ಬೆಂಗಳೂರು, ಡಿ.13: ಬೆಂಗಳೂರಿನಲ್ಲಿ (ಬೆಂಗಳೂರು )ಅತೀ ಹೆಚ್ಚು ಅಕ್ರಮ ಸಂಬಂಧ ಪ್ರಕರಣಗಳು ಎಂದು ಇತ್ತೀಚೆಗೆ ಗ್ಲೀಡನ್ ನೀಡಿದ ವರದಿಯಲ್ಲಿ ಹೇಳಲಾಗಿದೆ. ಅಕ್ರಮ ಸಂಬಂಧದಲ್ಲಿ ದೇಶದಲ್ಲೇ ಬೆಂಗಳೂರು ನಂಬರ್ ಒನ್ ಎಂದು ಈ ವರದಿ ಹೇಳಿದೆ. ಇದೀಗ ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನಲ್ಲಿ ಅಕ್ರಮ ಸಂಬಂಧ ಪ್ರಕರಣವೊಂದು ಇದೆ. ಇದು ಬೇರೆ ಬೇರೆ ಜಿಲ್ಲೆಗಳಲ್ಲಿ ಅಕ್ರಮ ಸಂಬಂಧದ ಗಾಳಿ ಬಿಸಿದೆ. 12 ವರ್ಷದ ಮಗ ಇದ್ರೂ ಗೃಹಣಿಯೊಬ್ಬಳು ಪೊಲೀಸಪ್ಪನ ಜೊತೆ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಮೈಸೂರು ಮೂಲದ ಮೋನಿಕಾ ಎಂಬ ಮಹಿಳೆ ಉತ್ತರ ಕರ್ನಾಟಕ ಮೂಲದ ಪೊಲೀಸ್ ಕಾನ್ ಟೇಬಲ್ ರಾಘವೇಂದ್ರನ ಜೊತೆಗೆ ಪರಾರಿಯಾಗಿದ್ದಾಳೆ.
ಈ ಹಿಂದೆ ಮೋನಿಕಾ ಎರಡು ಮದುವೆಯಾಗಿದ್ದು, ಇದೀಗ ಪೊಲೀಸ್ ಕಾನ್ ಟೇಬಲ್ ಜೊತೆಗೆ ಸಂಬಂಧ ಹೊಂದಿದ್ದಾಳೆ ಎಂದು ಹೇಳಲಾಗಿದೆ. ಮೊದಲನೇ ಗಂಡನ ಬಿಟ್ಟು, ಎರಡನೇ ಮದುವೆಯಾಗಿದ್ದ ಮೋನಿಕಾ, ಸ್ವಲ್ಪ ದಿನ ಸಂಸಾರ ನಡೆಸಿ, ಇದೀಗ ಎರಡನೇ ಗಂಡನಿಗೂ ಕೈಕೊಟ್ಟಿದ್ದಾಳೆ. ಜೂನ್ ನಲ್ಲಿ ಹೆಚ್ ಎಸ್ ಆರ್ ಠಾಣೆ ಹೊಯ್ಸಳ ಡ್ರೈವರ್ ರಾಘವೇಂದ್ರ ಮತ್ತು ಮೋನಿಕಾ ಇನ್ಸ್ಟಾಗ್ರಾಮ್ ನಲ್ಲಿ ಪರಿಚಯ ಮಾಡಿಕೊಂಡಿದ್ದಾರೆ. ಪರಿಚಯದ ನಂತರ ಫೋನ್ ನಂಬರ್ ಎಕ್ಸ್ ಚೆಂಜ್ ಮಾಡಿಕೊಂಡು, ಪ್ರತಿದಿನ ಮಾತನಾಡುತ್ತಾ ಎಂದು ಹೇಳಲಾಗಿದೆ. ಈ ಸಲುಗೆ ಇಬ್ಬರ ನಡುವೆ ಪ್ರೀತಿಗೆ ತಿರುಗಿದೆ. ಮೂರು ತಿಂಗಳ ನಂತರ ಮೋನಿಕಾ ಎರಡನೇ ಗಂಡನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ನನ್ನ ಜೀವನ ರೂಪಿಸಿಕೊಳ್ಳಲು ನಾನು ಹೋಗ್ತಾ ಇದ್ದೀನಿ ನನ್ನ ಗಂಡನ ಕರೆಸಿ ಬುದ್ದಿ ಹೇಳಿ ಎಂದು ದೂರಿನಲ್ಲಿ ಹೇಳಿದ್ದಾಳೆ.
ಇದನ್ನೂ ಓದಿ: ಅಕ್ರಮ ಸಂಬಂಧದಲ್ಲಿ ಬೆಂಗಳೂರು ಫಸ್ಟ್; ಗ್ಲೀಡನ್ ವರದಿಯಲ್ಲಿ ಬಹಿರಂಗ
ಮೋನಿಕಾ ದೂರು ನೀಡಿದ ಬೆನ್ನಲ್ಲೇ ಚಂದ್ರಲೇಔಟ್ ಪೊಲೀಸ್ ಗಂಡನಿಗೆ ಕರೆ ಮಾಡಿ ಕರೆಸಿಕೊಂಡಿದ್ದಾರೆ. ಈ ಗಂಡ ಪೊಲೀಸ್ ಠಾಣೆಗೆ ಹೋಗುತ್ತಿದ್ದಂತೆ ಮೋನಿಕಾ ಮನೆಯಿಂದ 160 ಗ್ರಾಂ ಚಿನ್ನಾಭರಣ, 1.80 ಲಕ್ಷ ಹಣದೊಂದಿಗೆ ಎಸ್ಕೇಪ್ ಆಗಿದ್ದಾಳೆ. ಪೊಲೀಸ್ ಠಾಣೆಯಲ್ಲಿದ್ದ ಗಂಡನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ತಕ್ಷಣ ಪೊಲೀಸ್ ಠಾಣೆಯಿಂದಲೇ ಮೋನಿಕಾನಿಗೆ ಫೋನ್ ಮಾಡಿದ್ದಾನೆ. ಆದರೆ ಮೋನಿಕಾ ಫೋನ್ ಎತ್ತಿಲ್ಲ. ಈ ಬಗ್ಗೆ ಅನುಮಾನ ಬಂದು ಮೋನಿಕಾನ ಗಂಡ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಇನ್ನು ಮೋನಿಕಾ ಪೊಲೀಸ್ ಕಾನ್ಸ್ ಟೇಬಲ್ ರಾಘವೇಂದ್ರ ಓಡಿ ಹೋಗಿದ್ದಾಳೆ ಎಂದು ತಿಳಿಯುತ್ತಿದ್ದಂತೆ ಹಿರಿಯ ಅಧಿಕಾರಿಗಳು ರಾಘವೇಂದ್ರನನ್ನು ಸಸ್ಪೆಂಡ್ ಮಾಡಿದ್ದಾರೆ.
ವಿಕಾಸ್
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