
ಕೊಪ್ಪಳದಲ್ಲಿನ ಹಿಂದು-ಮುಸ್ಲಿಂ ಪ್ರೇಮ ಪ್ರಕರಣಕ್ಕೆ ಲವ್ ಜಿಹಾದ್ ಪಟ್ಟ ಕಟ್ಟಲಾಗುತ್ತಿದ್ದು, ಇದು ರಾಜಕೀಯ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಎಲ್ಲಾ ಪ್ರೇಮ ಪ್ರಕರಣಗಳು ಲವ್ ಜಿಹಾದ್ ಅಲ್ಲ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದ್ದಾರೆ.
ಕೊಪ್ಪಳ: ಹಿಂದು-ಮುಸ್ಲಿಂ ಲವ್ ಪ್ರಕರಣಗಳೆಲ್ಲ ಲವ್ ಜಿಹಾದ್‌ಗಳಲ್ಲ. ಬಿಜೆಪಿಯವರಿಗೆ ಮಾಡುವುದಕ್ಕೆ ಬೇರೆ ಕೆಲಸ ಇಲ್ಲ, ಸುಮ್ಮನೇ ಆರೋಪ ಮಾಡುತ್ತಾರೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮುಖಂಡ ಡಾ. ಬಸವರಾಜ ಕ್ಯಾವಟರ್ ಏನೇನೋ ಆರೋಪ ಮಾಡುವುದಲ್ಲ, ಕಾಂಗ್ರೆಸ್ ಪಕ್ಷಕ್ಕೂ ಪ್ರಕರಣಕ್ಕೂ ಏನು ಸಂಬಂಧ ಇದೆ? ಸುಮ್ಮನೆ ಎಲ್ಲದಕ್ಕೂ ಕಾಂಗ್ರೆಸ್ ದೂರುವುದಲ್ಲ. ಹಾಗೊಂದು ವೇಳೆ ಅವರಿಗೆ ಕಾಳಜಿ ಇದ್ದರೆ ಪೊಲೀಸ್ ಠಾಣೆಯಲ್ಲಿ ಇಂಥ ನೂರಾರು ಪ್ರಕರಣಗಳು ಇದ್ದು, ಪಂಚಾಯಿತಿ ಮಾಡಲಿ ಎಂದು ಕುಟುಕಿದರು.
ಆತನ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವಾಗಲಿ
ತಪ್ಪು ಮಾಡಿದರೆ ಪೊಲೀಸರು ಕ್ರಮ ವಹಿಸುತ್ತಾರೆ. ಅವರು ಯಾರನ್ನೂ ಕೇಳುವುದಿಲ್ಲ. ಆರೋಪಿ ಗಾಂಜಾ, ಚರಸ್ ಮತ್ತು ಮಟ್ಕಾ ದಂಧೆಯಲ್ಲಿದ್ದರೆ ಆತನ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವಾಗಲಿ. ನಾವು ಇಂಥ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಹೇಳಿದ್ದೇವೆ ಎಂದರು.
ಸಚಿವ ಸಂಪುಟ ಪುನರ್ ರಚನೆಗೂ ಮತ್ತು ಹಲವರು ಸಚಿವ ಸ್ಥಾನ ಕೇಳುತ್ತಿರುವುದಕ್ಕೂ ಸಿಎಂ ಬದಲಾವಣೆಗೂ ಯಾವುದೇ ಸಂಬಂಧವೇ ಇಲ್ಲ. ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿರುತ್ತಾರೆ. ಈ ಹಿಂದೆಯೂ ಹೇಳಿದ್ದೇನೆ, ಈಗಲೂ ಹೇಳುತ್ತೇನೆ ಎಂದರು.
