ಬೆಂಗಳೂರು, (ಏಪ್ರಿಲ್ 17): ಇದೇ ಜೂನ್ 30ರೊಳಗೆ ಗ್ರೇಟರ್ ಬೆಂಗಳೂರು ಪ್ರದೇಶದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ (GBA ಚುನಾವಣೆ) ನಡೆಸುವಂತೆ ಸೂಚಿಸಿದೆ. ಆದರೆ, ಇದೀಗ ರಾಜ್ಯ ಸರ್ಕಾರ (ಕರ್ನಾಟಕ ಸರ್ಕಾರ)ನಾನಾ ಕಾರಣಗಳನ್ನು ನೀಡಿ ಜಿಬಿಎ ಚುನಾವಣೆ ಅವಧಿಯನ್ನು ಮುಂದೂಡುವಂತೆ ಮನವಿ ಮಾಡಿದೆ. ಈ ಸಂಬಂಧ ಸಿದ್ದರಾಮಯ್ಯ ಸರ್ಕಾರ, ರಾಜ್ಯ ಚುನಾವಣಾ ಆಯೋಗಕ್ಕೆ (ಕರ್ನಾಟಕ ಚುನಾವಣಾ ಆಯೋಗ) ಪತ್ರ ಬರೆದಿದ್ದು, ಜನಗಣತಿ ಕಾರಣ ಮುಂದಿಟ್ಟು ಸೆಪ್ಟೆಂಬರ್ 30ರ ವರೆಗೆ ವಿಸ್ತರಣೆಗೆ ಮನವಿ ಮಾಡಿದೆ.
ಸರ್ಕಾರ ಬರೆದ ಪತ್ರದಲ್ಲೆನಿದೆ?
ಜನಗಣತಿ ಕಾರ್ಯದಲ್ಲಿ ಇಡೀ ಆಡಳಿತ ಯಂತ್ರ ತೊಡಗಿಸಿಕೊಂಡಿದೆ. ಜನಗಣತಿಯನ್ನು ಸಮಯಕ್ಕೆ ಸೀಮಿತವಾಗಿ ಮುಗಿಸಬೇಕು . ಎಣಿಕೆ ಮೇಲ್ವಿಚಾರಣೆ, ತರಬೇತಿ ಮತ್ತು ಲಾಜಿಸ್ಟಿಕ್ಸ್ಗಾಗಿ ವ್ಯಾಪಕ ಸಿಬ್ಬಂದಿಯನ್ನು ನಿಯೋಜಿಸಬೇಕಾಗಿದೆ. ಪ್ರಾಥಮಿಕ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದ ಪೂರ್ವಸಿದ್ಧತಾ ಕಾರ್ಯಗಳಿಗೆ ಸೀಮಿತ ಅವಕಾಶವಿದೆ. ಮತದಾರರ ಪಟ್ಟಿಯ ವಿಶೇಷ ವರಿಷ್ಕರಣ (SIR) ಸಹ ಏಕಕಾಲದಲ್ಲಿ ಕೈಗೊಳ್ಳುವ ನಿರೀಕ್ಷೆಯಿದೆ. ಇದಕ್ಕೆ ಅದೇ ಕ್ಷೇತ್ರ ಮಟ್ಟದ ಕಾರ್ಯನಿರ್ವಾಹಕರನ್ನು ವೀಕ್ಷಿಸಲು . ಮೇ-ಜೂನ್ ಅವಧಿಯಲ್ಲಿ ಶೈಕ್ಷಣಿಕ ಪರೀಕ್ಷಾ ಕರ್ತವ್ಯಗಳಿಗೆ ಸಿಬ್ಬಂದಿಯನ್ನು ನಿಯೋಜಿಸಬೇಕು. ಇದರಿಂದ ಮಾನವಶಕ್ತಿ ಮತ್ತಷ್ಟು ಕಡಿಮೆ ಆಗುವ ಸಾಧ್ಯತೆಯಿದೆ. ಈ ಒಳಗೊಂಡಿದ್ದು, ಗ್ರೇಟರ್ ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಸಿದ್ಧತೆಯನ್ನು ಸಮರ್ಪಕವಾಗಿ ನಡೆಸಲು ಸಮಯಾವಕಾಶ, ಚುನಾವಣಾ ಕಾಲಮಿತಿಯನ್ನು ಸೆಪ್ಟೆಂಬರ್ 30, 2026 ರವರೆಗೆ ವಿಸ್ತರಿಸಲಾಗಿದೆ ಎಂದು ಸರ್ಕಾರ, ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿಗೆ ಪತ್ರ ಬರೆದು ಮನವಿ ಮಾಡಿದೆ.
ಇದನ್ನೂ ನೋಡಿ: ಜಿಬಿಎ ಚುನಾವಣೆ: ಹೈಕಮಾಂಡ್ ಅಂಗಳದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಭವಿಷ್ಯ?
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಯನ್ನು ಜೂನ್ ಅಂತ್ಯದೊಳಗೆ ಮುಗಿಸಬೇಕು ಎಂದು ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಈ ಹಿಂದೆ ನಿರ್ದೇಶನ ನೀಡಿತ್ತು. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಬರುವ ಐದು ನಗರ ಪಾಲಿಕೆಗಳ ಚುನಾವಣಾ ಪ್ರಕ್ರಿಯೆ ಜೂನ್ 30 ರೊಳಗೆ ಪೂರ್ಣಗೊಳಿಸುವಂತೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು ಗಡುವು ವಿಧಿಸಿ ಆದೇಶ ಹೊರಡಿಸಿತು. ಕೋರ್ಟ್ ಆದೇಶ ಹಿನ್ನಲೆ ಚುನಾವಣೆಗೆ ಅರ್ಜಿಗಳನ್ನು ಸರ್ಕಾರ ಮುಗಿಸಿದ್ದು, ಚುನಾವಣೆ ನಡೆಸುವ ಸಂಬಂಧ ಆಯೋಗವು ಸಹ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ, ಇದೀಗ ರಾಜ್ಯ ಸರ್ಕಾರ ಏಕಾಏಕಿ, ಚುನಾವಣೆಯನ್ನು ಮುಂದೂಡಲಾಗಿದೆ ಎಂದು ಪತ್ರ ಬರೆದಿದೆ.
ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಕೊನೆಯ ಬಾರಿಗೆ ಆಗಸ್ಟ್ 2015ರಲ್ಲಿ ನಡೆದಿತ್ತು. ಇದರ ಅವಧಿ ಸೆಪ್ಟೆಂಬರ್ 2020 ರಲ್ಲಿ ಕೊನೆಗೊಂಡಿತ್ತು. ಅದಾದ ಬಳಿಕ ಇಲ್ಲಿವರೆಗೂ ಚುನಾವಣೆ ನಡೆದಿಲ್ಲ. ಇದೀಗ ಮತ್ತೆ ರಾಜ್ಯ ಚುನಾವಣೆಯನ್ನು ಮುಂದೂಡುವಂತೆ ಮನವಿ ಮಾಡಿದ್ದು, ಇದಕ್ಕೆ ರಾಜ್ಯ ಚುನಾವಣಾ ಆಯೋಗವು ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂದು ಸರ್ಕಾರವು ಕಾದುನೋಡಬೇಕಿದೆ.