇಲಾಖೆಯ ಮಾರ್ಗಸೂಚಿ ಏನು?
ಇನ್ನು ಆರೋಗ್ಯ ಇಲಾಖೆಯಿಂದ ಸೂಚಿಸಲಾಗಿದೆ. ತಾಪಮಾನ ಇಳಿಕೆಯವರೆಗೂ ಅಂದರೆ 11 ರಿಂದ 4 ಗಂಟೆಯವರೆಗೆ ಬಿಸಿಲಿಗೆ ಮೈ ಒಡ್ಡಲು ಸಲಹೆ ಸೂಚನೆ. ಇನ್ನು ಹೈ ಬಿಪಿ, ಹೃದಯ ಸಂಬಂಧಿ ಖಾಯಿಲೆ ಇರುವವರು ಗರ್ಭಿಣಿಯರು, ವೃದ್ಧರು ಮತ್ತು ಮಕ್ಕಳು ರಣ ಬಿಸಿಲಿಗೆ ಮೈ ಒಡ್ಡದಂತೆ ಎಚ್ಚರಿಕೆ ನೀಡುತ್ತಾರೆ.
ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಿಷ್ಟು
ಬಿಸಿ ಗಾಳಿ ಬೀಸುವ ಪ್ರದೇಶಗಳ ಬಗ್ಗೆ ಗಮನ ಹರಿಸಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಹೀಟ್ ವೆವ್ ಎಚ್ಚರಿಕೆ ಇದೆ. ಈ ತಿಂಗಳು ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ. ಹೀಗಾಗಿ ಸೂಕ್ತ ಎಚ್ಚರಿಕೆ ವಹಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಇದನ್ನೂ ಓದಿ: ಬಿಸಿಲಿನ ಬೇಗೆಗೆ ಬೆಂದ ಕರ್ನಾಟಕ: ಬೆಂಗಳೂರು ಸೇರಿ ವಿವಿಧೆಡೆ ಹೀಟ್‌ವೇವ್ ಎಚ್ಚರಿಕೆ
ತಾಪಮಾನ ಏರಿಕೆಯಿಂದ ನಿರ್ಜಲೀಕರಣ ಹಾಗೂ ಸಮಸ್ಯೆ ಎದುರಾಗುವ ಸಮಸ್ಯೆ, ದೇಹ ಹೈಡ್ರೇಟ್ ಆಗಿ ಇಟ್ಟುಕೊಳ್ಳುವಂತೆ ಸೂಚಿಸಲಾಗಿದೆ. ಹೀಗಾಗಿ ಸಿಲಿಕಾನ್ ಸಿಟಿ ಜನರ ದೇಹದ ಉಷ್ಣತೆಯನ್ನು ಚೆನ್ನಾಗಿ ಇಟ್ಟುಕೊಳ್ಳಬೇಕಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.