ಲವ್ ಜಿಹಾದ್ ಹಿಂದೆ ಕಾಂಗ್ರೆಸ್: ಕ್ಯಾವಟರ್ ಗಂಭೀರ ಆರೋಪ
ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ಮುಸ್ತಫಾ ಖಾದ್ರಿ ನಡೆಸುತ್ತಿರುವ ಲವ್ ಜಿಹಾದ್ ಹಿಂದೆ ಕಾಂಗ್ರೆಸ್ ಹಾಗೂ ರಾಜ್ಯ ಸರ್ಕಾರ ನೇರವಾಗಿ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಕಾರಕಾರಿಣಿ ಸದಸ್ಯ ಬಸವರಾಜ ಕ್ಯಾವಟರ್ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಹಿಂದೂ ಯುವತಿಯರನ್ನು ಗುರಿಯಾಗಿಸಿ ಲವ್ ಜಿಹಾದ್ ಖೆಡ್ಡಾಕ್ಕೆ ಕೆಡವಲಾಗುತ್ತಿದೆ. ಪ್ರೀತಿಯ ಹೆಸರಲ್ಲಿ ಬಲೆಗೆ ಬಿಳಿಸಿಕೊಂಡು ಯುವತಿಯರ ಜೀವನ ಹಾಳು ಮಾಡುವ ದಂಧೆ ಬೇರೂರಿದೆ. ಕಳೆದೊಂದು ವಾರದಲ್ಲಿ ಹುಬ್ಬಳ್ಳಿಯಲ್ಲಿ ಮೂರು ಹಾಗೂ ಕೊಪ್ಪಳದಲ್ಲಿ ಒಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಇಂತಹ ಪ್ರಕರಣ ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಈ ಮೂಲಕ ಕಾಂಗ್ರೆಸ್ ನಾಯಕರ ಕೃಪಾ ಕಟಾಕ್ಷದಿಂದಲೇ ಲವ್ ಜಿಹಾದ್ ಪ್ರಕರಣ ನಡೆಯುತ್ತಿವೆ ಎಂದು ಹೇಳಿದರು.
Scroll to load tweet…
ಇದನ್ನೂ ಓದಿ: ಈಡೇರಿದ ಪ್ರಾರ್ಥನೆ; ಪತಿಯೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದ ಗಾಯಕಿ ಸುಹಾನಾ ಸೈಯದ್
ಸಾಕಷ್ಟು ಸಾಕ್ಷ್ಯಾಧಾರಗಳಿದ್ದರೂ ಪೊಲೀಸರು ಕಾಂಗ್ರೆಸ್ ಸಂಸದ-ಶಾಸಕರ ಒತ್ತಡಕ್ಕೆ ಮಣಿದು ಆತನನ್ನು ಬಂಧಿಸಿಲ್ಲ ಎಂದು ಕಾಣುತ್ತಿದೆ. ಹೀಗಾಗಿ ಹಿಂದೂ ಯುವತಿಯರು ಇನ್ನಾದರೂ ಜಾಗೃತಗೊಳ್ಳಬೇಕು. ಇಂತಹ ಲವ್ ಜಿಹಾದ್ ಷಡ್ಯಂತ್ರಕ್ಕೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳಬಾರದು. ಅಲ್ಲದೆ, ಇಂತಹ ವಿಚಾರದಲ್ಲಿ ಮತ ಬ್ಯಾಂಕ್‌ಗೋಸ್ಕರ ಕಾಂಗ್ರೆಸ್ ಸರ್ಕಾರ ತುಷ್ಟೀಕರಣ ನೀತಿ ಅನುಸರಿಸುವುದು ಸರಿಯಲ್ಲ ಎಂದು ಕಿಡಿಕಾರಿದರು. ಲವ್ ಜಿಹಾದ್ ನಡೆಸುತ್ತಿರುವ ಆರೋಪಿಗಳ ವಿರುದ್ಧ ಕೂಡಲೇ ಕ್ರಮಕೈಗೊಳ್ಳಬೇಕೆಂದು ಬಸವರಾಜ ಕ್ಯಾವಟರ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಗಂಡ ರೇ* ಮಾಡ್ತಿದ್ರೆ, ಹೊರಗೆ ಕಾವಲು ಕಾಯ್ತಿದ್ದ ಬ್ಯುಟಿ ಪಾರ್ಲರ್ ಆಂಟಿ ಯಾಸ್ಮೀನ್
Scroll to load tweet…